ವ್ಯಸಗಳಿಗೆ ಬಲಿಯಾಗದಂತೆ ವಿದ್ಯಾರ್ಥಿಗಳಿಗೆ ಎಸ್.ಪಿ ರಿಷ್ಯಂತ್ ಕರೆ

ದಾವಣಗೆರೆ: ವಿದ್ಯಾರ್ಥಿಗಳು ಸಮಾಜದಲ್ಲಿ ಯಶಸ್ವಿ ಆಗಬೇಕೆಂದರೆ ದೀರ್ಘವಾದ ಪ್ರಯತ್ನ ಪಡಬೇಕು, ಶಿಕ್ಷಣದ ದಿನಗಳು ಕಹಿಯಾಗಿರಬಹುದು ಆದರೆ ಮುಂದೆ ಒಂದು ಸಮಯದಲ್ಲಿ ಅದರ ಫಲ ಸಿಹಿಯಾಗಿರುತ್ತದೆ ಎಂದು  ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿ  ಸಿ.ಬಿ. ರಿಷ್ಯಂತ್ ಹೇಳಿದರು .

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ಅವರು   ವ್ಯಸನಗಳಿಗೆ ಇಂದಿನ  ಪೀಳಿಗೆಯ  ವಿದ್ಯಾರ್ಥಿಗಳು ಬಲಿಯಾಗದೇ   ಜೀವನದಲ್ಲಿ ಗುರಿಯೊಂದಿಗೆ ಸಾಗಬೇಕು ಹಾಗೂ  ಶಿಕ್ಷಣ ಮತ್ತು ಸಮಯದ ಮಹತ್ವದ ಬಗ್ಗೆ ತಿಳಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ   ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಪ್ರಭಾರ ಪ್ರಾಂಶುಪಾಲರಾದ ಡಾ. ಟಿ.ಮಂಜಣ್ಣ ಮಾತಾನಾಡಿ ಕಾಲೇಜು  ಮಟ್ಟದ   ವಿದ್ಯಾರ್ಥಿಗಳಿಗೆ  ಇಂತಹ ವಿಚಾರಗಳ ಅರಿವು ಅತ್ಯಗತ್ಯ  ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ  ಅಪರಾಧ  ಮಾಸಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ  ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಡಾವಣೆ ಪೊಲೀಸ್ ಸ್ಟೇಷನ್ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ, ಆಙSP ದೊಡ್ಡಮಣಿ ಮಹೇಶ್,  ಕಾಲೇಜಿನ ವ್ಯವಸ್ಥಾಪಕರಾದ ಗೀತಾದೇವಿ, ಸಾಂಸ್ಕøತಿಕ ಸಮಿತಿ ಸಂಚಾಲಕರಾದ ಲತಾ ಎಸ್ ಎಮ್ ಸೇರಿದಂತೆ ಕಾಲೇಜಿನ  ಬೋಧಕ ಬೋಧಕೇತರ ಸಿಬ್ಬಂದಿಗಳು  ಕಾರ್ಯಕ್ರಮದಲ್ಲಿ ಹಾಜರಾಗಿದ್ದರು.

Leave a Reply

Your email address will not be published. Required fields are marked *

error: Content is protected !!