ಸೋರಿಕೆ ಯಾಗುತ್ತಿರುವ ತ್ಯಾಜ್ಯವನ್ನು ಘಟಕಕ್ಕೆ ತರುವ ನಿಟ್ಟಿನಲ್ಲಿ ಪಾಲಿಕೆಯಿಂದ ಕ್ರಮ – ಮೇಯರ್ ಎಸ್ ಟಿ ವಿರೇಶ್

 

ದಾವಣಗೆರೆ: ನಗರದಲ್ಲಿರುವ ಎರಡು ತ್ಯಾಜ್ಯ ನೀರು ಸಂಸ್ಕರಣ ಘಟಕ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಅದರಲ್ಲಿ ಶಿವನಗರದಲ್ಲಿರುವ ಘಟಕಕ್ಕೆ ಪೂರ್ಣ ಪ್ರಮಾಣದ ತ್ಯಾಜ್ಯ ನೀರು ಬರುತ್ತಿಲ್ಲ. ಈ ಹಿನ್ನಲೆಯಲ್ಲಿ ಸೋರಿಕೆ ಯಾಗುತ್ತಿರುವ ತ್ಯಾಜ್ಯವನ್ನು ಘಟಕಕ್ಕೆ ತರುವ ನಿಟ್ಟಿನಲ್ಲಿ ಪಾಲಿಕೆಯಿಂದ ಕ್ರಮ ಜರುಗಿಸಲಾಗುವುದು ಎಂದು ಮೇಯರ್ ಎಸ್.ಟಿ. ವೀರೇಶ್ ಹೇಳಿದರು.

ಸೋಮವಾರ ಶಿವನಗರ ಮತ್ತು ಆವರಗೆರೆಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣ ಘಟಕಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಶಿವನಗರದಲ್ಲಿ ಎರಡು ತ್ಯಾಜ್ಯ ನೀರು ಸಂಸ್ಕರಣ ಘಟಕಗಳಿದ್ದು, ಒಂದೊಂದು ಘಟಕದಲ್ಲಿ ತಲಾ ೨೦ ಎಂಎಲ್‌ಡಿ, ಆವರಗೆರೆಯಲ್ಲಿನ ಘಟಕದಲ್ಲಿ ೫ ಎಂಎಲ್‌ಡಿ ತ್ಯಾಜ್ಯವನ್ನು ಸಂಸ್ಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಶಿವನಗರದಲ್ಲಿರುವ ಘಟಕಕ್ಕೆ ಪೂರೈಕೆ ಆಗಬೇಕಿದ್ದ ತ್ಯಾಜ್ಯ ನೀರು ಬರುತ್ತಿಲ್ಲ. ನಗರದಲ್ಲಿನ ಯುಜಿಡಿಗೆ ಸಂಪರ್ಕಿಸುವ ಮಾರ್ಗದಲ್ಲಿ ಸೋರಿಕೆ ಆಗುತ್ತಿದೆ ಎಂದು ಹೇಳಲಾಗಿದೆ. ಆ ನೀರನ್ನು ಈ ಘಟಕಕ್ಕೆ ತಲುಪಿಸುವಂತಹ ಕೆಲಸ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಕೆಲಸ ಮಾಡಲಾಗುವುದು ಎಂದು ಹೇಳಿದರು.

ಈ ಸಂಸ್ಕರಣ ಘಟಕದಲ್ಲಿ ಎರಡು ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಕೊಳಚೆ ನೀರಿನಲ್ಲಿನ ಕಲ್ಲು, ಮಣ್ಣು ಬೇರರ್ಪಡಿಲಾಗುವುದು. ಎರಡನೇ ಹಂತದಲ್ಲಿ ನೀರಿನಲ್ಲಿರುವ ಸಣ್ಣ ಸಣ್ಣ ಮಣ್ಣು, ಕಲ್ಲಿನ ಕಣಗಳನ್ನು ತೆಗೆಯಲಾಗುವುದು. ಈ ಕೆಲಸ ಇಲ್ಲಿ ಮಾಡಲಾಗುತ್ತಿದೆ. ಇನ್ನೊಂದು ಹಂತದ ಘಟಕ ಪ್ರಾರಂಭ ಮಾಡಿದ್ದಲ್ಲಿ ಕುಡಿಯುವ ನೀರನ್ನು ಕೊಡಬಹುದು ಎಂದರು.

ಶಿವನಗರದ ತ್ಯಾಜ್ಯ ನೀರು ಸಂಸ್ಕರಣ ಘಟಕದ ಸುತ್ತಲೂ ಮಹಾನಗರ ಪಾಲಿಕೆಗೆ ಸೇರಿದ ಜಾಗವಿದ್ದು, ಅಲ್ಲಿ ಗಿಡಗಳನ್ನು ನೆಡುವ ಕೆಲಸಕ್ಕೆ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಅದಷ್ಟು ಬೇಗನೆ ಇದಕ್ಕೆ ಜಾಲನೆ ನೀಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಪಾಲಿಕೆಯ ಸಾಮಾಜಿಕ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ. ಗೋಣೆಪ್ಪ, ಪ್ರಭಾರ ಉಪ ಆಯುಕ್ತ (ಅಭಿವೃದ್ದಿ) ಉದಯ ಕುಮಾರ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಹರ್ಷಿತಾ, ಎಇಇ ಸಚಿನ್, ಜೆಡಿಎಸ್ ಮುಖಂಡ ಜೆ. ಅಮಾನುಲ್ಲಾ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!