ಎಸ್ ಎಸ್ ಜನಕಲ್ಯಾಣ ಟ್ರಸ್ಟ್ ನಿಂದ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ

ದಾವಣಗೆರೆ: ಶಾಸಕ ಡಾ . ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ‘ ವತಿಯಿಂದ 2021-22ನೇ ಸಾಲಿಗೆ ರಾಜ್ಯದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಅಥಣಿ ವೀರಣ್ಣ ತಿಳಿಸಿದ್ದಾರೆ.
ಟ್ರಸ್ಟ್‌ನಿಂದ ಕಳೆದ 10 ವರ್ಷ ಗಳಿಂದವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು , ಹಿಂದಿನ ವರ್ಷ ಸುಮಾರು 700 ಜನ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ . ಈ ಬಾರಿ ಐ.ಟಿ.ಐ , ಡಿಪ್ಲೋಮಾ , ಪದವಿ ಕಾಲೇಜು , ವೃತ್ತಿ ಶಿಕ್ಷಣ ಕಾಲೇಜು , ಕಾನೂನು.ಕಾಲೇಜು , ಮ್ಯಾನೇಜ್ ಮೆಂಟ್ ಮತ್ತು ಇತರೆ ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ 2021-22 ರ ಶೈಕ್ಷಣಿಕ ಅವಧಿಯಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಆಯಾ ಶುಲ್ಕಕ್ಕೆ ಕಾಲೇಜುಗಳ ವಾರ್ಷಿಕ ಅನುಗುಣವಾಗಿ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು .
ವಿದ್ಯಾರ್ಥಿ ವೇತನವನ್ನು ನಿರೀಕ್ಷಿಸುವ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾನ್ವಿತ ವಿದ್ಯಾರ್ಥಿ ವಿದ್ಯಾರ್ಥಿನಿಯರು ಆಯಾ ಶಾಲಾ – ಕಾಲೇಜುಗಳ ಮುಖ್ಯಸ್ಥರ ಕ್ರಮಬದ್ಧವಾದ ಮೂಲಕ ಪ್ರಮಾಣ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ .
*ಪತ್ರಕರ್ತರ ಮಕ್ಕಳಿಂದ ಅರ್ಜಿ* :
ಜಿಲ್ಲೆಯಪತ್ರಕರ್ತರ , ಮಾಧ್ಯಮದವರ , ಪತ್ರಕರ್ತರ ಮತ್ತು ಮಾಧ್ಯಮ , ಛಾಯಾಗ್ರಾಹಕರ ಮಕ್ಕಳು ಆಯಾ ಶಾಲಾ ಕಾಲೇಜುಗಳ ಮುಖ್ಯಸ್ಥರ ಮೂಲಕ ಕ್ರಮಬದ್ಧವಾದ ಪತ್ರಗಳೊಂದಿಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ . ಪ್ರಮಾಣ ನಿಗದಿತ ಅರ್ಜಿಯನ್ನು ಆನ್‌ಲೈನ್ ಮುಖಾಂತರ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ ಟ್ರಸ್ಟ್‌ನ ವೆಬ್‌ಸೈಟ್ ತಾಣ www.ssjanakalyantrust.org ಸಂಪರ್ಕಿಸಬಹುದು . ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ ಎಂದು ಅಥಣಿ ಅಥಣಿ ವೀರಣ್ಣ ತಿಳಿಸಿದ್ದಾರೆ .