ಒಲಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ: ಪಾಲಿಕೆ ವ್ಯಾಯಾಮ ಶಾಲೆಯಲ್ಲಿ ಸಂಭ್ರಮಾಚರಣೆ

ದಾವಣಗೆರೆ: ಟೋಕಿಯೋ ದಲ್ಲಿ ನಡೆಯತ್ತಿರುವ ಒಲಂಪಿಕ್ ನಲ್ಲಿ ಮಹಿಳಾ ವಿಭಾಗದ ವ್ಹೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಪಡೆದು ದೇಶದ ಪತಾಕೆ ಹಾರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ವ್ಹೇಟ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಮಹಾನಗರ ಪಾಲಿಕೆ ವ್ಯಾಯಾಮ ಶಾಲೆಯ ಆವರಣದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೆಚ್. ಮಹೇಶ್, ಉಪಾಧ್ಯಕ್ಷ ಕರಿಬಸಪ್ಪ, ಎಸ್.ಕೆ. ಪಾಂಡುರಾಜ, ರವಿ, ಹೆಚ್. ಬಸವರಾಜ, ಖಜಾಂಚಿ, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ವ್ಹೇಟ್ ಲಿಫ್ಟರ್ ಗಳಾದ ಸಂತೋಷ್ ಕಾಟೆ, ಅಣ್ಣಪ್ಪ, ಫೋಟೋ ರಘು, ಸಂದೀಪ್, ಕಿಟ್ಟಿ, ಸತೀಶ್, ಸಂದೀಪ್, ರಾಕೇಶ್ ಸೇರಿದಂತೆ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.