ಶಾಮನೂರು ಶಿವಶಂಕರಪ್ಪ ಉಚಿತ ಲಸಿಕೆ ನೀಡಿದ್ದಾರೆ: ಸಂಸದರು ಉಚಿತ ಪೆಟ್ರೋಲ್ ಡೀಸೆಲ್ ನೀಡಿ ಮಾತು ಉಳಿಸಿಕೊಳ್ಳಿ – ಮೊಹಮ್ಮದ್ ಜಿಕ್ರಿಯಾ

jikreya,,

ದಾವಣಗೆರೆ: ಕೊರೋನದಂತಹ ಸಂಕಷ್ಟ ಕಾಲದಲ್ಲಿ ಕಷ್ಟ ಅಂದವರಿಗೆ ಉಚಿತ ಪೆಟ್ರೋಲ್ ನಾನೇ ನೀಡುತ್ತೇನೆ ಎಂದು ಹೇಳಿರುವ ಸಂಸದರಾದ ಜಿ.ಎಂ ಸಿದ್ದೇಶ್ ಅವರು ಕೊಟ್ಟ ಮಾತಿನಿಂದ ಹಿಂದೆ ಸರಿಯದೆ ಕಷ್ಟ ಅಂತ ಬರುವ ಎಲ್ಲಾ ಜನರಿಗೆ ಉಚಿತ ಪೆಟ್ರೋಲ್ ನೀಡುವುದರ ಮೂಲಕ ದೇಶದ ಎಲ್ಲಾ ಜನಪ್ರತಿನಿಧಿಗಳಿಗೆ ಮಾದರಿಯಾಗಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಒತ್ತಾಯಿಸಿದ್ದಾರೆ.

ಕೊರೊನ ಒಂದನೇ ಹಾಗೂ ಎರಡನೇ ಅಲೆಯಿಂದ ತತ್ತರಿಸಿರುವ ದಾವಣಗೆರೆಯ ಜನತೆಗೆ ದಾವಣಗೆರೆ ದಕ್ಷಿಣ ಭಾಗದ ಶಾಸಕರು ಜನತೆಗೆ ಉಚಿತ ಲಸಿಕೆಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ನೀಡಿದರೆ ನಮ್ಮ ಸಂಸದರು ತಮ್ಮ ಸ್ವಂತ ಖರ್ಚಿನಲ್ಲಿ ಉಚಿತ ಪೆಟ್ರೋಲ್ ಹಾಕಿಸುವುದಾಗಿ ಘೋಷಿಸಿದ್ದಾರೆ. ಆದ್ದರಿಂದ ಇಂಥಾ ಜನಪರ ಕಾಳಜಿಯುಳ್ಳ ಜನಪ್ರತಿನಿಧಿಗಳನ್ನು ಪಡೆದ ದಾವಣಗೆರೆ ಜನತೆ ನಿಜಕ್ಕೂ ಪುಣ್ಯ ಮಾಡಿದ್ದಾರೆ ಎಂದಿದ್ದಾರೆ.

ಈ ಹಿಂದೆ ಸಂಸದರು ಅನೇಕ ಜನಪರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಅದರಲ್ಲಿ ಡಿಸಿಎಂ ಕೆಳಸೇತುವೆಯಂತಹ ಕಾರ್ಯ ಅವರ ಹೆಸರನ್ನು ಶಾಶ್ವತವಾಗಿ ಉಳಿಸಿದೆ. ಈಗ ದಿನೇ ದಿನೇ ಏರುತ್ತಿರುವ ಪೆಟ್ರೋಲ್,ಡೀಸೆಲ್ ಹಾಗೂ ದಿನಬಳಕೆಯ ವಸ್ತುಗಳ ಬೆಲೆಯೇರಿಕೆಯಿಂದ ಜನತೆಯ ಕಷ್ಟ ನೋಡಲಾರದೆ ಸ್ವತಃ ಸಂಸದರೇ ಸಾರ್ವಜನಿಕರಿಗೆ ಉಚಿತ ಪೆಟ್ರೋಲ್ ನೀಡುವ ಘೋಷಣೆ ಮಾಡಿರುವುದರಿಂದ ಸಂತಸ ತಂದಿದೆ ಎಂದು ಹೇಳಿದ್ದಾರೆ.

ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಅವರು ತಾವು ಕೊಟ್ಟ ಮಾತಿನಂತೆ ನಡೆದುಕೊಂಡು ಹೇಗೆ ಜನತೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಲಸಿಕೆ ನೀಡಿದ್ದಾರೋ ಅದೇ ರೀತಿ ನಮ್ಮ ಸಂಸದರೂ ಸಹ ಕೊಟ್ಟ ಮಾತಿಗೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!