ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಂಧನಕ್ಕೆ ಶ್ರೀರಾಮ ಸೇನೆ ಮಣಿ ಸರ್ಕಾರ್ ಆಗ್ರಹ

ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಂಧನಕ್ಕೆ ಶ್ರೀರಾಮ ಸೇನೆ ಮಣಿ ಸರ್ಕಾರ್ ಆಗ್ರಹ
ದಾವಣಗೆರೆ: ಈ ಕೂಡಲೇ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಒಂದು ಒತ್ತಾಯಿಸಿರುವ ಶ್ರೀರಾಮ ಸೇನೆ, ಕೂಡಲೇ ಇವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್, ತಮ್ಮ ಕಚೇರಿಯಲ್ಲಿ 40,00,000 ರೂ. ಗಳನ್ನು ಲಂಚವಾಗಿ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿಮಾಡಿ ಕಛೇರಿಯನ್ನು ಪರಿಶೀಲನೆ ಮಾಡಿದಾಗ ಕಛೇರಿಯಲ್ಲಿ ಈ ಹಣವನ್ನು ಹೊರತುಪಡಿಸಿ ಕೋಟಿ ಕೋಟಿ ಹಣ ಆಸ್ತಿ ದಾಖಲೆಗಳು, ಚಿನ್ನ, ಬೆಳ್ಳಿ, ಆಸ್ತಿ ಪತ್ರಗಳು ದೊರಕಿವೆ.
ಈ ಪ್ರಕರಣದಲ್ಲಿ ಇವರ ತಂದೆ ಹಾಲಿ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪನವರು ಈ ಟೆಂಡರ್‌ಗರ ಲಂಚಪಡೆಯವ ಸಲುವಾಗಿ ಅವರ ಬೆಂಬಲವಿದ್ದು ಲೋಕಾಯುಕ್ತ ಅಧಿಕಾರಿಗಳು ಈ ವಿಚಾರವಾಗಿ ಚನ್ನಗಿರಿ ತಾಲ್ಲೂಕಿನ ಶಾಸಕರ ಮನೆಗಳ ಮೇಲೆ ಹಾಗೂ ಕಾರ್ಖಾನೆಗಳ ಮೇಲೂ ಸಹಃ ದಾಳಿ ಮಾಡಿದ್ದಾರೆ.
ಆ ಸಂದರ್ಭದಲ್ಲೂ ಸಹಃ ಲೋಕಾಯುಕ್ತ ಅಧಿಕಾರಿಗಳು ಊಹೆ ಮಾಡಲು ಸಾಧ್ಯವಾಗದಂತಹ ಕೋಟಿ ಕೋಟಿ ಹಣ ಹಾಗೂ ಕೆ.ಜಿ ಗಂಟಲೆ ಚಿನ್ನ, ಬೆಳ್ಳಿ ಆಸ್ತಿ ದಾಖಲೆಗಳು ದೊರಕಿವೆ. ಇನ್ನೂ ಇವರ ಕುಟುಂಬದ ನಿವಾಸಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಿದ್ದು, ಇವರ ಇನ್ನೊಬ್ಬ ಪುತ್ರ 2022-23ನೇ ಸಾಲಿನಲ್ಲಿ ಮಲ್ಲಿಕಾರ್ಜುನ್ ಇವರು ದಾವಣಗೆರೆ ಕುಂದುವಾಡ ಸರ್ವೇ ನಂ. 255/1, 4ಎಕರೆ, 23ಗುಂಟೆ ಜಮೀನು ಚಿಕ್ಕತೊಗಲೇರಿ ಸರ್ವೇ ನಂ. 3/1.103/2 47 ಎಕರೆ ಜಮೀನು, ಹರಪನಹಳ್ಳಿ ಅರಸಿಕೆರೆ ಹೋಬಳಿ ಮಾರಿಹಳ್ಳಿಯಲ್ಲಿ 50 ಎಕರೆ ಅಡಿಕೆ ತೋಟ ತಂದೆ ಮಕ್ಕಳು ಅಕ್ರಮವಾಗಿ ರಾಜಕೀಯ ಸರ್ಕಾರಿ ಹುದ್ದೆಯಲ್ಲಿ ಇದ್ದು, ಲಂಚಪಡೆದು ಅಕ್ರಮ ಆಸ್ತಿಯನ್ನು ಹೊಂದಿದ್ದಾರೆ.
ಈ ಹಿಂದೆ ಅಂದರೆ 2008-09ನೇ ಸಾಲಿನಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ದಾವಣಗೆರೆ ಜೆ.ಹೆಚ್ ಪಟೇಲ್ ಬಡಾವಣೆಯಲ್ಲಿ ಸಾಮಾನ್ಯ ಜನರಿಗೆ ಸರ್ಕಾರದಿಂದ ಖಾಲಿನಿವೇಶನಗಳನ್ನು ನೀಡಿದ್ದರು.
