SP Phone-In: ಅಕ್ರಮ ಗಾಂಜಾ, ಮದ್ಯ ಮಾರಾಟ, ಪಡಿತರ ಅಕ್ಕಿ ಮಾರಾಟ ಮಾಡುತ್ತಿರುವ ಬಗ್ಗೆ ದೂರು – ಎಸ್ ಪಿ ಉಮಾ ಪ್ರಶಾಂತ್

IMG-20250712-WA0027

ದಾವಣಗೆರೆ: (SP Phone-In) ದಿನಾಂಕ:11-07-2025 ರಂದು ಬೆಳಗ್ಗೆ 11.00 ಗಂಟೆಯಿAದ 12.00 ಗಂಟೆಗೆ ಸಾರ್ವಜನಿಕರೊಂದಿಗೆ ದಾವಣಗೆರೆ ನಗರ ಹಾಗೂ ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗಾಗಿ ನಡೆಸಿದ ಪೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪೋನ್ ಮಾಡಿ ತಮ್ಮ ಅನಿಸಿಕೆ, ಅಹವಾಲುಗಳನ್ನು ಹಂಚಿಕೊಂಡರು

1. ವಿದ್ಯಾರ್ಥಿಯೊಬ್ಬರು ಕರೆ ಮಾಡಿ- ನಗರದಲ್ಲಿ ಸರ್ಕಾರಿ ವಾಹನಗಳು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿ ಚಲಾಯಿಸಿಕೊಂಡು ಪುಟ್‌ಫಾತ್ ಮತ್ತು ರಸ್ತೆಗಳ ಮಧ್ಯದಲ್ಲಿಯೇ ನಿಲ್ಲಿಸುತ್ತಾರೆ. ಪೊಲೀಸ್ ನವರು ಯೂನಿಫಾರಂ ಇಲ್ಲದೆ ಸಾರ್ವಜನಿಕರ ವಾಹನಗಳನ್ನು ನಿಲ್ಲಿಸಿ ಕೇಸುಗಳನ್ನು ದಾಖಲಿಸುವುದು ಮಾಡುವುದಾಗಿ ತಿಳಿಸಿರುತ್ತಾರೆ.
2. ಮಾಗಾನಹಳ್ಳಿ-ಶ್ಯಾಮನೂರು ರಸ್ತೆ ಹಾಗೂ ನಗರದಲ್ಲಿ ಎಂ-ಸ್ಯಾAಡ್, ಜೆಲ್ಲಿ ಮರಳು ಸಾಗಿಸುವ ಲಾರಿಗಳು ಪಾಟುಗಳನ್ನು ಮುಚ್ಚದೇ ಓಡಾಡುತ್ತಿರುತ್ತೇವೆ ಹಾಗೂ ಅವರಗೆರೆ ಗ್ರಾಮದ ಬಳಿ ರಸ್ತೆಗಳಿಗೆ ಸ್ಪೀಡ್ ಬ್ರೇಕ್ ಇರುವುದಿಲ್ಲ ವೆಂದು ತಿಳಿಸಿರುತ್ತಾರೆ.
3. ಜಗಳೂರು ನಗರದಲ್ಲಿನ ಮುಖ್ಯರಸ್ತೆಗಳಲ್ಲಿ ವಾಹನ ಸವಾರರು ತಮ್ಮ ತಮ್ಮ ವಾಹನಗಳನ್ನು ಸುಗಮ ಸಂಚಾರ ವ್ಯವಸ್ಥೆಗೆ ಅಡಚಣೆ ಯಾಗುವುಂತೆ ನಿಲ್ಲಿಸುತ್ತಾರೆ. ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ ದ್ವಿ-ಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲು ತಿಳಿಸಿರುತ್ತಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಜಗಳೂರು ಪೊಲೀಸ್ ನಿರೀಕ್ಷಕರಿಗೆ ಸೂಚನೆ ನೀಡಿರುತ್ತಾರೆ.


