ಎಸ್ ಎಸ್ ಎಂ ವನ್ಯ ಪ್ರಾಣಿಗಳ ಸಾಕಾಣಿಕೆ.! ಸಿಎಂ ಭೇಟಿ ಮಾಡಿ ತನಿಖೆಗೆ ಆಗ್ರಹಿಸಲು ಬೆಳಗಾವಿಗೆ ತೆರಳಿದ ದಾವಣಗೆರೆ ಬಿಜೆಪಿ ನಿಯೋಗ

ದಾವಣಗೆರೆ: ಅಕ್ರಮವಾಗಿ ವನ್ಯ ಪ್ರಾಣಿಗಳನ್ನ ಸಾಕಿರುವ ಆರೋಪದ ಹಿನ್ನೆಲೆ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಓಡೆತನದ ಕಲ್ಲೇಶ್ವರ ರೈಸ್ ಮಿಲ್ ಮೇಲೆ ದಾಳಿ ನಡೆದು 5 ದಿನ ಕಳೆದರು ತನಿಖೆಯ ಸ್ವರೂಪ ಹಾಗೂ ಅಪರಾಧಿಗಳನ್ನ ಬಂಧಿಸದೇ ಇರುವುದಕ್ಕೆ ನಗರ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ.
ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಿಎಂ ಭೇಟಿ ಮಾಡಲು ದಾವಣಗೆರೆ ಬಿಜೆಪಿ ನಿಯೋಗ ಇಂದು ಬೇಳಗ್ಗೆ ಬೆಳಗಾವಿಗೆ ತೆರಳಿದರು. ಯಶವಂತರಾವ್ ಜಾದವ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಸದಸ್ಯರು, ದಾವಣಗೆರೆ ಹರಿಹರ ನಗರಾಭಿವೃದ್ದಿ ಇಲಾಖೆಯ ಅಧ್ಯಕ್ಷರು, ಮಾಜಿ ಆದ್ಯಕ್ಷರು, ಮಾಜಿ ಮೇಯರ್ ಸೇರಿದಂತೆ ಅನೇಕ ಮುಖಂಡರು ಸಿಎಂ ಬೇಢಿ ಮಾಡಿ ತನಿಖೆಗೆ ಒತ್ತಾಯಿಸಲಿದ್ದಾರೆ. ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಸಂಪುಟ ಸಭೆ ನಂತರ ಸಿಎಂ ಬಸವರಾಜ್ ಬೊಮ್ಮಾಯಿ ದಾವಣಗೆರೆ ಬಿಜೆಪಿ ನಿಯೋಗವನ್ನ ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಸಿಸಿಬಿ ಹಾಗೂ ದಾವಣಗೆರೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಳೆದ 5 ದಿನದ ಹಿಂದೆ ಎಸ್ ಎಸ್ ಮಲ್ಲಿಕಾರ್ಜನ ಫಾರ್ಮ ಹೌಸ್ ಮೇಲೆ ದಾಳಿ ನಡೆಸಿದ್ದರು. ನಗರದ ಬಂಬೂಬಜಾರ್ ರಸ್ತೆಯಲ್ಲಿರುವÀ ಕಲ್ಲೆಶ್ವರ ರೈಸ್ ಮಿಲ್ ಆವರಣದಲ್ಲಿ ಜಿಂಕೆ, ಕೃಷ್ಣಮೃಗ, ಕಾಡುಹಂದಿ,ಮುAಗುಸಿ, ನರಿ ಸೇರಿದಂತೆ ವನ್ಯ ಪ್ರಾಣಿಗಳನ್ನ ಸಾಕಿರುವುದು ಕಂಡುಬAದಿತ್ತು.. ಜಂಟಿ ದಾಳಿ ನಡೆಸಿರುವ ಅರಣ್ಯ ಅಧಿಕಾರಿಗಳು ಪರಿಶೀಲನೆ ದಾವಣಗೆರೆ ನ್ಯಾಯಾಲಯಕ್ಕೆ ಪಿಸಿಆರ್ ದಾಖಲಿಸಿದ್ದರು, ವನ್ಯ ಪ್ರಾಣಿಗಳನ್ನ ಸೂಕ್ತ ರಕ್ಷಣೆಯೊಂದಿಗೆ ಸ್ಥಾಳಂತರಿಸಲು ಕೋರ್ಟ ಆದೇಶ ನೀಡಿತ್ತು, ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾದ ರೀತೀಯಲ್ಲಿ ತನಿಖೆ ನಡೆಸುತ್ತಿಲ್ಲ ಎಂದು ಸಂಸದ ಜಿ ಎಂ ಸಿದ್ದೇಶ್ವರ ಆರೋಪಿಸಿದ್ದರು. ಇದರ ಬೆನ್ನಲ್ಲೆ ದಾವಣಗೆರೆ ಬಿಜೆಪಿ ನಿಯೋಗ ಸಿಎಂ ಭೇಟಿ ಮಾಡಲು ತೆರಳಿರುವುದು ಕುತೂಹಲಕ್ಕ ಎಡೆಮಾಡಿಕೊಟ್ಟಿದೆ.

 
                         
                       
                       
                       
                       
                       
                       
                      