Sri Shaila Gift DC: ಶ್ರೀ ಶೈಲ ಜಗದ್ಗುರು ಅನುಗ್ರಹಿಸಿದ್ದ ವಿಭೂತಿ ಕ್ರೀಯಾ ಗಟ್ಟಿ ಪಡೆದ ಡಿಸಿ ಮಹಾಂತೇಶ್ ಬೀಳಗಿ

ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ 1008 ಶ್ರೀ ಶೈಲ ಜಗದ್ಗುರುಗಳಾದ ಡಾ.ಚೆನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಭಗವತ್ಪಾದಂಗಳವರ ಅನುಗ್ರಹಿಸಿದ್ದ ವಿಭೂತಿ ಕ್ರೀಯಾ ಗಟ್ಟಿಯನ್ನು ಇಂದು ನೀಡಲಾಯಿತು.
ವಿಭೂತಿಯನ್ನು ಜಿಲ್ಲಾಧಿಕಾರಿಗಳು ಗೌರವದಿಂದ ಶ್ರೀಪೀಠಕ್ಕೆ ಕಾಣಿಕೆ ಸಲ್ಲಿಸುವದರ ಮೂಲಕ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶ್ರೀ ಆರ್ ಟಿ ಪ್ರಶಾಂತ ದುಗ್ಗತಿಮಠ,
ಕಾರ್ಯದರ್ಶಿಗಳು, ಎಸ್ ಜೆ ವಿ ಪಿ ಹರಿಹರ, ಹಾಗು ಅಧ್ಯಕ್ಷರು ಅಖಿಲ ಭಾರತೀಯ ವೀರಶೈವ ಮಹಾಸಭಾ(ರಿ)ದಾವಣಗೆರೆ ಯುವ ಘಟಕ ಇವರು ವಿಭೂತಿ ಗಟ್ಟಿಯನ್ನ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.