ದಾವಣಗೆರೆ: ರೈತರಿಂದ & ವರ್ತಕರಿಂದ ಮೆಕ್ಕೆಜೋಳ ಖರೀದಿಸಿ ಹಣ ನೀಡದೆ ಮೋಸ ಮಾಡಿದ್ದ ಆರೋಪಿತರಿಂದ 2.68 ಕೋಟಿ ರೂ ಗಳನ್ನು ವಶಪಡಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಇಂದು ಪೂರ್ವ ವಲಯ ಐಜಿಪಿ ರವರಾದ ಶ್ರೀ ರವಿ ಎಸ್ ಐಪಿಎಸ್ ರವರು ಎಸ್ ಪಿ ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ರವರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.