ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಶ್ರೀಶೈಲ ಜಗದ್ಗುರುಗಳು

ದಾವಣಗೆರೆ: ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬೂತ ನಂಬರ 45 ರಲ್ಲಿ ಶ್ರೀಶೈಲ್ ಜಗದ್ಗುರು ಡಾ! ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರು ಸರದಿ ಸಾಲಿನಲ್ಲಿ ಮತದಾನವನ್ನು ಮಾಡಿದರು.ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಮತದಾನ ಪ್ರಜಾಪ್ರಭುತ್ವ ದೊಡ್ಡ ಹೆಜ್ಜೆ.ಈ ಹಿನ್ನಲೆಯಲ್ಲಿ ದೇಶದ ಪ್ರತಿಯೊಬ್ಬ ವ್ಯಕ್ತಿ ಮತದಾನ ಮಾಡುವುದು ಅವರ ಕರ್ತವ್ಯವಾಗಿದೆ.ಮತ ದಾನ ಮಾಡಬೇಕು ಹೊರತು.ಆಮಿಷ್ಯಕ್ಕೆ ಒಳಗಾಗಿ ಮತದಾನವನ್ನು ಮಾಡಬಾರದು.ಪ್ರತಿಯೊಬ್ಬರೂ ಮತದಾನ ಮಾಡಿ ಒಳ್ಳೆಯ ಉತ್ತಮವಾದ ನಾಯಕನನ್ನು ಆಯ್ಕೆ ಮಾಡಬೇಕು ಎಂದರು.