ಎಲ್‌ಕೆಜಿ ಯುಕೆಜಿ ತರಗತಿ ಆರಂಭ: ಪುಟ್ಟ ಮಕ್ಕಳಿಗೆ ಚಾಕಲೇಟ್ ನೀಡಿ ಸ್ವಾಗತಿಸಿದ ಸಿಸ್ಟರ್ ಅನುಪಮ

ದಾವಣಗೆರೆ:ರಾಜ್ಯ ಸರ್ಕಾರದ ಆದೇಶದಂತೆ ಇಂದಿನಿಂದ ಪೂರ್ವ ಪ್ರಾಥಮಿಕ(ಎಲ್‌ಕೆಜಿ ಯುಕೆಜಿ) ಶಾಲೆಗಳು ಆರಂಭಗೊಂಡ ಹಿನ್ನಲೆಯಲ್ಲಿ ಸೋಮವಾರ ನಗರದ ಪಿ.ಜೆ. ಬಡಾವಣೆಯ ಸೇಂಟ್ ಪಾಲ್ಸ್ ಕಾನ್ವೆಂಟ್ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ಚಿಣ್ಣರಿಗೆ ಚಾಕಲೇಟ್ ನೀಡಿ ಸ್ವಾಗತಿಸಲಾಯಿತು.
18 ತಿಂಗಳ ನಂತರ ಆರಂಭಗೊAಡ ಎಲ್‌ಕೆಜಿ ಯುಕೆಜಿ ಮಕ್ಕಳು ಖುಷಿಯಿಂದ ತಮ್ಮ ತಂದೆ ತಾಯಿ, ಪೋಷಕರೊಂದಿಗೆ ಶಾಲೆಗೆ ಬರುವ ದೃಶ್ಯ ಕಂಡು ಬಂದಿತು. ಎಲ್ಲ ಮಕ್ಕಳೂ ಸಹಾ ಖುಷಿಯಿಂದ ತರಗತಿಗಳಿಗೆ ಆಗಮಿಸಿದರು.
ಮಕ್ಕಳ ಸುರಕ್ಷತೆಗಾಗಿ ಶಾಲೆಯ ಪ್ರತಿಯೊಂದು ಕೊಠಡಿ, ಪೀಠೋಪಕರಣಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲಾಗಿದೆ. ಕೋವಿಡ್ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಪ್ರತಿಯೊಬ್ಬ ಮಕ್ಕಳಿಗೂ ಥರ್ಮಲ್ ಸ್ಕಾö್ಯನಿಂಗ್ ಮಾಡಲಾಗಿದೆ. ಪ್ರತಿದಿನ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3.30ರವರೆಗೆ ಭೌತಿಕ ತರಗತಿಗಳು ನಡೆಯಲಿವೆ. ಮಕ್ಕಳ ಪೋಷಕರಿಂದ ಅನುಮತಿ ಪತ್ರವನ್ನು ಪಡೆಯಲಾಗಿದೆ. ಶಾಲೆಗೆ ಬರುವ ಮಕ್ಕಳಿಗೆ ಅನುಗುಣವಾಗಿ ಹೆಚ್ಚಿನ ತರಗತಿಗಳನ್ನು ಮಾಡಲಾಗುವುದು ಎಂದು ಶಾಲೆಯ ಸಿಸ್ಟರ್ ಅನುಪಮ ತಿಳಿಸಿದರು.
ಹಾಗೂ ಪೋಷಕರು ಮಕ್ಕಳಿಗೆ ಬೇಕಾಗುವ ಉಪಹಾರ, ಶುದ್ಧವಾದ ಕುಡಿಯುವ ನೀರನ್ನು ಕಳುಹಿಸುವುದು, ಮಕ್ಕಳಿಗೆ ನೆಗಡಿ, ಜ್ವರ, ಕೆಮ್ಮು ಇದ್ದರೆ ಶಾಲೆಗೆ ಕಳುಹಿಸುವುದು ಬೇಡ ಎಂದು ಪೋಷಕರಿಗೆ ತಿಳಿಸಿದೆ ಎಂದರು.
ಶಿಕ್ಷಕಿಯರಾದ ರೇಖಾ ಬಾರ್ಕಿ, ಜಿ.ಎನ್.ಚೇತನ, ಸಿಬ್ಬಂದಿ ಇದ್ದರು.