ಎಸ್ ಎಸ್ ಕುಟುಂಬದಿಂದ ಮುಂದುವರಿದ ಉಚಿತ ಲಸಿಕೆ ಅಭಿಯಾನ, 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಿದ ಶಾಮನೂರು
ದಾವಣಗೆರೆ: ಶಾಮನೂರು ಕುಟುಂಬದ ಉಚಿತ ಲಸಿಕಾ ಶಿಬಿರ ಕಾರ‍್ಯಕ್ರಮವೂ ಇಂದು ಸಹ ಮುಂದುವರೆದಿದ್ದು, 18 ವರ್ಷದ ಮೇಲ್ಪಟ್ಟವರು ಕೂಡ ಉಚಿತ ಲಸಿಕೆಯನ್ನು ಪಡೆದರು.
ಇಂದು ನಗರದ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಭೋಜನಾಲಯದ ಬಳಿ ಲಸಿಕಾ ಕೇಂದ್ರಕ್ಕೆ ಶಾಸಕರಾದ ಶಾಮನೂರು ಶಿವಶಂಕರಪ್ಪನವರು ಭೇಟಿ ನೀಡಿ ಪರಿಶೀಲಿಸಿ, ನಂತರ ಲಸಿಕೆ ಪಡೆದ ನಾಗರೀಕರ ಯೋಗಕ್ಷೇಮವನ್ನು ವಿಚಾರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ, ಪೈಲ್ವಾನ್ ಮಾಲತೇಶ್ ರಾವ್, ಬಾಬುರಾವ್ ಸಾಳಂಕಿ, ಮಂಜುನಾಥ್ ಸಾಳಂಕಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ವಿನಾಯಕ ಪೈಲ್ಲಾನ್, ಮಾಜಿ ಸದಸ್ಯ ಪಿ.ಎನ್.ಚಂದ್ರಶೇಖರ್,ತರಕಾರಿ ಚಂದ್ರಪ್ಪ, ಕುರುಬರ ಹಟ್ಟಿ ರಾಜು, ಜಿ.ಡಿ.ಕುಮಾರ್ ಮತ್ತಿತರರಿದ್ದರು.