ಹಿರಿಯ ಶ್ರೀಗಳ ಆಶಯಕ್ಕೆ ಧಕ್ಕೆಯಾಗದಂತೆ ಸಿರಿಗೆರೆಯ ಡಾ.ಸ್ವಾಮೀಜಿಗಳು ಪೀಠತ್ಯಾಗ ಮಾಡಬೇಕಿದೆ – ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿ ಒತ್ತಾಯ

IMG-20211107-WA0082

ದಾವಣಗೆರೆ: ಸಿರಿಗೆರೆ ತರಳಬಾಳು ಪೀಠಾಧಿಪತಿಗಳಾದ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಪೀಠತ್ಯಾಗ ಮಾಡಿ, ಪೀಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಬೇಕು ಎಂದು ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿ ಒತ್ತಾಯಿಸಿದೆ‌.

ಸುದ್ದಿಗೋಷ್ಠಿಯಲ್ಲಿ‌ ಭಾನುವಾರ ಸಮಿತಿಯ ಮುಖಂಡರಾದ ಮುದೇಗೌಡ್ರ ವೀರಭದ್ರಪ್ಪ, ವಕೀಲರಾದ ಎಂ.ಸಿದ್ದಯ್ಯ, ಶಾಂತಗಂಗಾಧರ್ ಮತ್ತು ಆನಗೋಡು ನಂಜುಂಡಪ್ಪ ಈ ಬಗ್ಗೆ ಮಾತನಾಡಿ, ಸಮಾಜದ ಬೈಲಾ ಪ್ರಕಾರ 60 ವರ್ಷ ಮೇಲ್ಪಟ್ಟವರು ಪೀಠಾಧಿಪತಿಯಾಗಿ ಮುಂದುವರೆಯುವಂತಿಲ್ಲ. ಇಂದಿನ ಹಾಲಿ ಶ್ರೀಗಳಿಗೆ ಈಗಾಗಲೇ 75 ವರ್ಷ ವಯಸ್ಸಾಗಿದ್ದು, ಹಾಗಾಗಿ, ಹಿರಿಯ ಶ್ರೀಗಳಿಗೆ ಆಶಯಕ್ಕೆ ಧಕ್ಕೆಯಾಗದಂತೆ ಪೀಠತ್ಯಾಗ ಮಾಡಬೇಕಿದೆ ಎಂದವರು ಆಗ್ರಹಿಸಿದರು.

ಹಿಂದಿನ ಶ್ರೀಗಳಾದ ಲಿಂ. ಶಿವಕುಮಾರ ಶಿವಾಚಾರ್ಯರು 50 ನೇ ವಯಸ್ಸಿನಲ್ಲಿ ಪೀಠತ್ಯಾಗ ಮಾಡಿ ಹಾಲಿ ಶ್ರೀಗಳಿಗೆ ಪಟ್ಟ ಕಟ್ಟಿ ವಿಶ್ರಾಂತಿ ಪಡೆದಿದ್ದರು. ಅದರಂತೆ ಈ ಶ್ರೀಗಳು ಉತ್ತರಾಧಿಕಾರಿ ಪಟ್ಟಕಟ್ಟಿ ತಮ್ಮ ಸ್ಥಾನ ತ್ಯಾಗ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಈಗಾಗಲೇ ಶ್ರೀಗಳಿಗೆ ಪೀಠ ತ್ಯಾಗ ಮಾಡುವಂತೆ ನಾಲೈದು ಪತ್ರ ಬರೆದಿದ್ದೇವೆ. ಆದರೆ, ಶ್ರೀಗಳಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಇಲ್ಲ. ಸಮಾಜ ಬಾಂಧವರು ಹಾಗೂ ಭಕ್ತರ ಸಮಕ್ಷಮದಲ್ಲಿ ನೂತನ ಪೀಠಾಧಿಪತಿಗಳನ್ನು ಆಯ್ಕೆಮಾಡಬೇಕು ಎಂದು ಆಗ್ರಹಿಸಿದರು.

ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ೧೯೭೭ರ ಬೈಲ ನಿರ್ಲಕ್ಷಿಸಿ ಟ್ರಸ್ಟ್ ಮಾಡಿಕೊಂಡು ತಾವು ಇರುವವರೆಗೂ ಅಧಿಕಾರ ಚಲಾಯಿಸುವ ಹಕ್ಕನ್ನು ಈಗಿನ ಶ್ರೀಗಳು ಪಡೆದಿದ್ದಾರೆ. ಆದ್ದರಿಂದ ಇದುವರೆಗೂ ಉತ್ತರಾಧಿಕಾರಿ ನೇಮಿಸಿಲ್ಲ. ಹೀಗೆ ದೋಷಗಳ ಸರಿಪಡಿಸುವ ಕುರಿತು ಶ್ರೀಗಳೊಂದಿಗೆ ಚರ್ಚೆ ಮಾಡಲು ನಾವುಗಳು ಮುಂದಾದರೆ, ಅವರು ನಮ್ಮಗಳ ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ಆಪಾದಿಸಿದರು.

ಭಕ್ತ ಸಮುದಾಯ ಶ್ರೀಮಠದ ಬಗ್ಗೆ ಅಪಾರ ಗೌರವ ಅಭಿಮಾನ ಹೊಂದಿದ್ದಾರೆ ಆದರೆ ಶ್ರೀ ಮಠದ ಸಂಪರ್ಕ ಸುಲಭವಾಗಿ ಭಕ್ತ ಸಮುದಾಯಕ್ಕೆ ಸಿಗುತ್ತಿಲ್ಲ ಇದರಿಂದ ಭಕ್ತರು ತಮ್ಮ ಕಷ್ಟಸುಖ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಅನಾಥ ಪ್ರಜ್ಞೆ ಭಕ್ತಸಮುದಾಯದಲ್ಲಿ ಹುಟ್ಟಿಕೊಂಡಿದೆ ಸಮಾಜದಲ್ಲಿ ವಿಚಾರವಾದಿಗಳು

ಶ್ರೀಗಳು ಶಿಕ್ಷಣ ಸಂಸ್ಥೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಸಮಾಜದ ಬಡವರಿಗೆ ನೆರವಾಗುವ ಶಿಕ್ಷಣ ಸಂಸ್ಥೆಗಳ ಬದಲಾಗಿ, ಕೇವಲ ಆದಾಯ ತರುವಂತಹ ಕಲ್ಯಾಣಮಂಟಪಗಳನ್ನು ಅದ್ಧೂರಿ ದೇವಾಲಯಗಳನ್ನು ಸ್ಥಾಪನೆ ಮಾಡಿದ್ದಾರೆ. ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಲ್ಲದಂತಹ ಸ್ಥಿತಿ ಎದುರಾಗಿದೆ.ಭಕ್ತರ ಹಣವನ್ನು ಅದ್ಧೂರಿ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು‌ ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಮಾದನಬಾವಿ ರುದ್ರಪ್ಪಗೌಡ, ಶಿವನಕೆರೆ ಬಸವಲಿಂಗಪ್ಪ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!