ದುಡಾ ಮುಂದೆ ಶ್ರೀರಾಮ ಸೇನೆ ಪ್ರತಿಭಟನೆ.! 2017 ರಲ್ಲಿ ಅಕ್ರಮ ನಿವೇಶನ ಹಂಚಿಕೆ ಆರೋಪ.!

IMG_20211116_121007

ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ 2017 ನೇ ಇಸ್ವಿಯಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವುದಾಗಿ ಆರೋಪಿಸಿ ನಗರದ ದೂಡಾ ಕಚೇರಿ ಆವರಣದಲ್ಲಿಂದು ಶ್ರೀರಾಮ ಸೇನಾ ದಾವಣಗೆರೆ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ನಂತರ ಬೆಂಗಳೂರಿನ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರಿಗೆ ದೂಡಾ ಆಯುಕ್ತರ ಮೂಲಕ ಮನವಿ ಸಲ್ಲಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ಮಣಿಸರ್ಕಾರ್ ಮಾತನಾಡಿ, ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದವರು 2009 ರಲ್ಲಿ ಅಕ್ರಮವಾಗಿ ನಿವೇಶನ ಹಂಚಿದ್ದರಿಂದ ಶ್ರೀರಾಮ ಸೇನಾ ವತಿಯಿಂದ ಸುಮಾರು 90 ಪ್ರಕರಣಗಳನ್ನು ಸಲ್ಲಿಸಿದ್ದೇವು. ಅವುಗಳು ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿವೆ. ಅದೇ ರೀತಿ 2012 ರಲ್ಲಿ ನಿವೇಶನ ಹಂಚಿಕೆಗಾಗಿ ಪ್ರಕಟಿಸಿದ್ದು, ಅವುಗಳನ್ನು 2017 ರಲ್ಲಿ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿ ಭ್ರಷ್ಟಾಚಾರ ಎಸಲಾಗಿದೆ.

ಈ ಪ್ರಕರಣಗಳಲ್ಲಿ ಎಲ್ಲಾ ರಾಜಕೀಯ ಮತ್ತು ಸರ್ಕಾರಿ ನೌಕರರು ಸುಳ್ಳು ಮಾಹಿತಿ ನೀಡಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಆ ಎಲ್ಲಾ ಪ್ರಕರಣಗಳಲ್ಲಿ ಸ್ವ ಹಿತಾಸಕ್ತಿ ಮತ್ತು ಸ್ವಜನ ಪಕ್ಷಪಾತ, ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಈಗಿನ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನೆ ಶಿವಕುಮಾರ ಮತ್ತು ಅವರ ಸಹೋದರರು ಹಾಗೂ ಅಂದಿನ ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಅವರ ಸಹೋದರರು ಮತ್ತು ಹಿಂದಿನ ಸಚಿವರು ಮತ್ತು ಶಾಸಕರು ಹಾಗೂ ಜಿಲ್ಲಾಧಿಕಾರಿಗಳು, ಆಯುಕ್ತರು , ಅಧಿಕಾರಿಗಳು, ದೂಡ ಸದಸ್ಯರು ಸೇರಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿದರು.

 

ಈ ವಿಚಾರವಾಗಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಜೀ ಅವರು ದಾವಣಗೆರೆಯಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಈ ಪ್ರಕರಣಗಳ ಬಗ್ಗೆ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಮನವಿ ಮಾಡಿದರೂ ಸರ್ಕಾರ ಇಲ್ಲಿಯವರಿಗೂ ಕ್ರಮ ತೆಗೆದುಕೊಂಡಿಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಿ ತಪ್ಪಿಸ್ಥರ ಮೇಲೆ ಮತ್ತು ಅದಕ್ಕೆ ಸಂಬಂದಪಟ್ಟವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಶ್ರೀರಾಮ ಸೇನಾ ನಗರ ಅಧ್ಯಕ್ಷ ಬಿ.ಜಿ. ರಾಹುಲ್, ಜಿಲ್ಲಾ ಉಪಾಧ್ಯಕ್ಷ ಆಲೂರು ರಾಜಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಗರ್, ನಗರ ಉಪಾಧ್ಯಕ್ಷ ರಾಜು, ಶಿಬಾರ್ ರಮೇಶ್, ಶ್ರೀಧರ್, ವಿನೋದ ವರ್ಣೇಕರ್, ಕರಾಟೆ ರಮೇಶ್, ಡಿ.ಬಿ. ವಿನೋದ ರಾಜ್, ಸುನೀಲ್ ವಾಲಿ, ಮಹೇಶ್, ರಘು, ಮಾರ್ಕಂಡೇಯ ಸೇರಿದಂತೆ ಇತರರು ಭಾಗವಹಿಸಿದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!