Solid Waste: ದಾವಣಗೆರೆಯ ಅವರಗೊಳ್ಳ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪುನಃ ಬೆಂಕಿ; ಗ್ರಾಮಸ್ಥರ ಆರೋಗ್ಯಕ್ಕೆ ಕುತ್ತು

fire at Avaragolla solid waste treatment plant

ದಾವಣಗೆರೆ: (Solid Waste)  ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ  ಅವರಗೋಳದಲ್ಲಿ ಇರುವ ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕದಲ್ಲಿ ಪುನಃ ಬೆಂಕಿ ಹೊತ್ತುಕೊಂಡಿರುವ ಘಟನೆ ಸಂಭವಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಆಗಮಿಸಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಇದೇ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿತ್ತು, ಸಾರ್ವಜನಿಕರಿಂದ ಹಾಗೂ ಅಕ್ಕಪಕ್ಕದ ಗ್ರಾಮಸ್ಥರಿಂದ    ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು.ಈ ನಡುವೆ ಇಂದು ಸಂಕ್ರಮಣ ದಿನದಂದು ಪುನಃ ಬೆಂಕಿ ಹೊತ್ತಿಕೊಂಡಿರುವುದು ಹಲವು ಅನುಮಾನಕ್ಕೆ ದಾರಿಯಾಗಿದೆ. ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕ ಇದೀಗ ಗ್ರಾಮಸ್ಥರ  ಆರೋಗ್ಯಕ್ಕೆ ಅಪಾರ ಪ್ರಮಾಣದಲ್ಲಿ ವ್ಯತ್ಯಾಸವನ್ನು ತರುತ್ತದೆ. ಈ ಘಟಕ ಅಪಾಯಕಾರಿ ಹೊಗೆ ಹೊರಸೂಸುತ್ತಿದ್ದು ದಾವಣಗೆರೆ ತಾಲೂಕಿನ ಅವರಗೋಳ ಗ್ರಾಮಸ್ಥರ ಪ್ರಾಣಕ್ಕೆ ಸಂಚಕಾರ ಎದುರಾಗಿದೆ.

ತ್ಯಾಜ್ಯದಿಂದ ಬರುವ ದಟ್ಟ ಹೊಗೆ ವಿವಿಧ ಬೆಳೆಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಗ್ರಾಮದಿಂದ ಅರ್ಧ ಕಿ.ಮೀ ದೂರದಲ್ಲಿರುವ ಘಟಕಕ್ಕೆ ನಿತ್ಯ ಬೆಂಕಿ ಆವರಿಸಿಕೊಳ್ಳುತ್ತಿದೆ ಎಮಬ ಆರೋಪ ಕೇಳಿಬರುತ್ತಿದೆ. ಘಟಕದಲ್ಲಿ ಬೃಹತ್ ಕಸದ ರಾಶಿಯನ್ನು ಗುಡ್ಡದಂತೆ ಶೇಖರಿಸಲಾಗಿದ್ದು. ಈ ಘಟಕವನ್ನು ಸ್ಥಳಾಂತರಿಸಿ ಎಂದು ಇಲ್ಲಿನ ಜನರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜ‌ನವಾಗಿಲ್ಲ ಎನ್ನುತ್ತಿದ್ದಾರೆ ಸ್ಥಳೀಯ ಗ್ರಾಮಸ್ಥರು. ಹೊಗೆಯಿಂದಾಗಿ ಅಕ್ಕಪಕ್ಕ ಜಮೀನುಗಳಲ್ಲಿ ಬೆಳೆದಿರುವ ಭತ್ತ, ಅಡಿಕೆ, ತೆಂಗು ಬೆಳೆ ಹಾನಿಯಾಗುತ್ತಿದೆ ಎಂಬುದು ರೈತರ ಅಳಲಾಗಿದೆ.

Leave a Reply

Your email address will not be published. Required fields are marked *

error: Content is protected !!