ಶ್ರೀಶೈಲ ಸ್ವಾಮೀಜಿಗಳಿಂದ ಪುನೀತ್ ಮನೆಗೆ ಭೇಟಿ.! ವಿಭೂತಿ ನೀಡಿ ಸಾಂತ್ವಾನ ನೀಡಿದ ಶ್ರೀಗಳು

ಬೆಂಗಳೂರು: ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ “ಕರ್ನಾಟಕ ರತ್ನ” ಪುನೀತ್ ರಾಜ್‍ಕುಮಾರ್ ಅವರ ಮನೆಗೆ ಶ್ರೀಶೈಲ ಜಗದ್ಗುರುಗಳು ಭೇಟಿ ನೀಡಿದ್ರು.
ದಿ.ಪುನೀತ್ ರಾಜಕುಮಾರ್ ಅವತ ಭಾವಚಿತ್ರಕ್ಕೆ ಮಂಗಳಾಕ್ಷತೆ ಹಾಕಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಶ್ರೀಶೈಲ ಜಗದ್ಗುರುಗಳನ್ನ ಅಪ್ಪು ಹಲವು ಭಾರಿ ಭೇಟಿ ನಿಡಿದ್ದರು, ನಮ್ಮ ಬಳಿ ಮುಕ್ತವಾಗಿ ಮಾತನಾಡುತ್ತಿದ್ದರು ಎಂದು ಸ್ಮರಿಸಿದರು.
ಪುನೀತ್ ಪತ್ನಿ ಅಶ್ವಿನಿ ಅವರಿಗೆ ವಿಭೂತಿಯನ್ನು ನೀಡಿ ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಕುಟುಂಬದ ಹಿರಿಯರು ಶ್ರೀಶೈಲ ಸ್ವಾಮೀಜಿ ಯವರ ಜೊತೆ ಭಾಗಿಯಾಗಿದ್ದರು.