ಶಾಮನೂರು ಕಾಲಿಗೆರಗಿದ ಸೌಭಾಗ್ಯ ಬಸವರಾಜನ್ ಪತಿಗೆ ಟಿಕೆಟ್ ಕೊಡಿಸಲು ಲಾಭಿ?

ಶಾಮನೂರು ಕಾಲಿಗೆರಗಿದ ಸೌಭಾಗ್ಯ ಬಸವರಾಜನ್ ಪತಿಗೆ ಟಿಕೆಟ್ ಕೊಡಿಸಲು ಲಾಭಿ?

ದಾವಣಗೆರೆ: ಚಿತ್ರದುರ್ಗ ಕ್ಷೇತ್ರದ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಅವರಿಗೆ ಟಿಕೆಟ್ ನೀಡುವಂತೆ ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಲಾಭಿ ನಡೆಸುತ್ತಿದ್ದಾರೆಯೇ?

ಹೀಗೊಂದು ಅನುಮಾನದ ರಾಜಕೀಯ ವಲಯದಲ್ಲಿ ಮೂಡಿದೆ. ಸದ್ಯ ಚಿತ್ರದುರ್ಗ ಕ್ಷೇತ್ರಕ್ಕೆ , ಕೆ ಸಿ ವಿರೇಂದ್ರ ಪಪ್ಪಿ, ಬಸವರಾಜ್, ರಘು ಆಚಾರ್ಯ ಮಧ್ಯೆ ತಿವ್ರ ಪೈಪೋಟಿ ನಡೆಯುತ್ತಿದೆ.

ಏತನ್ಮಧ್ಯೆ ಮುರುಘಾ ಶರಣರ ಕೇಸ್ ನಲ್ಲಿ ದೂರುದಾರರಾಗಿರುವ ಬಸವರಾಜನ್ ಅವರ ಪತ್ನಿ ಸೌಭಾಗ್ಯ ಕಾಂಗ್ರೆಸ್ ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿಯಾಗಿದ್ದಾರೆ. ಟಿಕೆಟ್ ಪಡೆಯಲು ಪತಿ ಜೊತೆ ಪತ್ನಿಯೂ ಹರಸಾಹಸ ಮಾಡುತ್ತಿದ್ದಾರೆ.

ಸೋಮವಾರ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅಧಿಕೃತವಾಗಿ ಪ್ರಚಾರ ಆರಂಭಿಸಿದರು. ಈ ವೇಳೆ ಶಿವಶಂಕರಪ್ಪ ಅವರ ಕಾಲಿಗೆ ಬಿದ್ದ ಸೌಭಾಗ್ಯ, ನಿಮ್ಮ ಆದೀರ್ಶವಾದ ಇರಲಿ ಎಂದಿದ್ದಾರೆ. ಸೌಭಾಗ್ಯ ಅವರ ಈ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!