4. ನ್ಯಾಮತಿ ಟೌನ್‌ನಲ್ಲಿರುವ ಎಸ್.ಬಿ.ಐ. ಬ್ಯಾಂಕ್ ನವರು ಅಡವಿಟ್ಟ ಈ ಹಿಂದೆ ಕಳ್ಳತನವಾಗಿ ಪತ್ತೆಯಾಗಿರುವ ತಮ್ಮ ಬಂಗಾರವನ್ನು ಹಿಂದಿರುಗಿಸಿರುವುದಿಲ್ಲವೆAದು ತಿಳಿಸಿದ್ದು, ಬ್ಯಾಂಕ್ ವ್ಯವಸ್ಥಾಪಕರನ್ನು ಬೇಟಿ ಮಾಡಲು ಪೊಲೀಸ್ ಅಧೀಕ್ಷಕರವರು ತಿಳಿಸಿದರು.
5. ನಗರದ ಕೆ.ಇ.ಬಿ. ಸರ್ಕಲ್ ಬಳಿ ಇರುವ ಸಿಂಗ್ನಲ್ ಸ್ಟಾಫ್ ಆಗುತ್ತಿಲ್ಲ. ಎ.ವಿ.ಕೆ. ಕಾಲೇಜ್ ಒಮ್ಮುಖ ರಸ್ತೆಯಲ್ಲಿ ಎದರುಗಡೆಯಿಂದ ಸಾಕಷ್ಟು ದ್ವಿ-ಚಕ್ರ ಹಾಗೂ ನಾಲ್ಕು-ಚಕ್ರ ವಾಹನ ಸವಾರರು ಓಡಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

6. ನಗರದ ರಾಂ & ಸರ್ಕಲ್ ನಲ್ಲಿ ಪುಟ್‌ಫಾತ್ ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ಹಾಗೂ ರಸ್ತೆಯ ಎರಡು ಬದಿ ವಾಹನಗಳನ್ನು ಸಲ್ಲಿಸುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸಂಚಾರಿ ಪೋಲೀಸರಿಗೆ ತಿಳಿಸಿರುತ್ತಾರೆ.

7. ನಗರದ ಕೆ.ಆರ್. ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ತರಕಾರಿ, ಹಣ್ಣು ಮಾರುವವರು ಗಾಡಿಗಳನ್ನು ನಿಲ್ಲುಸತ್ತಾರೆ. ನಾಲ್ಕು ಚಕ್ರ ವಾಹನಗಳನ್ನು ನಿಲ್ಲಿಸುವ ಸ್ಥಳಗಳಲ್ಲಿ ದ್ವಿ-ಚಕ್ರ ವಾಹನಗಳನ್ನು ನಿಲ್ಲುಸುತ್ತಾರೆ. ಒಂದು ಕಡೆ ಪಾರ್ಕಿಂಗ್ ಮಾಡುವುದಿಲ್ಲ ವೆಂದು ತಿಳಿಸಿರುತ್ತಾರೆ.

8. ಹಳೆಯ ಜೀಪುಗಳನ್ನು ವಿನೋಬನಗರ 1ನೇ ಮೇನ್ ಮಾಚಿದೇವ ಸಮುದಾಯ ಭವನದ ಬಳಿ ನಿಲ್ಲಿಸಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿರುತ್ತಾರೆ.

9. ನಗರದ ಮಾಮಾಸ್ ಜಾಯಿಂಟ್ ರಸ್ತೆ, ಪಿ.ಜೆ.ಬಡಾವಣೆ ಬಾಣಾಪುರ ಮಠ ಆಸ್ಪತ್ರೆ, ವಿಶ್ವೇಶ್ವರಯ್ಯ ಪಾರ್ಕ್ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದಾಗಿ ಹಾಗೂ ಪ್ರಮುಖ ಸರ್ಕಲ್‌ಗಳಲ್ಲಿರುವ ಸಿಗ್ನಲ್‌ಗಳಲ್ಲಿನ ಸೆಕೆಂಡ್ ಅವಧಿಯನ್ನು ಮತ್ತು ದ್ವಿ-ಚಕ್ರ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ವಾಹನಗಳನ್ನು ಓಡಿಸುತ್ತಿದ್ದು ಕ್ರಮಕೈಗೊಳ್ಳಲು ತಿಳಿಸಿರುತ್ತಾರೆ.

