State Award :ರಾಜ್ಯ ಪ್ರಶಸ್ತಿ ಪಡೆದ ಛಾಯಾಗ್ರಹಾಕರಾದ ಮನು,ದೇವೇಂದ್ರಪ್ಪ,ರಾಜಶೇಖರ್

ಬೆಂಗಳೂರು:State Award ಬೆಂಗಳೂರು ಸದಾಶಿವನಗರದ ಹೈಡ್ ಪಾರ್ಕ್ ಹೋಟೆಲ್ ನಲ್ಲಿ ನಡೆದ ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಷ್ಠಿತ ಸಿನಿಮಾ ಪತ್ರಿಕೆ ಚಿತ್ರ ಸಂತೆ ಸುಮಾರು ೧೬ ವರ್ಷಗಳಿಂದ ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ ಸಾಧನೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ಈ ಬಾರಿ ದಾವಣಗೆರೆ ನಗರದ ದಾವಣಗೆರೆ ಜಿಲ್ಲಾ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಕರ್ನಾಟಕ ಫೋಟೋಗ್ರಾಫರ್ ಮತ್ತುವಿಡಿಯೋಗ್ರಾಫರ್ ಸಂಘದ ರಾಜ್ಯಾಧ್ಯಕ್ಷರು ಹಿರಿಯ ಛಾಯಾಗ್ರಾಹಕರು ಸಮಾಜ ಸೇವಕರು, ಹಾಗೂ ಮನು ಫೋಟೋಗ್ರಫಿ ಅಂಡ್ ಇವೆಂಟ್ಸ್ ಮಾಲೀಕರಾದ ಮನು ಎಂ.ದೇವನಗರಿ ಹಾಗೂ ಕೆ.ದೇವೇಂದ್ರಪ್ಪ ಹಿರಿಯ ಛಾಯಾಗ್ರಾಹಕರು, ಕರ್ನಾಟಕ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಡಿಕೆ ವಿಡಿಯೋಗ್ರಾಫಿ ಮಾಲೀಕರು ಹಾಗೂ ಎಸ್.ರಾಜಶೇಖರಪ್ಪ ಕೊಂಡಜ್ಜಿ ಇವರಿಗೆ ನೀಡಲಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಿರಿಯ ಛಾಯಾಗ್ರಾಹಕರು , ಸಮಾಜ ಸೇವಕರು, ಕರ್ನಾಟಕ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ ರಾಜ್ಯ ಕಾರ್ಯಾಧ್ಯಕ್ಷರು ಮನು ಸ್ಟುಡಿಯೋ ಮಾಲೀಕರಾದ ಇವರುಗಳಿಗೆ ಚಿತ್ರ ಸಂತೆ ಸಿನಿಮಾ ಪತ್ರಿಕೆ ವತಿಯಿಂದ ಕರ್ನಾಟಕ ಅಚೀವರ್ಸ್ ಅವಾರ್ಡ್ ೨೦೨೫ ವರ್ಷದ ಕನ್ನಡಿಗ ಎಂಬ ಪ್ರಶಸ್ತಿ ಹಾಗೂ ಉತ್ತಮ ಛಾಯಾಗ್ರಾಹಕರು ಎಂದು ಹಿರಿಯ ನಟ ನಿರ್ದೇಶಕ ನಿರ್ಮಾಪಕ ಓಂ ಸಾಯಿ ಪ್ರಕಾಶ್ ರವರು ಪ್ರಶಸ್ತಿ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಚಿತ್ರ ಸಂತೆ ಗಿರೀಶ್ , ಬ್ರಹ್ಮಾಂಡ ಗುರೂಜಿ , ಮಲ್ಲಿಕಾರ್ಜುನ್, ನವ ನಟಿ ಇಷ್ಟ ಮಲ್ನಾಡ್ ಮಾಮ್, ಬಂಡೆ ಮಹಾಕಾಳಿ ಅಮ್ಮನ ದೇವಸ್ಥಾನದ ದೇವಿ ಅಮ್ಮ ನವರು, ನವ ನಟ,ರಾಜ ಪ್ರಭು , ವಿಶ್ವಾಸ್ , ರಾಕೇಶ್ ನಿರೂಪಕಿ ರಂಜಿತಾ ಸೇರಿದಂತೆ ರಾಜ್ಯದ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವಂತಹ ೬೩ ಜನರಿಗೆ ಪ್ರಶಸ್ತಿ ಗೌರಿಸಲಾಯಿತು