ಪೊಲೀಸ್ ಕಾನ್ಸ್‌ಟೇಬಲ್ ಎಸ್.ಹೇಮಣ್ಣರ ಕರ್ತವ್ಯ ಮೆಚ್ಚಿ ಎಸ್ಪಿ ರಿಷ್ಯಂತ್ ಶ್ಲಾಘನೀಯ ಪತ್ರ ನೀಡಿ ಪ್ರಶಂಸೆ
ದಾವಣಗೆರೆ: ಜಿಲ್ಲಾ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್ ಎಸ್.ಹೇಮಣ್ಣ ಅವರಿಗೆ ಪೊಲೀಸ್ ಅಧೀಕ್ಷಕರವರಾದ ಶ್ರೀ ಸಿ.ಬಿ.ರಿಷ್ಯಂತ್ ಕಚೇರಿಯಲ್ಲಿ ಶ್ಲಾಘನೀಯ ಪತ್ರ ನೀಡಿ ಅಭಿನಂಧಿಸಿದರು.
ಪೊಲೀಸ್ ಕಾನ್ಸ್‌ಟೇಬಲ್ ಎಸ್.ಹೇಮಣ್ಣ ಅವರು ಇತ್ತೀಚೆಗೆ ನಗರದ ಗುಂಡಿ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮಳೆಯಿಂದ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಆ ಸ್ಥಳದಲ್ಲಿ ವಾಹನ ಸವಾರರು ಸಂಚರಿಸಲು ಕಷ್ಟಪಡುತ್ತಿದ್ದುದ್ದನ್ನು ಗಮನಿಸಿ ಕೂಡಲೇ ಅಲ್ಲಿಯೇ ರಸ್ತೆ ಪಕ್ಕದಲ್ಲಿದ್ದ ಜೆಲ್ಲಿಯನ್ನು ತುಂಬಿಕೊಂಡು ಆ ಗುಂಡಿಯನ್ನು ಮುಚ್ಚಿ ವಾಹನ ಸವಾರರು ಸರಾಗವಾಗಿ ಸಂಚರಿಸಲು ಅನುವುಮಾಡಿಕೊಟ್ಟು ಕರ್ತವ್ಯ ನಿಷ್ಠೆ ಮೆರೆದಿದ್ದರು.
ಹೇಮಣ್ಣ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಗೂ ಪೊಲಿಸ್ ಇಲಾಖೆಯ ಘನತೆಯನ್ನೂ ಸಹ ಹೆಚ್ಚಿಸುವ ಕಾರ್ಯವಾಗಿರುವುದರಿಂದ ಅವರ ಕಾರ್ಯ ಮೆಚ್ಚಿ ಎಸ್ಪಿ ರಿಷ್ಯಂತ್ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶ್ಲಾಘನೀಯ ಪತ್ರ ನೀಡಿ ಪ್ರಶಂಸಿಸಿದರು.