ಮೃಗಗಳಂತೆ ವರ್ತಿಸಿದ ಸಾಫ್ಟವೇರ್ ಗಂಡ ಅತ್ತೆ ಮಾವ.!? ಆಕೆ ತಪ್ಪಸಿಕೊಂಡಿದ್ದೆ ದೊಡ್ಡ ಸಾಹಸ

ದಾವಣಗೆರೆ: ತವರು ಮನೆಯವರಿಗೆ ಸರಿಯಾಗಿ ಉಪಚರಿಸಿದ್ದನ್ನು ಪ್ರಶ್ನೆ ಮಾಡಿದ ಸೊಸೆಯ ಮೇಲೆ ಅತ್ತೆ-ಮಾವ ಇಬ್ಬರು ಸೇರಿ ಕಬ್ಬಿಣದ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ವಿದ್ಯಾನಗರದಲ್ಲಿ ನಡೆದಿದೆ.
ಸರಿಯಾದ ಸಮಯಕ್ಕೆ ಸ್ಥಳೀಯರು ನೆರವಿಗೆ ಧಾವಿಸಿ ನೇತ್ರಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ನೇತ್ರಾ ಸ್ವಲ್ಪಕಾಲ ಯಾಮಾರಿದ್ರೆ ನಾನು ಜೀವಂತ ಇರುತ್ತಿರಲಿಲ್ಲ, ಮನೆಯಲ್ಲಿ ನನ್ನ ಟೇಬಲ್ ಕೆಳಗಡೆ ಬಚ್ಚಿಟ್ಟುಕೊಂಡಿದ್ದರೂ ಹುಡುಕಿಕೊಂಡು ನನಗೆ ಹಲ್ಲೆ ಮಾಡಿದ್ದಾರೆ, ಅದ್ಯೆಗೋ ತಪ್ಪಿಸಿಕೊಂಡು ಮನೆಯಿಂದ ಹೊರಗಡೆ ಬಂದೆ, ಮನೆಯ ಬಳಿ ಇದ್ದ ಲೋಕಿಕೆರೆ ನಾಗರಾಜ್ ಅಭಿಮಾನಿಗಳ ಬಳಗದ ಅದ್ಯಕ್ಷರು ನೇತ್ರಾಳ ರಕ್ತಸಿಕ್ತ ಮುಖ ನೋಡಿ ತಕ್ಷಣ ತಮ್ಮದೇ ವಾಹನದಲ್ಲಿ ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಬಂದು ಸರಿಯಾದ ಚಿಕಿತ್ಸೆ ಕೊಡಿಸಿದ್ದಾರೆ.
ಮೂಲತಃ ಶಿವಮೊಗ್ಗದವರಾದ ನೇತ್ರಾ ಕಳೆದ ಒಂದೂವರೆ ವರ್ಷದ ಹಿಂದೆ ದಾವಣಗೆರೆಯ ಸಾಫ್ಟ್‌ವೇರ್ ಇಂಜಿನಿಯರ್ ರೋಹಿತ್ ಅವರನ್ನು ವಿವಾಹವಾಗಿದ್ದರು. ಮದುವೆ ವೇಳೆಯಲ್ಲಿಯೇ ವರದಕ್ಷಿಣೆ ನೀಡಿ ಅದ್ಧೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತಾದರೂ ಕೆಲ ತಿಂಗಳಿಂದ ಅತ್ತೆ ಮಾವ ಕಿರುಕುಳ ನೀಡುತ್ತಿದ್ದರು ಎಂದು ನೇತ್ರಾ ಆರೋಪಿಸಿದ್ದಾರೆ.
ನೇತ್ರಾ ತವರು ಮನೆಯವರು ಏನಾದರೂ ಬಂದರೆ ಪತಿ ರೋಹಿತ್ ಅವರ ತಂದೆ – ತಾಯಿ ಉಪಚರಿಸದ ಕಾರಣ ಜಗಳಗಳು ನಡೆದಿದ್ದು, ನಿನ್ನೆ ಸಹ ನೇತ್ರಾ ತಂದೆ- ತಾಯಿ ಬಂದಾಗ ಜಗಳವಾಗಿದೆ. ಇಂದು ಅದನ್ನು ಪ್ರಶ್ನಿಸಿದ್ದಕ್ಕೆ ಅತ್ತೆ, ಮಾವ ಹಾಗೂ ಗಂಡ ಸೇರಿಕೊಂಡು ನೇತ್ರಾರನ್ನ ಮಾರಣಾಂತಿಕವಾಗಿ ಮನಬಂದಂತೆ ಥಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.
ಅವರಿಂದ ತಪ್ಪಿಸಿಕೊಂಡು ನೇತ್ರಾ ಮನೆಯ ಹೊರಗಡೆ ಓಡಿ ಬಂದಿದ್ದು, ನೇತ್ರಾಳನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.