ಸ್ಮಾರ್ಟ್ ಸಿಟಿಯ ಆಮೆಗತಿ ಕಾಮಗಾರಿ ಗುಂಡಿಯಲ್ಲಿ ಬಿದ್ದ ತರಕಾರಿ ಮಾರುವ ವೃದ್ದೆ

ದಾವಣಗೆರೆ: ದಾವಣಗೆರೆಯನ್ನು ‘ಸ್ಮಾರ್ಟ್’ ಮಾಡಲು ಅಧಿಕಾರಿ ವರ್ಗದವರು, ಇಂಜಿನಿಯರ್ ಗಳು ಅದಿನ್ನೆಷ್ಟು ವರ್ಷಗಳನ್ನು ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಈ ಸ್ಮಾರ್ಟ್ ಸಿಟಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ರಸ್ತೆಯಲ್ಲಿ ಅಗೆದಿರುವ ಗುಂಡಿಗೆ ಬಿದ್ದು ಹಲವರು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ!
ಇಂದು ದಾವಣಗೆರೆಯ ಹಳೆಯ ಭಾಗದಲ್ಲಿರುವ ಕೆ ಆರ್.ಮಾರುಕಟ್ಟೆಯ ಮುಖ್ಯರಸ್ತೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು ಇಲ್ಲಿ ತೆಗೆದಿದ್ದ ಗುಂಡಿಗೆ ತರಕಾರಿ ಮಾರುವ ವೃದ್ಧೆ ಮಾಳಮ್ಮ ಎಂಬಾಕೆ ಬಿದ್ದಿದ್ದು, ತಕ್ಷಣಕ್ಕೆ ಅಲ್ಲೇ ಇದ್ದ ಜನರು ಇದನ್ನು ಗಮನಿಸಿ ವೃದ್ಧೆಯ ಸಹಾಯಕ್ಕೆ ಬಂದಿದ್ದಾರೆ. ವೃದ್ಧೆಗೆ ಕೈಕಾಲಿಗೆ ತೆರೆಚಿದ ಗಾಯಗಳಾಗಿವೆ.
ಹಲವಾರು ತಿಂಗಳಿನಿಂದ ಆಮೆ ಗತಿಯಲ್ಲಿ ಈ ಕಾಮಗಾರಿ ನೆಡೆಯುತ್ತಿದ್ದು, ಸಾವ೯ಜನಿಕರು ಸ್ಥಳೀಯ ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಸ್ಮಾರ್ಟಸಿಟಿ ಯ ಅಧಿಕಾರಿಗಳು ಈ ಬಗ್ಗೆ ಗಮನ ವಹಿಸಿಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.