ಮಾನವೀಯ ಮೌಲ್ಯಗಳಿಂದ ಧರ್ಮ ನಿಂತಿದೆ: ಸಿದ್ದರಾಮೇಶ್ವರ ಶ್ರೀ

ದಾವಣಗೆರೆ: ಧರ್ಮ ನಿಂತಿರುವುದು ಮಾನವೀಯ ಮೌಲ್ಯಗಳಿಂದ. ಮಾನವ ತನ್ನಲ್ಲಿರುವ ಮಾನವೀಯತೆಯನ್ನು ಉದ್ದಿಪಾನಗೊಳಿಸಿಕೊಂಡಾಗ ಮಹಾಮಾನವತವಾದಿಯಾಗಬಹುದು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ವೆಂಕಭೋವಿ ಕಾಲೋನಿಯಲ್ಲಿರುವ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದಲ್ಲಿ ಆಗಸ್ಟ್ 5ರ ಶ್ರಾವಣ ಮೊದಲನೇ ಸೋಮವಾರ ಜರುಗಲಿರುವ ಶಿವಯೋಗಿ ಸಿದ್ಧರಾಮೇಶ್ವರ ದೇವರ 62ನೇ ರಥೋತ್ಸವ ನಿಮಿತ್ತ ಧರ್ಮಧ್ವಜಾರೋಹಣ ನೇರವೇರಿಸಿ ಮಾತನಾಡಿದ ಪೂಜ್ಯರು ಜಗತ್ತಿನ ಮಾನವ ಸಹಜ ಆಲೋಚನೆ, ಬಾಲ್ಯ ಹಣ್ಣು, ತಾರುಣ್ಯ ಹೆಣ್ಣು, ಸಂಸಾರ ಹೊನ್ನು, ಮುಪ್ಪು ಮಣ್ಣನ್ನು ಬಯಸುತ್ತದೆ. ದಾರ್ಶನಿಕರ ವಿಚಾರಗಳು ಈ ರೀತಿ ಇರದೇ ವಿಭಿನ್ನವಾಗಿರುತ್ತದೆ. ಸಹಾಸ ಸಹಕಾರ, ಸಂಘರ್ಷ, ಸಾಂತ್ವನ ಸಂಯಮದಿಂದ ಕೂಡಿದ ವಿಚಾರಗಳಿಂದ ಜಗತ್ತಿನ ಸರ್ವ ಶ್ರೇಷ್ಠ ಸಾಧಕರ ಪಟ್ಚಿಗೆ ಸೇರುತ್ತಾರೆ.
ಧೈವಿಕ ಶಕ್ತಿಯ ಯಾತ್ರೆ ಜಾತ್ರೆಗಳು ಯಾರಿಂದನ್ನು ನಡೆಯುವುದಿಲ್ಲ ಯಾರಿಂದನ್ನು ನಿಲ್ಲುವುದಿಲ್ಲ. ಕಾರ್ಯದ ನೆಪಕ್ಕೆ ವ್ಯಕ್ತಿಯ ಪ್ರವೇಶವಾಗಿರುತ್ತದೆ. ನಾನು ನನ್ನಿಂದ ಎನ್ನುವ ಅಹಂಕಾರದಿಂದ ಹೊರಬಂದು ನಮ್ಮಿಂದ ಎನ್ನುವ ಸಮಷ್ಟಿ ಪ್ರಜ್ಞೆ ಮೂಡಬೇಕು.
ಹಳೇಬೇರಿನ ಹಿರಿಯರನ್ನು ಹೊಸಚಿಗುರಿನ ಯುವಕರನ್ನು ಸಮಾನವಾಗಿ ಗೌರವಿಸಬೇಕು. ಹಾಗೂ ಕಿರಿಯರ ಉತ್ಸಾಹ ಹಿರಿಯರ ಪ್ರೋತ್ಸಾಹ ಸೇರಿದರೆ ಜಾತ್ರೋತ್ಸವ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಜರುಗುತ್ತದೆ. ಸಮುದಾಯದಲ್ಲಿ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ನಮ್ಮ ಪರಮ ಕರ್ತವ್ಯವಾಗಬೇಕು. ಸಾಮಾರಸ್ಯದ ಮನಸ್ಸುಗಳಲ್ಲಿ ಒಳ್ಳೆಯ ಒಗ್ಗಟ್ಟಿನ ಶಕ್ತಿಯಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಹಾಗೂ ಶ್ರೀ ಪೀಠದ ಧರ್ಮದರ್ಶಿಗಳಾಗಿ ಸಿದ್ದಪ್ಪ ಬಿ ಟಿ, ಜಯಣ್ಣ. ಎಚ್, ಗೋಪಾಲ್ ವಿ, ನಾಗರಾಜ್ ಎ ಬಿ, ಟಿ ಮಂಜುನಾಥ್, ಶ್ರೀನಿವಾಸ್ ಪಿ, ವಿನಾಯಕ್. ಬಿಎನ್, ಡಿ ಬಸವರಾಜ್, ಇಂಜಿನಿಯರ್ ವೆಂಕಟೇಶ್, ಶ್ರೀನಿವಾಸ, ಶಿವಶಂಕರ್ ಶಿಲ್ಪಿ. ಹನುಮಂತ, ಟಿ, ಶ್ರೀಮತಿ ಉಮಾಕುಮಾರ, ರಾಜಣ್ಣ. ಚನ್ನಗಿರಿ, ಅರ್ಜುನ್. ಜಗಳೂರು, ಮಂಜುನಾಥ್ ಜಿ. ಹೊನ್ನಾಳಿ, ರಾಜಣ್ಣ ಚಟ್ನಹಳ್ಳಿ. ಅಂಜಿನಪ್ಪ ಹರಪನಹಳ್ಳಿ, ವೀರಭದ್ರಪ್ಪ. ಹರಿಹರ, ದಿನೇಶ್. ನ್ಯಾಮತಿ, ವೀರೇಶ್ ಬಿ, ಚಾಮರಾಜ. ಎಂ, ವಿನೋದ್ ನಗರ, ಮಂಜುನಾಥ್ ನಲ್ಲಿ, ಪ್ರವೀಣ್, ಸೋಮಶೇಖರ. ಜಿ, ಶೇಖರಪ್ಪ, ಮಂಜಪ್ಪ. ಜಿ, ರವಿಕುಮಾರ್. ಪಿ ಅವರನ್ನು ಆಯ್ಕೆ ಮಾಡಿದರು.