ಶ್ರೀರಾಮ ಸೇನೆಯಿಂದ ವಿಮಾನ ಪತನದಲ್ಲಿ ನಿಧನ ಹೊಂದಿದವರಿಗೆ ರಾಂ-ಅಂಡ್-ಕೋ ಸರ್ಕಲ್ನಲ್ಲಿ 501 ದೀಪಗಳನ್ನು ಬೆಳಗುವ ಮೂಲಕ ಶ್ರದ್ಧಾಂಜಲಿ

ದಾವಣಗೆರೆ: ಸೇನಾಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರ ಕುಟುಂಬ ಸೇರಿ ಅವರೊಂದಿಗೆ ವಿಮಾನ ಪತನದಲ್ಲಿ ನಿಧನ ಹೊಂದಿದ ರಕ್ಷಣಾ ಪಡೆಯ ಮುಖ್ಯಸ್ಥರುಗಳಿಗೆ ಶ್ರೀರಾಮ ಸೇನೆಯಿಂದ ರಾಂ-ಅಂಡ್-ಕೋ ಸರ್ಕಲ್ನಲ್ಲಿ 501 ದೀಪಗಳನ್ನು ಬೆಳಗುವ ಮೂಲಕ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಮಣಿಸರ್ಕಾರ್ ಜಿಲ್ಲಾ ಉಪಾಧ್ಯಕ್ಷ ಆಲೂರು ರಾಜಶೇಖರ್, ರಮೇಶ್, ಸಾಗರ್, ಶಿಬಾರ್ ರಮೇಶ್, ವಿನೋದರಾಜ್ ಡಿ.ಬಿ, ಸುನೀಲ್ ವಾಲಿ, ಬಿ.ಜಿ ರಾಹುಲ್, ರಾಜು, ವಿನೋದ ವರ್ಣೇಕರ್, ಮಹೇಶ್, ಮಾರ್ಕಂಡಯ್ಯ, ರಘು ಮತ್ತಿತರೆ ಕಾರ್ಯಕರ್ತರು ಭಾಗಿಯಾಗಿದ್ದರು.