ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯತ್ವ ಅಭಿಯಾನಕ್ಕೆ ಎಸ್ ಎಸ್ ಚಾಲನೆ.
ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯತ್ವ ಅಭಿಯಾನದ ಪೋಸ್ಟರ್ ಅನ್ನು ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿದ ರಾಷ್ಟ್ರೀಯ ಅಧ್ಯಕ್ಷರಾದ ಡಾ ಶ್ಯಾಮನೂರು ಶಿವಶಂಕರಪ್ಪನವರು, ದಾವಣಗೆರೆ ಜಿಲ್ಲಾ ಯುವ ಘಟಕದ ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮಾಜದವರು ನೆಲೆಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ರಾಷ್ಟೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ, ಯುವ ಮುಖಂಡ ಸಮರ್ಥ್ ಶ್ಯಾಮನೂರು, ಕುರುಡಿ ಗಿರೀಶ್, ಯುವ ಘಟಕ ಜಿಲ್ಲಾ ಅಧ್ಯಕ್ಷ ಶಂಭು ಉರೇಕೊಂಡಿ, ಕಾರ್ಯದರ್ಶಿಗಳಾದ ಶಿವರಾಜ್ ಜೆ , ಶಿವರತನ್, ಅಜಿತ್ ಆಲೂರ್, ನಿಧಿರಾಜ್ ಐನಳ್ಳಿ, ಕಾರ್ತಿಕ್ ಹಿರೇಮಠ್, ಅನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಚುನಾವಣೆ – 2024 ರಲ್ಲಿ ಸ್ಪರ್ದಿಸಲು ಮತ್ತು ಭಾಗವಹಿಸಲು ಇನ್ನು ಸದಸ್ಯರಾಗದೇ ಇರುವವರು ಮಹಾಸಭೆಯ ಸದಸ್ಯತ್ವ ಪಡೆಯಲು ದಿನಾಂಕ : 05-06-2024 ಕ್ಕೆ ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿದೆ, ಆದ್ದರಿಂದ ಇನ್ನೂ ಸದಸ್ಯರಾಗದೇ ಇರುವ ಸಮಾಜ ಬಾಂಧವರು ಈ ಸದವಕಾಶವನ್ನು ಸದುಪಯೋಗ ಪಡಿಸಿಕೊಂಡು ಮಹಾಸಭೆಯ ಸದಸ್ಯತ್ವವನ್ನು ಪಡೆದುಕೊಳ್ಳಲು ಕೋರಿದೆ.
ಸದಸ್ಯತ್ವ ಪಡೆಯಲು ಸಂಪರ್ಕಿಸಿ
ಅಜಿತ್ ಆಲೂರ್ : 9740592627
ಕಾರ್ತಿಕ್ ಹಿರೇಮಠ್ : 8660418371
ಶಿವರತನ್ : 9380321534
ನಿಧಿರಾಜ್ ಐನಳ್ಳಿ : 9731984350