ಸಿರಿಗೆರೆ ಸ್ವಾಮೀಜಿ ವಿರುದ್ ಆರೋಪ ಮಾಡುವವರು ನ.13 ರಂದು ಬಹಿರಂಗ ಚರ್ಚೆಗೆ ಬರಲಿ – ಅಣಬೇರು ರಾಜಣ್ಣ ಪಂಥಾಹ್ವಾನ

IMG-20211108-WA0079

ದಾವಣಗೆರೆ: ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಆರೋಪ ಮಾಡುವ ಯಾರೇ ಆಗಿರಲಿ ನ.೧೩ರಂದು ಬೆಳಿಗ್ಗೆ ೧೧ ಕ್ಕೆ ದಾವಣಗೆರೆಯ ಶ್ರೀಮತಿ ಪಾರ್ವತಮ್ಮ ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಮುಕ್ತ ಚರ್ಚೆಗೆ ಬರಲಿ ಎಂದು ಸಮಾಜದ ಹಿರಿಯ ಮುಖಂಡ, ಹೊಟೆಲ್ ಉದ್ಯಮಿ ಅಣಬೇರು ರಾಜಣ್ಣ ಪಂಥಾಹ್ವಾನ ನೀಡಿದ್ದಾರ

ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿಯ ವಕೀಲ ಎಂ. ಸಿದ್ದಯ್ಯ, ಆನಗೋಡು ಗ್ರಾಮದ ಮುಖಂಡ ಎಚ್. ನಂಜುಂಡಪ್ಪ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಂ. ವೀರಭದ್ರಪ್ಪ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಟಿ. ಶಾಂತಗಂಗಾಧರ್, ಬೆಂಗಳೂರಿನ ಮಾದನಬಾವಿ ರುದ್ರಪ್ಪಗೌಡ ಅವರು ಪತ್ರಿಕಾಗೋಷ್ಠಿ ನಡೆಸಿ ಶ್ರೀಗಳ ವಿರುದ್ಧ ಆರೋಪ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ನಗರದ ತರಳಬಾಳು ಮಿನಿ ಸಭಾಂಗಣದಲ್ಲಿ ಸಮಾಜದ ಹಿರಿಯ ಮುಖಂಡ, ಹೊಟೆಲ್ ಉದ್ಯಮಿ ಅಣಬೇರು ರಾಜಣ್ಣ ನೇತೃತ್ವದಲ್ಲಿ ಶ್ರೀಮಠದ ಭಕ್ತರು ಸಭೆ ನಡೆಸಿ, ಶ್ರೀಗಳು, ಶ್ರೀಮಠದ ವಿರುದ್ಧ ಆರೋಪ ಮಾಡಿದವರಿಗೆ ನ.೧೩ ರಂದು ದಿನ ನಿಗದಿ ಮಾಡಿ, ಉತ್ತರಿಸಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಯಿತು.

ಆರಂಭದಲ್ಲಿ ಮಠದಲ್ಲಿ ಇದ್ದವರೇ ದ್ರೋಹ ಬಗೆದಿದ್ದಾರೆ. ಸಿದ್ದಯ್ಯ ೮ ಜನ ಸಂಬಂಧಿಕರಿಗೆ ಹೇಗೆ ನೌಕರಿ ಕೊಡಿಸಿದರು. ವೀರಭದ್ರಪ್ಪ ಹೇಗೆ ಎಂಎಲ್‌ಸಿ ಆದರು. ಶಿವನಕೆರೆ ಬಸಲಿಂಗಪ್ಪ ಹೇಗೆ ಹಣ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಸಭೆಯಲ್ಲಿ ನೆರೆದವರು ಶ್ರೀಗಳ ವಿರುದ್ಧ ಸುದ್ದಿಗೋಷ್ಠಿ ನಡೆಸಿದವರ ವಿರುದ್ಧ ಗುಡುಗಿದರು.

