SSIMS: ಎಸ್.ಎಸ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳ ಸಾಧನೆ: ಅಭಿನಂದನೆ ಸಲ್ಲಿಕೆ

ದಾವಣಗೆರೆ: (SSIMS) ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿನ ಬಾಪೂಜಿ ಶೈಕ್ಷಣಿಕ ಸಂಘದ ಅಡಿಯಲ್ಲಿನ ಎಸ್.ಎಸ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಿಂದ 2024-25 ನೇ ಸಾಲಿನಲ್ಲಿ ನಡೆದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ರ‌್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದಾರೆ.
ಪಿ.ಜಿ ಹಂತದಲ್ಲಿ ಬರುವ ಎಂ.ಡಿ ವಿಭಾಗದಲ್ಲಿ ತುರ್ತು ಔಷಧ ( M.D. Emergency Medicine) ಪರೀಕ್ಷೆಯಲ್ಲಿ ಡಾ.ಅರವಿಂದ ಪಿ.ಕೆ 5 ನೇ ರ‌್ಯಾಂಕ್ ಪಡೆದಿದ್ದರೆ, ಎಂ.ಎಸ್ ಹಂತದಲ್ಲಿನ ಪ್ರಸೂತಿ ಮತ್ತು ಸ್ರ್ರೀರೋಗ (M.S. OBG)
ವಿಭಾಗದಲ್ಲಿ ಡಾ.ವಾರಧಿ ಜಿ.ಆರ್ 3 ನೇ ರ‌್ಯಾಂಕ್ ಪಡೆದಿದ್ದಾರೆ.
ಯು.ಜಿ ಹಂತದ ವ್ಯಾಪ್ತಿಗೆ ಬರುವ ಪರೀಕ್ಷೆಗಳಲ್ಲಿ ಡಾ.ಯುವರಾಜ್ ಎಸ್.ಪಿ ಅವರು ವೈದ್ಯಕೀಯ ವಿಶ್ವವಿದ್ಯಾಲಯದ 4 ನೇ ಟಾಫರ್ ಆಗಿದ್ದಲ್ಲದೆ ವಿವಿಧ ವಿಭಾಗಳಲ್ಲಿ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಮಕ್ಕಳ ವೈದ್ಯಕೀಯ ಕ್ಷೇತ್ರವಾದ ಫೀಡಿಯಾಟ್ರಿಕ್ (PAEDIATRIC) ವಿಭಾಗದಲ್ಲಿ ಭಾರ್ಗವಿ 6ನೇ ರ‌್ಯಾಂಕ್, ಅಧಿತಿ 8 ನೇ ರ‌್ಯಾಂಕ್, ಅಕ್ಷತಾ 8 ನೇ ರ‌್ಯಾಂಕ್, ಸಹನ ಹೆಚ್.ಎನ್ 8 ನೇ ರ‌್ಯಾಂಕ್ ಪಡೆದಿದ್ದಾರೆ. ಅಂಗರಚನಾಶಾಸ್ತ್ರ ( anatomy) ವಿಭಾಗದಲ್ಲಿ ಸುಪ್ರಜಾ ಎಂ.ಹೆಚ್ ಅವರು 10 ನೇ ರ‌್ಯಾಂಕ್ ಪಡೆದಿದ್ದು, ಸಿಂದೂ ಎನ್. ಅವರು ಶರೀರಶಾಸ್ತ್ರ ( PHYSIOLOGY) 9 ನೇ ರ‌್ಯಾಂಕ್ ಹಾಗೂ ಸಮುದಾಯ ( COMMUNITY) ವಿಭಾಗದಲ್ಲಿ 10 ನೇ ರ‌್ಯಾಂಕ್ ಪಡೆದಿರುವರು. ನಂದಕಿಶೋರ್ ಬಾಣಾಪುರ ಮಕ್ಕಳ ವೈದ್ಯಕೀಯ ಕ್ಷೇತ್ರವಾದ ಫೀಡಿಯಾಟ್ರಿಕ್ (PAEDIATRIC) ವಿಭಾಗದಲ್ಲಿ 5 ನೇ ರ‌್ಯಾಂಕ್ ಹಾಗೂ ಮೈಕ್ರೋಬಯಲಾಜಿ ( MICROBIOLOGY) ವಿಭಾಗದಲ್ಲಿ 10 ನೇ ರ‌್ಯಾಂಕ್ ಪಡೆದು ಸಾಧನೆ ಮಾಡಿರುವರು.
ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಎಸ್.ಎಸ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಅವರು ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರು ಹಾಗೂ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಬಿ.ಎಸ್ ಪ್ರಸಾದ್, ವೈದ್ಯಕೀಯ ಅಧೀಕ್ಷಕರಾದ ಅರುಣ್ ಕುಮಾರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯವರು ಹಾಗೂ ಭೋದಕ- ಭೋದಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.