ಸ್ವತಃ ಸಿದ್ದರಾಮಯ್ಯನೇ ವಲಸಿಗ, ಶೀಘ್ರವೇ ಕಾಂಗ್ರೆಸ್ ಮನೆ ಖಾಲಿ ಆಗಲಿದೆ: ಕಟೀಲು
ದಾವಣಗೆರೆ: ಸ್ವತಃ ಸಿದ್ದರಾಮಯ್ಯನೇ ಜನತಾ ದಳ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದ ವಲಸಿಗ. ಅವರಿಗೆ ಪಕ್ಷಾಂತರದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಇದಲ್ಲದೇ ಶೀಘ್ರವೇ ಕಾಂಗ್ರೆಸ್ ಮನೆ ಖಾಲಿಯಾಗಲಿದೆ ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲು ಹೇಳಿದರು.
ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ಆರ್ಎಂಸಿ ಲಿಂಕ್ ರಸ್ತೆ ಬಳಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ, ಮತದಾರರ ಮನೆಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಚಾಲನೆ ನೀಡಿದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದವರ ಬಗ್ಗೆ ಪ್ರತಿಕ್ರಿಯೆ ನೀಡಿದ ಕಟೀಲು, ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದವರಿಗೆ ಏನು ಕಡಿಮೆ ಮಾಡಿದ್ದೇವೆ, ಅವರ ಜೊತೆ ನಾವು ಇದ್ದೇವೆ. ಕಾಂಗ್ರೆಸ್ ಪಕ್ಷದಿಂದ ಯಾರ್ಯರು ಬಿಜೆಪಿಗೆ ಬರಲಿದ್ದಾರೆ ಎಂದು ಇನ್ನು ಸ್ವಲ್ಪ ದಿನ ಕಾದು ನೋಡಿ. ಕಾಂಗ್ರೆಸ್ ಮನೆ ಖಾಲಿ ಆಗಲಿದ್ದು, ಮುಚ್ಚಿಕೊಂಡು ಹೋಗಲಿದೆ ಎಂದು ಹೇಳಿದರು.
ಸ್ವತಃ ಸಿದ್ದರಾಮಯ್ಯನೇ ಜನತಾ ದಳ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದ ವಲಸಿಗ. ಸಿದ್ದರಾಮಯ್ಯಗೆ ಪಕ್ಷಾಂತರದ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ. ಸಿದ್ದರಾಮಯ್ಯ ಎಲ್ಲಿಂದ ಕಾಂಗ್ರೆಸ್ಗೆ ಬಂದಿದ್ದು ಅಂತಾ ಯೋಜನೆ ಮಾಡಲಿ. ಜೆಡಿಎಸ್ ಪಕ್ಷವನ್ನು ಮುಗಿಸಿ, ದೇವೇಗೌಡ್ರಿಗೆ ದ್ರೋಹ ಮಾಡಿ ಬರಲಿಲ್ವಾ. ಇನ್ನೊಬ್ಬರ ಬಗ್ಗೆ ಮಾತಾಡೋ ಯೋಗ್ಯತೆ ಸಿದ್ದರಾಮಯ್ಯಗೆ ಇಲ್ಲ ಎಂದು ಟಾಂಗ್ ನೀಡಿದರು.
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ವಿಚಾರ ಹುಟ್ಟಿ ಹಾಕಿದ್ದು ಸಿದ್ದರಾಮಯ್ಯ, ಆ ವಿಚಾರವನ್ನು ಮಟ್ಟ ಹಾಕಿ ದಲಿತ ವ್ಯಕ್ಕಿಯನ್ನು ಮುಖ್ಯಮಂತ್ರಿ ಆಗದಂತೆ ನೋಡಿಕೊಂಡಿದ್ದು ಇದೇ ಸಿದ್ದರಾಮಯ್ಯ. ಡಾ.ಜಿ.ಪರಮೇಶ್ವರ್ ಸೋಲಿಸಿ ದಲಿತ ಮುಖ್ಯಮಂತ್ರಿ ಮಟ್ಟ ಸಿಗದಂತೆ ಮಾಡಿದರು ಎಂದರು.
ಮುಂಬರುವ ಚುನಾವಣೆ ನಮ್ಮ ಪಕ್ಷದ ಸವೋಚ್ಛ ನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾರ್ಗದರ್ಶನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಒಟ್ಟಾಗಿ ಎದುರಿಸಲಿದ್ದೇವೆ ಎಂದರು.