ಸಭೆಯಲ್ಲಿ ಮಾತನಾಡಿದ ಹಿರಿಯ ಹೊಟೆಲ್ ಉದ್ಯಮಿ ಅಣಬೇರು ರಾಜಣ್ಣ, ಸಮಾಜ, ಶ್ರೀಪೀಠ, ಶ್ರೀಗಳ ವಿರುದ್ಧ ಬೆಳಿಗ್ಗೆ ಮುದೇಗೌಡ್ರ ವೀರಭದ್ರಪ್ಪ, ಆನಗೋಡು ರಾಮಚಂದ್ರಪ್ಪ, ಎಸ್.ಟಿ.ಶಾಂತಗಂಗಾಧರ, ಶಿವನಕೆರೆ ಬಸವಲಿಂಗಪ್ಪ ಇತರರು ಸುಳ್ಳು ಆರೋಪ ಮಾಡಿದ್ದಾರೆ. ಅಲ್ಲದೇ, ತರಳಬಾಳು ಪೀಠ ಉಳಿಸಿ ಜಾಗೃತಿ ಸಮಿತಿ ಹೆಸರಿನಲ್ಲಿ ಸಮಾಜಕ್ಕೆ, ಶ್ರೀಪೀಠಕ್ಕೆ, ಗುರುಗಳಿಗೆ ಅವಮಾನಿಸುವ ಕೆಲಸ ಮಾಡಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಮಾಜ ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ನಿಮ್ಮ ಆರೋಪ, ಪ್ರಶ್ನೆಗಳು ಏನೇ ಇದ್ದರೂ ನ.೧೩ರ ಬೆಳಿಗ್ಗೆ ೧೧ಕ್ಕೆ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆಯುವ ಮುಕ್ತ ಸಭೆಗೆ ಬಂದು, ಪ್ರಶ್ನಿಸಿ. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಇಡೀ ಸಮಾಜದ ಸಭೆಯನ್ನು ಕರೆದು ಗುರುಗಳು ಇಡೀ ಸಮಾಜ ಬಾಂಧವರಿಗೆ ಖರ್ಚು ವೆಚ್ಚದ ಲೆಕ್ಕ ನೀಡುತ್ತಾರೆ. ಈ ವಿಚಾರವೇ ಬೆಳಿಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದವರಿಗೆ ತಿಳಿದಿಲ್ಲವೆಂದರೆ ಅವರ್‍ಯಾರು ನಮ್ಮ ಸಮಾಜದವರೇ ಅಲ್ಲ ಅಂತಲೇ ಅರ್ಥ. ನಿಮ್ಮ ಏನೇ ಪ್ರಶ್ನೆ, ಆರೋಪಗಳಿದ್ದರೂ ಸಭೆಗೆ ಬನ್ನಿ. ನೀವೂ ದಾಖಲೆಗಳ ಸಮೇತ ಬನ್ನಿ. ನಾವೂ ಸಹ ಎಲ್ಲಾ ವಿವರ, ದಾಖಲೆಗಳ ಸಮೇತವೇ ಉತ್ತರಿಸುತ್ತೇವೆ ಎಂದು ಆಹ್ವಾನ ನೀಡಿದರು.

ಶಿವಸೈನ್ಯದ ಮುಖಂಡ ಹೆಮ್ಮನಬೇತೂರು ಶಶಿಧರ್, ಮೇಯರ್ ಎಸ್.ಟಿ.ವೀರೇಶ, ಸಮಾಜದ ಹಿರಿಯರಾದ ಮಾಗನೂರು ಸಂಗಮೇಶ್ವರ ಗೌಡ್ರು, ಕಾಂಗ್ರೆಸ್ ಯುವ ಮುಖಂಡ ಬಸವರಾಜ ಶಿವಗಂಗಾ, ಕಸಾಪ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎ.ಆರ್.ಉಜ್ಜಿನಪ್ಪ, ನಿಕಟ ಪೂರ್ವ ತಾಲೂಕು ಅಧ್ಯಕ್ಷ ಬಿ.ವಾಮದೇವಪ್ಪ, ಶಶಿ ಪಾಟೀಲ, ಮೆಳ್ಳೆಕಟ್ಟೆ ಕುಮಾರ, ರವಿಕುಮಾರ ನುಗ್ಗೇಹಳ್ಳಿ, ರವಿ ಆನಗೋಡು, ಪ್ರಭು ಕವಲಹಳ್ಳಿ, ಸತೀಶ ಸಿರಿಗೆರೆ, ಅಸಗೋಡು ರವಿ, ನಾಗರಾಜ ಸಿರಿಗೆರೆ, ಬೆಂಗಳೂರು ತರಳಬಾಳು ಕೇಂದ್ರದ ಕೆಂಗುಂಟೆ ಚಂದ್ರಪ್ಪ ಇತರರು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!