ಜೂನ್-2022ರ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

ದಾವಣಗೆರೆ: ಜೂನ್-2022ರ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮೇ.19ರಂದು ಪ್ರಕಟಿಸಿದೆ. ಜೂನ್ 27ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಜುಲೈ 4ಕ್ಕೆ ಮುಕ್ತಾಯಗೊಳ್ಳಲಿದೆ.
ಜೂನ್ 27ರಂದು ವಿಜ್ಞಾನ ಮತ್ತು ರಾಜ್ಯಶಾಸ್ತç ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.45 ರವರೆಗೆ ನಡೆಯಲಿದೆ. ಕರ್ನಾಟಕ ಸಂಗೀತ/ಹಿ0ದೂಸ್ತಾನಿ ಸಂಗೀತ ಮಧ್ಯಾಹ್ನ 2 ರಿಂದ 5.15 ರವರೆಗೆ ನಡೆಯಲಿದೆ. ಜೂನ್ 28 ರಂದು ಪ್ರಥಮ ಭಾಷೆ ಕನ್ನಡ, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್ ಭಾಷಾ ಪರೀಕ್ಷೆಗಳು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ ನಡೆಯಲಿದೆ.
ಜೂನ್ 29ರಂದು ದ್ವಿತೀಯ ಭಾಷೆ ಇಂಗ್ಲೀಷ್ ಮತ್ತು ಕನ್ನಡ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ನಡೆಯಲಿದೆ. ಜೂನ್ 30ರಂದು ಸಮಾಜ ವಿಜ್ಞಾನ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ ನಡೆಯಲಿದೆ. ಜುಲೈ 1ರಂದು ತೃತೀಯ ಭಾಷೆ ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಭಾಷಾ ಪರೀಕ್ಷೆಗಳು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ನಡೆಯಲಿದೆ. ಹಾಗೆಯೇ ಎನ್‌ಎಸ್‌ಕ್ಯೂಎಫ್ ಪರೀಕ್ಷಾ ವಿಷಯಗಳಾದ ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್ ಬ್ಯೂಟಿ ಅಂಡ್ ವೆಲ್‌ನೆಸ್ ಪರೀಕ್ಷೆ ಬೆಳಿಗ್ಗೆ 10.30 ರಿಂದ 12.45 ರವರೆಗೆ ನಡೆಯಲಿದೆ.
ಜುಲೈ 2ರಂದು ಕೋರ್ ಸಬ್ಜೆಕ್ಟ್ ಗಳಾದ ಎಲಿಮೆಂಟ್ಸ್ ಆಫ್ ಮೆಕಾನಿಕಲ್ & ಎಲೆಕ್ಟ್ರಿಕಲ್ ಇಂಜಿನಿಯರಿ0ಗ್ -2 ಬೆಳಿಗ್ಗೆ 9.30 ರಿಂದ 12.45 ರವರೆಗೆ, ಇಂಜಿನಿಯರಿ0ಗ್ ಗ್ರಾಫಿಕ್ಸ್ -2 ಮಧ್ಯಾಹ್ನ 2ರಿಂದ ಸಂಜೆ 5.15 ರವರೆಗೆ, ಎಲಿಮೆಂಟ್ಸ್ ಆಫ್ ಎಲೆಕ್ಟಾçನಿಕ್ಸ್ ಇಂಜಿನಿಯರಿ0ಗ್ ಬೆಳಿಗ್ಗೆ 9.30 ರಿಂದ 12.45 ರವರೆಗೆ, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್ ಬೆಳಿಗ್ಗೆ 9.30 ರಿಂದ 12.45 ರವರೆಗೆ, ಅರ್ಥಶಾಸ್ತ್ರ ಬೆಳಿಗ್ಗೆ 9.30 ರಿಂದ 12.45 ರವರೆಗೆ ನಡೆಯಲಿದೆ. ಜುಲೈ 4 ರಂದು ಕೋರ್ ಸಬ್ಜೆಕ್ಟ್ ಗಳಾದ ಗಣಿತ, ಸಮಾಜ ಶಾಸ್ತ್ರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ ನಡೆಯಲಿದೆ.
garudavoice21@gmail.com 9740365719