Sirigere Swamyji: ಕೆರೆಗೆ ಬಂದ ತುಂಗಭದ್ರಾ | ತರಳುಬಾಳು ಶ್ರೀಗಳಿಗೆ ಜೈಕಾರ ಹಾಕಿದ ಬರಮಸಾಗರ ಸುತ್ತಲಿನ ಗ್ರಾಮಸ್ಥರು

VideoCapture_20210929-202527

 

ದಾವಣಗೆರೆ: ಸಮಾಜದಲ್ಲಿ ಮಠಗಳ, ಮಠಾಧೀಶರ ಕಾರ್ಯಗಳು ಸಾಮಾನ್ಯವಾಗಿ ಆ ಸಮುದಾಯದ ಏಳಿಗೆಗಾಗಿ, ರಕ್ಷಣೆಗಾಗಿ, ಅಭಿವೃದ್ಧಿಗಾಗಿ ಹೋರಾಟ ಮಾಡುವುದು… ಕಾರ್ಯಕ್ರಮಗಳನ್ನು ರೂಪಿಸುವುದೇ ಆಗಿರುತ್ತದೆ ಎಂಬುದು ಎಲ್ಲರ ಅಭಿಪ್ರಾಯ.

ಸಿರಿಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಯೋಜನೆಗಳು ಇದಕ್ಕೆ ವ್ಯತಿರಿಕ್ತ ಎಂದರೆ ತಪ್ಪಾಗಲಾರದು. ಅವರು ಕೇವಲ ನಮ್ಮ ಸಮುದಾಯದ ಜನರ ಅಭಿವೃದ್ಧಿಗೆ ಸೀಮಿತವಾಗದೆ, ಸಮಾಜದ ಎಲ್ಲಾ ಸಮುದಾಯದವರ ಬಗ್ಗೆ ಕಾಳಜಿ ತೋರಿ ಎಲ್ಲರಿಗೂ ಅನುಕೂಲವಾಗಲಿ ಎಂದು ಕೆರೆಗೆ ನೀರು ತುಂಬಿಸುವ ಮೂಲಕ ಕೇವಲ ನಮ್ಮ ಸಮುದಾಯಕ್ಕೆ ಸೀಮಿತವಾಗದೆ ಇಡೀ ಸಮಾಜಕ್ಕೆ ಬೆಳಕಾಗಿದ್ದಾರೆ ಎಂದರೆ ತಪ್ಪಾಗಲಾರದು.

ಈ ಹಿಂದೆ ದಾವಣಗೆರೆಯ 22 ಕೆರೆಯ ಯೋಜನೆ ಕೈಗೆತ್ತಿಕೊಂಡು ಅದನ್ನು ಯಶಸ್ವಿಗೊಳಿಸಿದ ಹೆಗ್ಗಳಿಕೆ, ಉಬ್ರಾಣಿ ಅಮೃತಾಪುರ ಏತ ನೀರಾವರಿ ಯೋಜನೆ ಮೂಲಕ ಚನ್ನಗಿರಿ, ತರೀಕೆರೆ, ಅಜ್ಜಂಪುರ ಸುತ್ತಮುತ್ತಲಿನ ಜನತೆಗೆ ನೀರಿನ ಹೊಳೆ ಹರಿಸಿದ ಇವರು, ಬೇಲೂರು ತಾಲೂಕಿನ ಕೆರೆಗಳಿಗೆ ರಣಗಲ್ಲು ಯೋಜನೆ,ಬ್ಯಾಡಗಿ ತಾಲೂಕಿನ ಏತ ನೀರಾವರಿ ಯೋಜನೆ, ಜಗಳೂರಿನ ಸುತ್ತಮುತ್ತಲಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ವಿಶೇಷವಾಗಿ ಇಂದು ಭರಮಸಾಗರದ ಸುತ್ತಮುತ್ತಲಿನ 42 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಮೂಲಕ ಬರದ ನಾಡಿನ ಭಗೀರಥರದರೂ ಎಂದು ಹೇಳಿದರೆ ತಪ್ಪಾಗಲಾರದು.

ನಮ್ಮ ಗುರುಗಳ ಈ ಕಾರ್ಯದಿಂದ ಎಲ್ಲಾ ಸಮುದಾಯದವರು ಆರ್ಥಿಕವಾಗಿ ಶೈಕ್ಷಣಿಕವಾಗಿ ಮುನ್ನೆಲೆಗೆ ಬರಲು ಸಹಕಾರಿಯಾಗಿದ್ದು, ಇದರಿಂದ ಎಲ್ಲಾ ಸಮುದಾಯದವರಿಗೂ ನಮ್ಮ ಸಮುದಾಯದ ಮೇಲೆ ಗೌರವ ಹೆಚ್ಚಾಗಲು ಕಾರಣವಾಗುತ್ತದೆ ಎಂಬುದು ಸತ್ಯ.

ಪರಮಪೂಜ್ಯರು ನಮ್ಮ ಸಮುದಾಯದ ಹೇಳಿಗೆಯ ಜೊತೆಗೆ ಎಲ್ಲಾ ಸಮುದಾಯದವರು ನಮ್ಮ ಸಮುದಾಯವನ್ನು ಗೌರವದಿಂದ ಕಾಣುವಂತೆ ಮಾಡಿದ್ದಾರೆ. ಇಂತಹ ಗೌರವಾನ್ವಿತ ಸ್ಥಾನವನ್ನು ಸಮಾಜದಲ್ಲಿ ನಮಗೆ ಸಿಗುವಂತೆ ಮಾಡಿದ ಪರಮಪೂಜ್ಯರಿಗೆ ಸಾವಿರ ಪ್ರಣಾಮಗಳು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!