ಎಸ್ ಎಸ್ ಹಾಗೂ ಎಸ್ ಎಸ್ ಎಂ ರಾಜಕಾರಣಿಗಳಾಗಲು ಅನ್ ಲಾಯಕ್: ಎಂ ಪಿ ಬಗ್ಗೆ ಮಾತಾಡಿದ್ರೆ ನೆಟ್ಟಗಿರಲ್ಲ – ಯಶವಂತರಾವ್ ಜಾದವ್
ದಾವಣಗೆರೆ: ರಾಜಕಾರಣದಲ್ಲಿ ಪ್ರಬಲವಾಗಿ ಬೆಳೆದಿರುವ ಸಂಸದ ಸಿದ್ದೇಶ್ವರ್ ಬೆಳವಣಿಗೆ ಸಹಿಸದೆ ಅಪ್ಪ, ಮಗ ಬಾಯಿಗೆಬಂದತೆ ಅವರ ಕುರಿತು ಆರೋಪಿಸುತ್ತಿದ್ದಾರೆ.ಇದು ಹೀಗೆ ಮುಂದುವರೆದರೆ ಅವರ ಭ್ರಷ್ಟಾಚಾರವನ್ನು ಜನತೆಯ ಮುಂದೆ ಬಿಚ್ಚಿಡಬೇಕಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಶಾಮನೂರು ಕುಟುಂಬದ ವಿರುದ್ಧ ಹರಿಹಾಯ್ದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಜಾಧವ್, ಸಂಸದ ಸಿದ್ದೇಶ್ವರ್ ಭೀಮಸಮುದ್ರದ ಭೀಮನಿದ್ದಂತೆ. ಅವರು ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಹಾಗೊಂದು ವೇಳೆ ಇಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲಿ ಪ್ರಾರಂಭವಾದರೆ ಶಾಮನೂರು ಒಡೆತನದ ಜೆಜೆಎಂ ಮೆಡಿಕಲ್ ಕಾಲೇಜಿಗೆ ಸೇರಿಕೊಂಡಿರುವುದರಿಂದ ಅವರಿಗೆ ವರ್ಷಕ್ಕೆ ₹250 ಕೋಟಿ ನಷ್ಟವಾಗಲಿದೆ. ಆದ್ದರಿಂದ ವೃತಾ ಸಂಸದರ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಸಂಸದರ ಕುರಿತು ಸುಮ್ಮನೇ ಆರೊಪಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಅಪ್ಪ, ಮಗ ನೀಚ ರಾಜಕಾರಣ ಮಾಡುವುದನ್ನು ಬಿಡುವುದು ಒಳ್ಳೆಯದು. ಇಲ್ಲವಾದರೆ ಪರಿಣಾಮ
ನೆಟ್ಟಗಿರುವುದಿಲ್ಲ – ಯಶವಂತರಾವ್ ಜಾದವ್
ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮಾಡಿರುವ ಭ್ರಷ್ಟಾಚಾರಗಳು ಸಾಕಷ್ಟಿವೆ. ಇವರಿಬ್ಬರು ರಾಜಕಾರಣಿಗಳಾಗಲು ಅನ್ ಲಾಯಕ್ ಗಳು ಎಂದು ದೂರಿದರು.
ಎಸ್. ಎಸ್. ಹೈಟೆಕ್ ಹಾಗೂ ಬಾಪೂಜಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿಲ್ಲ. ಬಡವರು ಏಳೆಂಟು ಲಕ್ಷ ರೂ., ಕಟ್ಟಿ ಚಿಕಿತ್ಸೆ ಪಡೆದಿರುವ ದಾಖಲೆ ನಮ್ಮ ಬಳಿ ಇವೆ. ಇದರಲ್ಲಿಯೇ ಕೊಟ್ಯಾಂತರ ರೂ., ಲಾಭಮಾಡಿಕೊಂಡಿರುವ ಇವರು. ಮೂರ್ನಾಲ್ಕು ಕೋಟಿ ವ್ಯಯಿಸಿ ಲಸಿಕೆ ಹಾಕುವ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.