10. ಆಟೋ ಹಾಗೂ ಓಮಿನಿ ವಾಹನಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು-ಹೆಚ್ಚು ಶಾಲಾ ಮಕ್ಕಳನ್ನು ಕುರಿಸಿಕೊಂಡು ವೇಗವಾಗಿ ಹಾರನ್ ಮಾಡದೇ ಹಾಗೂ ಯಾವುದೇ ಯಾವುದೇ ಜಾಗೃತೆ ವಹಿಸದೇ ಇದ್ದು ಕ್ರಮಕೈಗೊಳ್ಳಲು ತಿಳಿಸಿರುತ್ತಾರೆ.


11. ಎಲೆಬೇತೂರು ಅಕ್ರಮವಾಗಿ ಮಧ್ಯ ಮಾರಾಟವನ್ನು ಶಾಲೆಯ ಪಕ್ಕದಲ್ಲಿಯೇ ಮಾರಾಟ ಮಾಡುತ್ತಿದ್ದು ಸಣ್ಣ-ಸಣ್ಣ ಮಕ್ಕಳು ಕುಡಿಯುತ್ತಾ ಕಳ್ಳತನ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ.

12. ಪ್ರತಿನಿತ್ಯ ನಗರದಲ್ಲಿನ ಶಾಲೆಗಳಿಗೆ ಹಳ್ಳಿಗಳಿಂದ ಆಟೋಗಳಲ್ಲಿ ಹಿಂದೆ-ಮುAದೆ ಮಕ್ಕಳನ್ನು ಕೂರಿಸಿಕೊಂಡು ಬರುತ್ತಾ ಕರ್ಕಶವಾಗಿ ಹಾರನ್ ಮಾಡುತ್ತಿದ್ದು, ಕ್ರಮ ವಹಿಸಲು ಸೂಚಿಸಿರುತ್ತಾರೆ.

13. ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು ಕ್ರಮ ವಹಿಸಲು ಕೋರಿರುತ್ತಾರೆ.

14. ಜಗಲೂರು ಬಸ್ ನಿಲ್ದಾಣದ ಮಧ್ಯದಲ್ಲಿ ಅಟೋಗಳನ್ನು ನಿಲ್ಲಿಸುತ್ತಾ ಸಾರ್ವಜನಿಕರಿಗೆ ಅಡಚಣೆವುಂಟು ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ.

15. ನಗರದ ರೈಲ್ವೆ ನಿಲ್ದಾಣ, ಮಹಾನಗರ ಪಾಲಿಕೆಯ ಮುಂಭಾಗದ ರಸ್ತೆಯಲ್ಲಿ ನಗರ ಸಾರಿಗೆ ಬಸ್ಸುಗಳು ನಿಲ್ಲಿಸಲು ಸ್ಥಳವನ್ನು ಬಿಡದೇ ಆಟೋಗಳನ್ನು ಅಡ್ಡಲಾಗಿ ನಿಲ್ಲಿಸುತ್ತಿದ್ದು ಕ್ರಮ ವಹಿಸಲು ಕೋರಿರುತ್ತಾರೆ.

16. ನಗರದಲ್ಲಿ ಓಡಾಡುವ ಆಟೋಗಳ ಹಿಂದೆ ಚಾಲಕರು ವಿಳಾಸ ನಮೂದು ಮಾಡಿರುವುದಿಲ್ಲ ಹಾಗೂ ಪ್ರತಿನಿತ್ಯ ಬೆಳಿಗ್ಗೆ ಕಾಲೇಜುಗಳಿಗೆ ಅಪ್ರಾಪ್ತ ವಯಸ್ಸಿನ ಚಾಲಕರು ಬೈಕುಗಳನ್ನು ಓಡಿಸುತ್ತಿದ್ದು ಕ್ರಮವಹಿಸಲು ಕೋರಿರುತ್ತಾರೆ.

17. ವಿನೋಬನಗರ ರವರು 1ನೇ ಮೇನ್ ನರಹರಿಶೇಠ್ ಸಮುದಾಯ ಭವನದಲ್ಲಿ ಒಳಗಡೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳದೇ ಕಲ್ಯಾಣ ಮಂಟಪದ ಮುಂಭಾಗ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ, ಸಾರ್ವಜನಿಕರಿಗೆ ಅಡಚಣೆ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ.

18. ನಗರದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ತನ್ನ ಮಗಳು ಕಾಣೆಯಾದ ಬಗ್ಗೆ ದೂರು ನೀಡಿದ್ದು ಈವರೆಗೆ ಯಾವುದೇ ಕ್ರಮ ವಹಿಸಿರುವುದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧೀಕ್ಷಕರವರು ತಿಳಿಸಿರುತ್ತಾರೆ

19. ಅಜಾದ್ ನಗರದಲ್ಲಿ ವಿಪರೀತ ಗಾಂಜಾ ಮಾರಾಟ ಮಾಡುತ್ತಿದ್ದು ಕ್ರಮವಹಿಸಲು ಕೋರಿರುತ್ತಾರೆ.

20. ನಗರದ ಬಿ.ಇ.ಐ.ಟಿ. ಕಾಲೇಜು ರಸ್ತೆಯಲ್ಲಿ ಪುಟ್‌ಪಾತ್‌ಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ ಹಾಗೂ ಪಾದಾಚಾರಿಗಳಿಗೆ ಓಡಾಡಲು ಬಿಡದೇ ವೇಗವಾಗಿ ವಾಹನಗಳನ್ನು ಓಡಿಸುತ್ತಿರುವುದಾಗಿ ತಿಳಿಸಿರುತ್ತಾರೆ.

21. ನಗರದ ನಿಟ್ಟುವಳ್ಳಿಯಲ್ಲಿನ ದುರ್ಗಾಂಬಿಕ ದೇವಸ್ಥಾನದ ಸಮೀಪ ಬೆಳಿಗ್ಗೆ 05-00 ಗಂಟೆಗೆ ವಾಹನಗಳನ್ನು ನಿಲ್ಲಿಸಿಕೊಂಡು ಮಧ್ಯಸೇವನೆ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕೆಟಿಜೆ ನಗರ ಠಾಣಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿರುತ್ತಾರೆ.

22. ಪ್ರತಿನಿತ್ಯ ಮಾಯಾಕೊಂಡ ದಿಂದ ಬೆಳಿಗ್ಗೆ 8-45ಕ್ಕೆ ಬಸ್ ಇದ್ದು ಇತ್ತಿಚೇಗೆ ಸಮಯಕ್ಕೆ ಸರಿಯಾಗಿ ಬರುತ್ತಿರುವುದಿಲ್ಲ ಹಾಗೂ ಕೊಡಗನೂರು ಕೆರೆ ಏರಿ ಮೇಲಿನ ರಸ್ತೆಯನ್ನು ತುರ್ತಾಗಿ ಸರಿಪಡಿಸಲು ಕೋರಿಕೊಂಡಿರುತ್ತಾರೆ. ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿರುತ್ತಾರೆ

23. ದ್ವಿ-ಚಕ್ರ ವಾಹನ ಸವಾರರು ಹೆಲ್ಮೇಟ್ ಧರಿಸದೇ ವೇಗವಾಗಿ ಬೈಕು ಚಾಲಾಯಿಸುತ್ತಿರುವುದಾಗಿ ತಿಳಿಸಿರುತ್ತಾರೆ.

24. ಶಿರಮಗೊಂಡನಹಳ್ಳಿ ರಸ್ತೆಯಲ್ಲಿ ರಾತ್ರಿ ವೇಳೆ ಬೀದಿ ದೀಪ ಇಲ್ಲದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ಬೆಳಕಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಜನರು ಮಧ್ಯಸೇವನೆ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ.

25. ನಗರದ ಆಶೋಕ ಚಿತ್ರಮಂದಿರದ ಹಿಂಭಾಗ ಒಮ್ಮುಖ ರಸ್ತೆಯಲ್ಲಿ ಅಂಡರ್ ಪಾಸ್ ಪಕ್ಕದಲ್ಲಿ ಸೂಚನಾ ಫಲಕ ಸರಿಯಾಗಿ ಅಳವಡಿಸಿರುವುದಿಲ್ಲ. ಡಿವೈಡರ್ ಮೇಲೆ ಪ್ಲೆಕ್ಸ್ ಹಾಕಿದ್ದು ಕ್ರಮ ವಹಿಸಲು ಕೋರಿರುತ್ತಾರೆ.

