ಸಿದ್ಧಗಂಗಾ ಸಿ.ಬಿ.ಎಸ್.ಇ. 10 ನೇ ತರಗತಿ 100ಕ್ಕೆ 100 ಫಲಿತಾಂಶ ದ್ರುವಕುಮಾರ್ ರೆಡ್ಡಿ ಆರ್. ಶಾಲೆಗೆ ಟಾಪರ್
ದಾವಣಗೆರೆ: ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ 10ನೇ ತರಗತಿ ಸಿ.ಬಿ.ಎಸ್.ಇ. ಫಲಿತಾಂಶ ಪ್ರಕಟವಾಗಿದ್ದು ನಗರದ ಸಿದ್ಧಗಂಗಾ ಶಾಲೆಗೆ 100ಕ್ಕೆ 100 ಫಲಿತಾಂಶ ಬಂದಿದೆ. ಮೋತಿ ವೀರಪ್ಪ ಕಾಲೇಜಿನ ಪ್ರೊಫೆಸರ್ ರವಿಕುಮಾರ್ ಡಿ. ಮತ್ತು ಬಾಡಾ ಕ್ಲಸ್ಟರ್ ಸಿ.ಆರ್.ಪಿ. ಉಷಾ ವಿ.ಸಿ. ಅವರ ಪುತ್ರ ದ್ರುವಕುಮಾರ್ ರೆಡ್ಡಿ ಆರ್. 500ಕ್ಕೆ 474 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಕನ್ನಡ 99, ಇಂಗ್ಲೀಷ್ 86, ಗಣಿತ 96, ವಿಜ್ಞಾನ 95, ಸಮಾಜ 98, ಅಂಕಗಳನ್ನು ಪಡೆದು ಶೇಕಡ 94.80 ಅಂಕಗಳನ್ನು ಗಳಿಸಿದ್ದಾನೆ. ತೇಜಸ್ವಿನಿ ಹೆಚ್.ಎಂ. ದ್ವಿತೀಯ ಸ್ಥಾನ (460), ಲಕ್ಷ್ಮೀ ಎನ್. (458)ತೃತೀಯ ಸ್ಥಾನ, ಸಿರಿ ಸಿ.ಆರ್. (455), ತೇಜಸ್ ಕೆ.ಎ. (451), ಸಿಂಚನ ವಿ. (450) ಅಂಕಗಳನ್ನು ಪಡೆದು ಶೇಕಡ 90ಕ್ಕಿಂತ ಅಧಿಕ ಅಂಕ ಪಡೆದವರಾಗಿದ್ದಾರೆ. 20 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ, 55 ಮಕ್ಕಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಗೆ 100ಕ್ಕೆ 100 ಫಲಿತಾಂಶ ಕೊಟ್ಟಿರುವ ಎಲ್ಲ ಮಕ್ಕಳನ್ನು, ಅವರ ಪಾಲಕರನ್ನು ಸಿದ್ಧಗಂಗಾ ಸಿ.ಬಿ.ಎಸ್.ಇ. ಶಾಲೆಯ ಪ್ರಾಚಾರ್ಯರಾದ ಗಾಯಿತ್ರಿ ಚಿಮ್ಮಡ್ ಅಭಿನಂದಿಸಿದ್ದಾರೆ. ಅತ್ಯುತ್ತಮ ಫಲಿತಾಂಶ ನೀಡಿದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರನ್ನು ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ಕಾರ್ಯದರ್ಶಿ ಡಿ.ಎಸ್. ಹೇಮಂತ್ ಮತ್ತು ನಿರ್ದೇಶಕರಾದ ಡಾ|| ಡಿ.ಎಸ್. ಜಯಂತ್‌ರವರು ಸನ್ಮಾನಿಸಿ ಅಭಿನಂದಿಸಿದರು.