ಎಸ್ ಪಿ ವಿರುದ್ದ ಸಿಪಿಐ ಗೆ ಫೋನಿನಲ್ಲಿ ಬಯ್ದಿರುವ ಪ್ರಕರಣ: ರೇಣುಕಾಚಾರ್ಯ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ದಾವಣಗೆರೆ: ದಾವಣಗೆರೆ ಜಿಲ್ಲೆಗೆ ನೂತನವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕವಾಗಿ ಬಂದಂತಹ  ಸಿ.ಬಿ ರಿಷ್ಯತ್ ರವರು ತಮ್ಮ ಕೆಲಸವನ್ನು ಪ್ರಾರಂಭಿಸುತ್ತಿದ್ದಂತೆ ಅವರ ವಿರುದ್ಧ ಆಡಳಿತ ಪಕ್ಷದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳೇ ಬೆದರಿಕೆಯ ರೀತಿಯ ಮಾತುಗಳನ್ನು ಆಡುತ್ತಿರುವುದನ್ನು ನೋಡಿದರೆ ಪ್ರಜಾಸತ್ತಾತ್ಮಕ ವ್ಯವಸ್ಥೆ ಎತ್ತ ಕಡೆ ಸಾಗುತ್ತಿದೆ ಎಂಬುದು ಭಯವಾಗುತ್ತಿದೆ.

ನೂತನವಾಗಿ ಬಂದಂತಹ ಅಧಿಕಾರಿಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ಮಾನ್ಯ ಶಾಸಕರು ಹೆದರಿಕೆ, ದಬ್ಬಾಳಿಕೆಯನ್ನು ಮಾಡುತ್ತಿದ್ದಾರೆ ಇದರ ಬಗ್ಗೆ ಮಾನ್ಯ ಗೃಹ ಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಗಳು ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಕ್ರಮ ತೆಗೆದುಕೊಳ್ಳದಿದ್ದರೆ ಶಾಸಕರ ಈ ನಡವಳಿಕೆಗೆ ತಮ್ಮ ಬೆಂಬಲವೂ ಸಹ ಇದೆ ಎಂಬಂತಾಗುತ್ತದೆ ಮುಂದಿನ ದಿನಗಳಲ್ಲಿ ಅಧಿಕಾರಿಗಳು ನ್ಯಾಯಸಮ್ಮತವಾದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಇರುವಂತಹ ಸ್ಥಿತಿ ಉಂಟಾಗಬಹುದು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಿಂದ ಒಂದು ಜಿಲ್ಲೆಯ ಎಸ್ಪಿ ಗೆ ಬೆದರಿಕೆ – ಗೃಹಸಚಿವರ ಕ್ರಮವೇನು. 

-ಕೆ.ಎಲ್.ಹರೀಶ್ ಬಸಾಪುರ

Leave a Reply

Your email address will not be published. Required fields are marked *

error: Content is protected !!