26. ನಗರದಲ್ಲಿನ ಹರಿಹರ ಬಸ್‌ನಿಲ್ದಾಣದ ಪಿ.ಬಿ. ರಸ್ತೆಯಲ್ಲಿ ಆಟೋ ಚಾಲಕರು ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಕುರಿಸಿಕೊಂಡು ಓಡಿಸುತ್ತಿದ್ದು ಕ್ರಮವಹಿಸಲು ಕೋರಿಕೊಂಡಿರುತ್ತಾರೆ.

27. ಬಸ್‌ನಿಲ್ದಾಣದ ಹಿಂಭಾಗ ಬಾರ್ ಎದರುಗಡೆ ವಾಹನಗಳನ್ನು ಸವಾರರು ಓಡಿಸುತ್ತಿರುತ್ತಾರೆ. ಸಿ.ಸಿ. ಕ್ಯಾಮರ ಅಳವಡಿಸಲು ಮತ್ತು ಅಲ್ಲದೆ ಚನ್ನಗಿರಿಯಲ್ಲಿನ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯುವಾಗ ಮಂಗಳಮುಖಿಯರು ಒಳಗಡೆ ಬಂದು ಹೆಚ್ಚಿನ ಹಣಕ್ಕೆ ಒತ್ತಾಯಿಸುತ್ತಿದ್ದು ಕ್ರಮ ವಹಿಸಲು ಕೋರಿರುತ್ತಾರೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ನಿರೀಕ್ಷಕರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿರುತ್ತಾರೆ.

28. ಹೆಮ್ಮನ ಬೇತೂರು ರವರು ಗ್ರಾಮದಲ್ಲಿ ಬೆಳಿಗ್ಗೆ 5-00 ಗಂಟೆಗೆ ಮಧ್ಯ ಮಾರಾಟ ನಡೆಸುತ್ತಿದ್ದು ಕ್ರಮವಹಿಸಲು ಕೋರಿರುತ್ತಾರೆ.
29. ನಗರದ ಬೂದಾಳ್‌ರಸ್ತೆ ತಾಜ್ ಪ್ಯಾಲೇಸ್ ಮುಂಭಾಗದ 120 ಅಡಿ ರಸ್ತೆ ಇದ್ದು ಇದು 25 ಅಡಿ ರಸ್ತೆ ಬಿಡದೇ ಅಂಗಡಿ ಮಾಲೀಕರು ಪುಟ್‌ಫಾತ್ ಒತ್ತುವರಿಮಾಡಿ ಇಟ್ಟಿಗೆ ಇಟ್ಟು ಕೊಂಡು ಹಾಗೂ ಆಖ್ತರ್ ರಾಜಾ ಸರ್ಕಲ್ ವರೆಗೆ ವಾಹನಗಳನ್ನು ರಸ್ತೆಯಲ್ಲಿ ಪಾರ್ಕ್ ಮಾಡುತ್ತಿದ್ದು ಕ್ರಮವಹಿಸಲು ಕೋರಿರುತ್ತಾರೆ.

30. ದಾವಣಗೆರೆ ನಗರದ ವಾಣಿಹೊಂಡ ಶೋ ರೋಂ, ಆಶ್ವಿನಿ ಆಸ್ಪತ್ರೆ ರಸ್ತೆಯ ಮುಂಭಾಗದಲ್ಲಿ ವಾಹನಗಳನ್ನು ನಿಲ್ಲಿಸುವುದು, ಪಕ್ಕದಲ್ಲಿನ ಟೈರ್ ಅಂಗಡಿಯವರು ರಸ್ತೆಯಲ್ಲಿ ಟೈರುಗಳನ್ನು ಇಡುವುದು ಹಾಗೂ ಕಬ್ಬಿಣದ ಅಂಡಿಯವರು ಸಹ ರಸ್ತೆಯಲ್ಲಿ ಕಬ್ಬಿಣವನ್ನು ಇಟ್ಟು ತೊಂದರೆ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ.

