Sand Seize: ಪೊಲೀಸ್ ಇಲಾಖೆ ಗೌರವ ಕಾಪಾಡಿದ ಎಸ್ ಪಿ ಹನುಮಂತರಾಯ.! ಅಕ್ರಮ ಮರಳು ಅಡ್ಡೆಗೆ ದಿಡೀರ್ ಎಂಟ್ರಿ || ಮರಳು,ತೆಪ್ಪ ವಶಕ್ಕೆ
ಹಾವೇರಿ ( ಕುಮಾರಪಟ್ಟಣಂ ): ಅಕ್ರಮ ಮರಳು ಮಾಫಿಯಾ ವಿರುದ್ದ ಸಮರ ಸಾರಿದ್ದ ಗರುಡವಾಯ್ಸ್ ನ್ಯೂಸ್ ಗೆ ಮತ್ತೊಂದು ಗರಿ ಮೂಡಿದೆ..
ಇತ್ತೀಚಿಗೆ ಗರುಡವಾಯ್ಸ್ ತನಿಖಾ ತಂಡ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಮಟ್ಕಾ ದಂಧೆ ಸೇರಿದಂತೆ ಅಕ್ರಮ ಚಟುವಟಿಕೆ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಪೊಲೀಸ್ ಇಲಾಖೆ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಿ ತನ್ನ ಗೌರವವನ್ನ ಸಾರ್ವಜನಿಕವಾಗಿ ಕಾಪಾಡಿಕೊಂಡಿದೆ. ಹಾವೇರಿ ಎಸ್ ಪಿ ಹನುಮಂತರಾಯ ತಾವೇ ಖುದ್ದು ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ಮಾಡಿದ್ದು ದುರುಳರಿಗೆ ಸಿಂಹಸ್ವಪ್ನವಾಗಿದ್ದಾರೆ. ತಾವೇ ಹೇಳಿದ ಹಾಗೆ ಅಕ್ರಮ ಚಟುವಟಿಕೆಗಳನ್ನು ಕಡಿವಾಣ ಹಾಕಲು ಪೊಲೀಸ್ ಇಲಾಖೆ ಯಾವಾಗಲೂ ಸನ್ನದ್ದವಾಗಿರುತ್ತದೆ ಎಂದಿದ್ದರು.
ರಾಣೆಬೆನ್ನೂರು ತಾಲ್ಲೂಕಿನಲ್ಲಿ ರಾತ್ರಿ 10 ರ ನಂತರ ಪೋಲಿಸ್ ಠಾಣಾ ಮುಂಭಾಗದಲ್ಲೆ ಅಕ್ರಮ ಮರಳು ತುಂಬಿದ ಲಾರಿಗಳು ಸಂಚರಿಸುತ್ತಿದ್ದವು, ಯಾರ ಭಯವಿಲ್ಲದೆ ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಲೇ ಇತ್ತು, ಇದನ್ನ ಗಮನಿಸಿದ ಹಾವೇರಿ ಎಸ್ ಪಿ ಖುದ್ದು ತಾವೇ ತಮ್ಮ ತಂಡದೊಂದಿಗೆ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ನಡೆಸಿದೆ.
ನವೆಂಬರ್ 13 ರ ರಾತ್ರಿ 11 ಗಂಟೆಗೆ ಹಾವೇರಿಯಿಂದ ಕುಮಾರಪಟ್ಟಣಂ ಪೊಲೀಸ್ ಠಾಣಾ ವ್ಯಾಪ್ತಿಯ ಕುಮಾರಪಟ್ಟಣಂ ಚೆಕ್ ಪೋಸ್ಟ್ ನೂತನ ಬ್ರಿಡ್ಜ್ ಬಳಿಯಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಅಕ್ರಮವಾಗಿ ತುಂಗಭದ್ರಾ ನದಿಯಿಂದ ಮರಳನ್ನು ಸಾಗಾಟ ಮಾಡಲು ತೆಗೆದಿಟ್ಟಿದ್ದ ಮರಳು ಅಡ್ಡೆಗೆ ದಿಢೀರ್ ಭೇಟಿ ನೀಡಿದ ಎಸ್ ಪಿ ಹನುಮಂತರಾಯ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಅಪಾರ ಪ್ರಮಾಣದ ಮರಳು ಹಾಗೂ 7 ತೆಪ್ಪಗಳನ್ನ ವಶಕ್ಕೆ ಪಡೆದಿದ್ದು ಆರೋಪಿತರನ್ನ ಪತ್ತೆ ಮಾಡಲು ತಂಡವನ್ನ ರಚಿಸಲಾಗಿದೆ ಎಂದಿದ್ದಾರೆ.
https://garudavoice.com/2021/11/01/illigal-activiti…officers-support/
ಒಟ್ಟಾರೆ ಸಿಎಂ ಬಸವರಾಜ್ ಬೊಮ್ಮಾಯಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಯದಂತೆ ಪೊಲೀಸ್ ಇಲಾಖೆ ಮೇಲೆ ಇಟ್ಟಿರುವ ನಂಬಿಕೆಯನ್ನ ಎಸ್ ಪಿ ಹನುಮಂತರಾಯ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಳಿಸಿಕೊಂಡಿದ್ದಾರೆ. ಇದೇ ರೀತಿ ಇಲಾಖೆಯ ಗೌರವವನ್ನು ಕಾಪಾಡಲಿ ಎಂಬುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.