ಸಣ್ಣ ಗಿಡಗಳಿಗೆ ಕೊಡಲಿ ಏಟು: ಪರಿಸರ ಪ್ರೇಮಿಗಳ ಕಾರ್ಯಕ್ಕೆ ಎಳ್ಳು ನೀರು ಬಿಟ್ಟ ಬೆಸ್ಕಾಂ.!

IMG-20211113-WA0147

ದಾವಣಗೆರೆ : ನಗರದ ಹದಡಿ ರಸ್ತೆಯಲ್ಲಿರುವ ಅನುಭವ ಮಂಟಪ ಶಾಲೆ ಬಳಿ ಪರಿಸರ ಪ್ರೇಮಿಗಳು ಹಾಕಿರುವ ಸಣ್ಣ ಗಿಡಗಳನ್ನು ಬೆಸ್ಕಾಂ ಕಡಿದಿದ್ದು, ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಜಾಗದಲ್ಲಿ ಅಧಿಕ ವಿದ್ಯುತ್ ಲೈನ್‌ಗಳು ಹಾದು ಹೋಗಿದ್ದು, ಅವುಗಳಿಂದ ತೊಂದರೆಯಾಗುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ವಾಸ್ತವದದಲ್ಲಿ ಇಲ್ಲಿ ಸಣ್ಣ ಗಿಡಗಳು ಹಾಕಿದ್ದು, ಅವುಗಳು ಎತ್ತರಕ್ಕೆ ಬೆಳೆಯುವುದೇ ಇಲ್ಲ. ಹೀಗಿರುವಾಗ ಸುಖಾಸುಮ್ಮನೆ ಗಿಡಗಳನ್ನು ಕಡಿದಿರುವುದು ಯಾಕೆ ಎಂಬ ಪ್ರಶ್ನೆಗೆ ಬೆಸ್ಕಾಂ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ.
ವಿದ್ಯುತ್‌ಗೆ ತೊಂದರೆಯಾಗಬಾರದೆಂದು ರೆಂಬೆ-ಕೊಂಬೆಗಳನ್ನು ಮಾತ್ರ ಕಡಿಯಬೇಕಾಗಿದ್ದು, ಬೆಸ್ಕಾಂ ಅಧಿಕಾರಿಗಳು ಜೀಪ್‌ನಲ್ಲಿ ಕುಳಿತು ತನ್ನ ಕೆಳ ಸಿಬ್ಬಂದಿಯಿಂದ ಸಂಪೂರ್ಣವಾಗಿ ಮರಗಳ ಕಡಿತಲೆ ಮಾಡಿಸುತ್ತಿದೆ. ಅವರು ಯಾವ ರೀತಿ ಕಡಿದಿದ್ದಾರೆ ಎಂಬುದನ್ನು ಕೂಡ ವೀಕ್ಷಣೆ ಮಾಡುತ್ತಿಲ್ಲ. ಈ ಕಾರಣ ಕೆಳ ಸಿಬ್ಬಂದಿಗಳು ತಮ್ಮ ಮನಸ್ಸೋ ಇಚ್ಚೆ ಮರಗಳನ್ನು ಕಡಿಯುತ್ತಿದ್ದಾರೆ.
ದಾವಣಗೆರೆಯ ಪ್ರಮುಖ ನಗರಗಳಲ್ಲಿ ಮಾಜಿ ಶಾಸಕ ಪಂಪಾಪತಿ ಹಾಕಿದ ಗಿಡಗಳಿಂದ ದಾವಣಗೆರೆ ಹಚ್ಚಹಸಿರಾಗಿದ್ದು, ಇಡೀ ನಗರ ಪರಿಸರವನ್ನು ಹಾಸಿಕೊಂಡು ಮಲಗಿತ್ತು. ನಂತರ ದಿನಗಳಲ್ಲಿ ನಗರದ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಮಾರಣ ಹೋಮ ನಡೆದಿದೆ. ಒಂದು ಕಡೆ ಪಾಲಿಕೆ ಮೇಯರ್ ಗಿಡಗಳನ್ನು ನೆಡುತ್ತೇವೆ ಎಂದು ಹೇಳುತ್ತಿದೆ. ಇನ್ನೊಂದು ಕಡೆ ಮರಗಳನ್ನು ಕಡಿದರೂ ಪಾಲಿಕೆ ವೌನವಹಿಸಿದೆ. ಇತ್ತೀಚಿನ ದಿನಗಳಲ್ಲಿ ಮನೆಮುಂದೆ ಕಸ ಬೀಳುತ್ತದೆ. ಅಂಗಡಿಗೆ ಮರಗಳು ಅಡ್ಡ ಆಗುತ್ತದೆ ಎಂದು ಹಲವರು ಮರಗಳನ್ನು ಕಡಿಯಲು ಮುಂದಾಗುತ್ತಿದ್ದಾರೆ. ಇನ್ನೊಂದು ಕಡೆ ಮರಗಳಿರುವ ಜಾಗದಲ್ಲಿ ತಮ್ಮ ವಾಹನಗಳು ಹಾಳಾಗಬಾರದೆಂದು ಬೈಕ್, ಕಾರುಗಳನ್ನು ನಿಲ್ಲಿಸುತ್ತಿದ್ದಾರೆ. ಆದರೆ ಗಿಡಗಳನ್ನು ಬೆಳೆಸಲು ಮಾತ್ರ ಆಸಕ್ತಿ ತೋರುತ್ತಿಲ್ಲ. ಇನ್ನು ಕ್ರಮವಹಿಸಬೇಕಾದ ಅರಣ್ಯ ಇಲಾಖೆ ಇದೇ ದಾರಿಯಲ್ಲಿ ಹೋದರೂ ತಮಗೆ ಸಂಬಂಧವಿಲ್ಲವೆಂದು ವೌನವಹಿಸಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

 

ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿರುವ ಅನುಭವ ಮಂಟಪ ಶಾಲೆ ಬಳಿ ಪರಿಸರ ಪ್ರೇಮಿಗಳು ಹಾಕಿರುವ ಸಣ್ಣ ಗಿಡಗಳನ್ನು ಬೆಸ್ಕಾಂ ಕಡಿದಿದ್ದು, ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!