31. ದಾವಣಗೆರೆ ರವರು ನಗರದ ನಿಜಲಿಂಗಪ್ಪ ಬಡಾವಣೆ, ಡಿ.ಸಿ. ಸರ್ಕಲ್ ಬಳಿ ಸಾರ್ವಜನಿಕರು ವಿಪರೀತ ಸಿಗರೇಟ್ ಸೇವನೆ ಮಾಡುತ್ತಿರುತ್ತಾರೆ ಹಾಗೂ ರಾಜೀವ್ ಗಾಂಧಿ ಬಡಾವಣೆ ಯಲ್ಲಿ ಹುಟ್ಟಿದಹಬ್ಬನ್ನು ಜನರು ಆಚರಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿಮಾಡುತ್ತಿರುವುದಾಗಿ ತಿಳಿಸಿರುತ್ತಾರೆ.

32. ಎಂ.ಸಿ.ಸಿ. ಬಿ ಬ್ಲಾಕ್ 3ನೇ ಮೇನ್ 4ನೇ ಕ್ರಾಸ್ ನಲ್ಲಿರುವ 03 ಕಾಫಿಬಾರ್‌ಗಳು ರಾತ್ರಿ ಎಲ್ಲಾ ತೆರೆದಿರುವುದಾಗಿ ತಿಳಿಸಿರುತ್ತಾರೆ.

33. ಕಾಳಿಕಾ ದೇವಿ ಚನ್ನಬಸಪ್ಪ ಬಟ್ಟೆ ಅಂಗಡಿ ಮುಂದೆ ಆಟೋಗಳು ರಸ್ತೆಯ ಮಧ್ಯದಲ್ಲಿಯೇ ನಿಲ್ಲಿಸಿಕೊಂಡಿರುತ್ತಾರೆ. ವಿಜಯಲಕ್ಷಿö್ಮ ರಸ್ತೆಯ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿಯೇ ಕೈಗಾಡಿಗಳನ್ನು ನಿಲ್ಲಿಸಿಕೊಂಡಿರುವುದಾಗಿ ತಿಳಿಸಿರುತ್ತಾರೆ.

34. ದಾವಣಗೆರೆ ನಗರದ ಪ್ರಮುಖ ಸರ್ಕಲ್‌ಗಳಾದ ಜಯದೇವ, ವಿಧ್ಯಾರ್ಥಿಭವನ, ಭರಣಿ ಹೋಟಲ್ ಮುಂಭಾಗದ ರಸ್ತೆಯಲ್ಲಿ ಹಾಗೂ ಸಿಗ್ನಲ್ ಗಳಲ್ಲಿ ಬಸ್ ಮತ್ತು ವಾಹನಗಳನ್ನು ನಿಲ್ಲಿಸಿಕೊಂಡು ಸಂಚಾರಕ್ಕೆ ಅಡಚಣೆವುಂಟು ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ.

35. ಚನ್ನಗಿರಿ ಪಟ್ಟಣದ ಭಗೀರಥ ಸರ್ಕಲ್, ತುಮ್‌ಕೋಸ್ ಮುಂಭಾಗದ ರಸ್ತೆಯಲ್ಲಿ ಹೆಚ್ಚು ಹೆಚ್ಚು ಅಪಘಾತಗಳನ್ನು ಸಂಭವಿಸುತ್ತಿದ್ದು ಪೊಲೀಸರನ್ನು ನೇಮಿಸಲು ಕೇಳಿಕೊಂಡಿರುತ್ತಾರೆ.

36. ಅವರಗೊಳ್ಳ ರವರು ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ರಸ್ತೆಯಲ್ಲಿ ಹಂಪ್ಸ್ ಹಾಕಿರುವುದಿಲ್ಲ, ರಸ್ತೆಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿರುವುದಿಲ್ಲ ತಿಳಿಸಿರುತ್ತಾರೆ.

37. ಜಿ.ಎಂ.ಐ.ಟಿ. ಕಾಲೇಜು ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್ ವರೆಗೆ ಶೋ ರೋಂ ನವರು ಪುಟ್‌ಫಾತ್ ಒತ್ತುವರಿಮಾಡಿಕೊಂಡಿರುತ್ತಾರೆ. ಹಾಗೂ ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ಬರುವ ಪ್ಲೆöÊ-ಓವರ್ ಮೇಲೆ ರಾತ್ರಿ ವೇಳೆ ಸಾರ್ವಜನಿಕರು ಮಧ್ಯ ಸೇವನೆ ಮಾಡುತ್ತಾ ಗಲಾಟೆ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ.