ಆ ನಿವೇಶನಗಳಲ್ಲಿ 113 ಜನ ಅಕ್ರಮ ಹೆಸಗಿ ಸುಳ್ಳು ದಾಖಲಾತಿಗಳನ್ನು ನೀಡಿ ಖಾಲಿ ನಿವೇಶನಗಳನ್ನು ಪಡೆದಿರುತ್ತಾರೆ. ಇವರಿಗೆ ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿದ ಅಧಿಕಾರಿ ರೇವಣಸಿದ್ದಪ್ಪ ಇವರುಗಳ ಮೇಲೆ ಈ ಅಕ್ರಮದ ಬಗ್ಗೆ ನಾನು 2013ರಲ್ಲಿ ಇವರುಗಳ ಮೇಲೆ ಪ್ರಕರಣಗಳನ್ನು ದಾಖಲು ಮಾಡಿದ್ದೇನೆ. 2015ನೇ ಸಾಲಿನಲ್ಲಿ ಬೆಂಗಳೂರು ವಿಶೇಷ ಲೋಕಾಯುಕ್ತ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಈಗಲೂ ಸಹ ವಿಚಾರಣೆ ನಡೆಯುತ್ತಿದೆ.
ಈ ದೂರಿನಲ್ಲಿ ಒಂದೇ ಕುಟುಂಬದ ಆಗಿನ ಹಾಗೂ ಹಾಲಿ ಚನ್ನಗಿರಿ ಶಾಸಕರಾದ ಮಾಡಾಳ್ ವಿರುಪಾಕ್ಷಪ್ಪ ಹಾಗೂ ಇವರ ಪತ್ರ ಮಲ್ಲಿಕಾರ್ಜುನ್ ಎಂ.ವಿ ಅವರ ಸೊಸೆ ಸುಧಾರಾಣಿ ಹೆಚ್.ಜಿ ಮತ್ತು ಇನ್ನೊಬ್ಬ ಪತ್ರ ಪ್ರವೀಣ್ ಇವರುಗಳ ಮೇಲೂ ಸಹ ಪ್ರಕರಣ ದಾಖಲಾಗಿರುತ್ತದೆ.
ಇಷ್ಟೆಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು ಇವರ ಇನ್ನೊಬ್ಬ ಪತ್ರ ಪ್ರಶಾಂತ್ ಮಾಡಾಳ್ ಇವರು ಕೆ.ಎ.ಎಸ್ ಅಧಿಕಾರಿಯಾಗಿ 2017ರಲ್ಲಿ ಬೆಂಗಳೂರಿನ ಕರ್ನಾಟಕ ರೂರಲ್ ಇಫ್ರಾಸ್ಟಕ್ಟ ಲಿ. ಅಲ್ಲಿ ಕರ್ತವ್ಯ ನಿರ್ವಹಿಸುವ ಸಂದಂರ್ಭದಲ್ಲಿ 55 ಕೋಟಿ ರೂಪಾಯಿ ಗಳ ಭ್ರಷ್ಟಾಚಾರ ನಡೆಸಿದ ಹಿನ್್ನೆಲೆಯಲ್ಲಿ ಸಸ್ಪೆಂಡ್ ಆಗಿ ಇವರ ತಂದೆ ಶಾಸಕರಾದ ಕಾರಣ ರಾಜಕೀಯದ ಬೆಂಬಲ ಪಡೆದು ಪುನಃ ಉದ್ಯೋಗಕ್ಕೆ ಬಂದು ಈಗ ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿರಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಇದ್ದು ಆ ಇಲಾಖೆಯಲ್ಲೂ ಸಹಃ ಅಕ್ರಮವಾಗಿ ಟೆಂಡರ್‌ಗಳಿಗೆ ಲಂಚ ಪಡೆಯುತ್ತಿದ್ದಾರೆ.
ಈ ಕುಟುಂಬದ ಮೇಲೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದರೂ ಸಹಃ ಯಾವುದೇ ಭಯವಿಲ್ಲದೇ ಮತ್ತೆ ಮತ್ತೆ ಲಂಚಗುಳಿತನ ಪ್ರದರ್ಶನಿಸುತ್ತಿದ್ದಾರೆ. ಕೂಡಲೇ ಶಾಸಕ ಮಾಡಾಳು ವಿರೂಪಾಕ್ಷಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಉಪಾಧ್ಯಕ್ಷ ಆಲೂರು ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಸಾಗರ್, ಖಜಾಂಚಿ, ಶ್ರೀಧರ್, ಸಂಘಟನಾ ಕಾರ್ಯದರ್ಶಿ ವಿನೋದ್ ರಾಜ್, ನಗರಾಧ್ಯಕ್ಷರು ರಾಹುಲ್ , ಉತ್ತರ ವಲಯ ಅಧ್ಯಕ್ಷರು ರಮೇಶ್, ದಕ್ಷಿಣ ವಲಯ ಅಧ್ಯಕ್ಷರು ರಾಜು, ಅವಿನಾಶ್ ,ರಘು , ವಿನಯ್ ಉಪಸ್ಥಿತರಿದ್ದರು.