ವಯೋ ನಿವೃತ್ತಿ ಹೊಂದಿದೆ ಹಿರಿಯ ಪೊಲೀಸರಿಗೆ ಹೃದಯಸ್ಪರ್ಶಿ ಸನ್ಮಾನಿಸಿದ ಎಸ್ ಪಿ ಉಮಾ ಪ್ರಶಾಂತ್

ದಾವಣಗೆರೆ: ಪೊಲೀಸ್ ಇಲಾಖೆಯಲ್ಲಿ ನೇಮಕ ಹೊಂದಿ ಸುಧೀರ್ಘ ಸೇವೆ ಸಲ್ಲಿಸಿ ಇಂದು ವಯೋ ನಿವೃತ್ತಿ ಹೊಂದಿದ ಗಾಂದಿ ನಗರ ಪೊಲೀ ಸ್ ಠಾಣೆಯಲ್ಲಿ ಪಿ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಅಂಜನಪ್ಪ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಎ.ಆರ್.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಜಿ.ವಿ.ನಾಗರಾಜ, ಕೆಟಿಜೆ ನಗರ ಪೊಲೀ ಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಧರ್ಮಪ್ಪ ರವರನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿಂದು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ನೀವೃತ್ತಿ ಜೀವನಕ್ಕೆ ಶುಭಕೋರಿ, ಸನ್ಮಾನಿಸಿದರು. ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದಿಸಿ ಬೀಳ್ಕೊಡಲಾಯಿತು.
ಈ ಸಂಧರ್ಭದಲ್ಲಿ ಜಿಲ್ಲಾ ಪೊಲೀಸ್ ಕಛೇರಿಯ ಸಹಾಯಕ ಆಡಳಿತಾಧಿಕಾರಿ ಶ್ರೀ ಮೇಹಬೂಬ್ ರವರು ಹಾಗೂ ನಿವೃತ್ತರಾದವರ ಕುಟುಂಬ ವರ್ಗ ಉಪಸ್ಥಿತರಿದ್ದರು