ಶ್ರೀರಾಮಸೇನೆ ಜಿಲ್ಲಾದ್ಯಕ್ಷ ಮಣಿಕಂಠರಿಂದ ಅಳಿಲು ಸೇವೆ: ಪತ್ರಕರ್ತರಿಗೆ ಹಬೆ ಯಂತ್ರ ವಿತರಣೆ
ದಾವಣಗೆರೆ : ಕೊರೊನ ಸಂಕಷ್ಟದ ಸಮಯದಲ್ಲಿ ತಮ್ಮ ಕುಟುಂಬವನ್ನು ಲೆಕ್ಕಿಸದೆ ನಗರದಲ್ಲಿ ಸಂಚರಿಸುತ್ತಾ ಕೊರೊನಾದ ಮಾಹಿತಿಯನ್ನು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿರುವ ಪತ್ರಕರ್ತರಿಗೆ ಶ್ರೀರಾಮ ಸೇನೆ ವತಿಯಿಂದ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಸದಸ್ಯರಿ ಹಬೆಯಂತ್ರವನ್ನು ವಿತರಿಸಲಾಯಿತು.
ಶ್ರೀರಾಮ ಸೇನೆಯ ಜಿಲ್ಲಾ ಉಪಾಧ್ಯಕ್ಷ ಆಲೂರು ರಾಜಶೇಖರ್, ಕೋವಿಡ್ ಮಹಾಮಾರಿಯ ಇಂದಿನ ದಿನಮಾನಗಳಲ್ಲಿ ಹೊರಗೆ ಬರಲು ಎಲ್ಲರೂ ಹಿಂಜರಿಯುತ್ತಾರೆ. ಆದರೆ ನಗರದ ಸ್ಥಿತಿಗತಿ ಮತ್ತು ಕೊರೊನಾದ ಮಾಹಿತಿ ಜನತೆಗೆ ಮುಟ್ಟಿಸುವಲ್ಲಿ ಮುದ್ರಣ ಮತ್ತು ದೃಶ್ಯ ಮಾಧ್ಯಮದವರು ಸುದ್ದಿಯನ್ನು ಎಲ್ಲರ ಮನೆ ಬಾಗಿಲಿಗೆ ತಲುಪಿಸುತ್ತಾರೆ. ಇಂತಹ ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಹಬೆಯಂತ್ರಗಳನ್ನು ನೀಡಲಾಗುತ್ತಿದೆ ಎಂದರು.
ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಮಾತನಾಡಿ, ವೈದ್ಯಕೀಯ ಸಿಬ್ಬಂದಿ, ಪೊಲೀಸ್, ಪೌರ ಕಾರ್ಮಿಕರಿಗೆ ಸರ್ಕಾರ ಹಬೆ ಯಂತ್ರಗಳನ್ನು ವಿತರಿಸಿದೆ. ಆದರೆ ಪತ್ರಕರ್ತರನ್ನು ನಿರ್ಲಕ್ಷಿಸಿದೆ. ಈ ನಿಟ್ಟಿನಲ್ಲಿ ಇದನ್ನು ಗಮನಿಸಿದ ಶ್ರೀರಾಮಸೇನೆ ರಾಷ್ಟಿಯ ಅಧ್ಯಕ್ಷ ಪ್ರಮೋದ್ ಮುತಾಲಿಕರ ಮಾರ್ಗದರ್ಶನದಂತೆ ಅಳಿಲು ಸೇವೆ ಮಾಡುತ್ತಿದೆ. ಈ ಕೂಡಲೇ ಸರ್ಕಾರ ಪತ್ರಕರ್ತರ ಕ್ಷೇಮಕ್ಕೆ ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್.ಆರಾಧ್ಯ ಮಾತನಾಡಿ, ಪತ್ರಕರ್ತರನ್ನು ಗುರುತಿಸುವ ಕೆಲಸ ಕಡಿಮೆ ಆಗಿದೆ. ಸುದ್ದಿ, ಬರಹ ಪ್ರಕಟ ಮಾಡಬೇಕು ಎಂದು ಹೇಳುವವರು ಹೆಚ್ಚಾಗಿರುವ ಕಾಲಘಟ್ಟದಲ್ಲಿ ಈ ವೇಳೆ ಕೊರೊನಾದಂಥ ಸಂದರ್ಭದಲ್ಲಿ ಪತ್ರಕರ್ತರನ್ನು ಗುರುತಿಸಿ ಸಹಕಾರ ಮಾಡುವರಲ್ಲಿ ಕೆಲವೇ ಕೆಲವರುು, ಅದರಲ್ಲಿ ಶ್ರೀರಾಮ ಸೇನೆಯ ಮುಖಂಡರ ಕೆಲಸ ಪ್ರಶಂಸನೀಯ ಎಂದರು.
ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಾಡಜ್ಜಿ, ಖಜಾಂಚಿ ನಂದ ಕುಮಾರ್, ಶ್ರೀರಾಮಸೇನೆಯ ಪದಾಧಿಕಾರಿಗಳಾದ ರಾಜ್ಯ ಸಂಪರ್ಕ ಪ್ರಮುಖ್ ಪರಶುರಾಮ ನಡುಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಗರ್, ವಿವೇಕ್ ಮೂರ್ತಿ, ಕರಾಟೆ ರಮೇಶ್, ವಿನೋದ್‌ರಾಜ್, ಸುನೀಲ್ ವಾಲಿ, ಶ್ರೀಧರ್, ರಾಹುಲ್, ರಮೇಶ್, ವಿನೋದ್ ವರ್ಣೇಕರ್, ರಾಜು, ರಘು, ಮಾರ್ಕಂಡೇಯಾ ಇತರರಿದ್ದರು.