ಎಸ್ ಎಸ್ ಕೇರ್ ಟ್ರಸ್ಟ್ ವತಿಯಿಂದ ಬಾಪೂಜಿ ಆಸ್ಪತ್ರೆ ವೈದ್ಯರಿಂದ ಮಹಿಳೆಯರಿಗೆ ಉಚಿತ ಆರೋಗ್ಯ ಶಿಬಿರ

ದಾವಣಗೆರೆ: ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬಾಪೂಜಿ ಆಸ್ಪತ್ರೆ ಹಾಗೂ ಬಾಪೂಜಿ ಡೆಂಟಲ್ ಕಾಲೇಜು, ಕಾಲೇಜು ಆಫ್ ಡೆಂಟಲ್ ಸೈನ್ಸ್ ವತಿಯಿಂದ ನಿಟುವಳ್ಳಿಯಲ್ಲಿ ಮಹಿಳೆಯರಿಗಾಗಿ ಉಚಿತ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರವನ್ನು ನಡೆಸಲಾಯಿತು.
ಶಿಬಿರದಲ್ಲಿ ಮಹಿಳೆಯರಿಗೆ ರಕ್ತ ತಪಾಸಣೆ, ಕಣ್ಣಿನ ತಪಾಸಣೆ, ಸ್ತನ ಆರೋಗ್ಯ ತಪಾಸಣೆ, ದಂತ ತಪಾಸಣೆ ಹಾಗೂ ಡಯಾಬಿಟಿಕ್ ನ್ಯೂರೋ ಥೆರಪಿ ಚಿಕಿತ್ಸೆ ಮಾಡಲಾಯಿತು. ಸುಮಾರು ೨೦೦ಕ್ಕೂ ಹೆಚ್ಚು ಮಹಿಳೆಯರು ವಿವಿಧ ತಪಾಸಣೆಗೆ ಒಳಗಾದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಸವಿತಾ ಗಣೇಶ್ ಹುಲ್ಮನಿ, ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ|| ಕುಮಾರ್, ಡಾ|| ಬಾಲು, ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ|| ಎನ್.ಕೆ.ಕಾಳಪ್ಪನವರ್, ಉಪ ಪ್ರಾಂಶುಪಾಲರಾದ ಡಾ|| ಅರುಣಕುಮಾರ್, ಮುಖಂಡರುಗಳಾದ ಎಂ.ಆರ್.ಮಾಲತೇಶ್, ಗಣೇಶ್ ಹುಲ್ಮನಿ ಉಮೇಶ್ ಮತ್ತಿತರರಿದ್ದರು.