38. ನಗರದ ಚೌಕಿಪೇಟೆಯಲ್ಲಿ ಹಾಸಬಾವಿ ಸರ್ಕಲ್-ಬಕ್ಕೇಶ್ವರ ದೇವಸ್ಥಾನದ ಬಳಿ ರಸ್ತೆಯಲ್ಲಿ ಪುಟ್‌ಫಾತ್ ಒತ್ತುವರಿ ಮಾಡಿಕೊಂಡು ಅಂಗಡಿಯವರು ಸಾಮಾನುಗಳನ್ನು ಇಟ್ಟುಕೊಂಡಿರುವುದಾಗಿ ತಿಳಿಸಿರುತ್ತಾರೆ.

39. ಮಲೆಬೆನ್ನೂರು ರವರು ಗ್ರಾಮದ ದರ್ಗಾದ ಬಳಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿರುವುದಾಗಿ ತಿಳಿಸಿರುತ್ತಾರೆ.

ದಾವಣಗೆರೆ ನಗರ ಹಾಗೂ ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗಾಗಿ ನಡೆಸಿದ ಪೋನ್-ಇನ್ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಸಾರ್ವಜನಿಕರು ಪೋನ್ ಮಾಡಿ ದಾವಣಗೆರೆ ನಗರ ಹಾಗೂ ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆ ಸಮಸ್ಯೆಗಳು ಹಾಗೂ ಸುಧಾರಣೆ ಸಂಬಂಧ ತಮ್ಮ ಅನಿಸಿಕೆ, ಅಹವಾಲುಗಳನ್ನು ಹಂಚಿಕೊಂಡರು ಹಾಗೂ ಸಂಚಾರ ಸಮಸ್ಯೆಗಳಲ್ಲದೇ ಅಕ್ರಮವಾಗಿ ಗಾಂಜಾ ಮಾರಾಟ, ಮದ್ಯ ಮಾರಾಟ, ಪಡಿತರ ಅಕ್ಕಿ ಮಾರಾಟ ಮಾಡುತ್ತಿರುವ ಬಗ್ಗೆ ತಿಳಿಸಿದರು. ಕೆಲವರು ತಮ್ಮ ವೈಯುಕ್ತಿಕ ಪ್ರಕರಣಗಳ ಬಗ್ಗೆ ತಿಳಿಸಿದರು. ಒಂದು ಗಂಟೆಗೂ ಹೆಚ್ಚು ಸಮಯ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಪ್ರತಿಯೊಬ್ಬರ ಕರೆಗೆ ಸ್ಪಂಧಿಸಿ ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು ಹಾಗೂ ದೂರುಗಳಿಗೆ ಸಂಬAಧಿಸಿದAತೆ ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ ಕ್ರಮಕೈಗೊಳ್ಳುವ ಬಗ್ಗೆ ಸೂಚನೆಗಳನ್ನು ನೀಡಿದರು.

ವಿಶೇಷವಾಗಿ ಸಂಚಾರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಗರ ಡಿವೈಎಸ್ಪಿ ರವರಿಗೆ ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಂಡು ವರದಿ ನೀಡಲು ಸೂಚಿಸಿರುತ್ತಾರೆ

ಪೋನ್-ಇನ್ ಕಾರ್ಯಕ್ರಮದಲ್ಲಿ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ರವರಾದ ಶ್ರೀ ಬಸವರಾಜ್ ಬಿ ಎಸ್ ರವರು, ನಗರ ಡಿವೈಎಸ್ಪಿ ಶ್ರೀ ಶರಣಬಸವೇಶ್ವರ ರವರು, ಪೊಲೀಸ್ ನಿರೀಕ್ಷಕರಾದ ಶ್ರೀ ತೇಜಾವತಿ ಹಾಗೂ ಪಿಎಸ್ ಐ ರವರಾದ ಶ್ರೀ ಅರವಿಂದ್ & ರವೀಂದ್ರ ಕಾಳ ಬೈರವ, ಮಹಾದೇವ ಭತ್ತೆ, ನಿರ್ಮಲ ರವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳು

error: Content is protected !!