ಏಪ್ರಿಲ್ 5 ರಿಂದ ಬಸವಾಪಟ್ಟಣದ ಶ್ರೀ ದುರ್ಗಾಪರಮೇಶ್ವರಿ ಜಾತ್ರೆ

ದಾವಣಗೆರೆ: ಬರುವ ಎಪ್ರಿಲ್ 5 ರಿಂದ ಚನ್ನಗಿರಿ ತಾಲ್ಲೂಕು ಬಸವಾಪಟ್ಟಣದ ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವ ನಡೆಯಲಿದೆ.
ಏ.5ರ ಬುಧವಾರ ಆನೆ ಉತ್ಸವ ನಡೆಯಲಿದ್ದು, ಏ.6ರ ಗುರುವಾರ ಬೆಳಿಗ್ಗೆ ಬ್ರಾಹ್ಮೀ ಮಹೋತ್ಸವದಲ್ಲಿ ದೇವಿಯ ರಥೋತ್ಸವ ಅದ್ಧೂರಿಯಾಗಿ ನಡೆಯಲಿದೆ.
ದಿ.7ರ ಶುಕ್ರವಾರ ಸಂಜೆ 5 ಗಂಟೆಗೆ ಸಿಡಿ ಉತ್ಸವ, ದಿ.8ರ ಶನಿವಾರ ಸಂಜೆ ಭಂಡಾರ ತಂಡಿಗೆ (ಓಕಳಿ ಉತ್ಸವ) ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪಕರು ತಿಳಿಸಿದ್ದಾರೆ.