’10 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಜಗಳೂರಿನ ಸೂಲಗಿತ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ’
ದಾವಣಗೆರೆ: ಚರ್ಮ ರೋಗ ಇಸುಬು, ಹುಳಕಡ್ಡಿಗೆ ನಾಟಿ ಚಿಕಿತ್ಸೆಯಲ್ಲಿ ಸಿದ್ಧಹಸ್ತೆಯಾದ ಜಗಳೂರಿನ ಗೊಲ್ಲರಹಟ್ಟಿಯ ಹಿರಿಯ ನಾಟಿ ವೈದ್ಯೆ ಸುಲ್ತಾನಿಬೀ (70) 2021 ರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ
ಸೂಲಗಿತ್ತಿ ಕಾರ್ಯಕ್ಕೆ ಆರೊಗ್ಯ ಇಲಾಖೆಯಿಂದ ಹೆರಿಗೆ ಕಿಟ್ ನೀಡಲಾಗಿದೆ.ಇವರು ತಮ್ಮ ಬಳಿ ಬಂದಿದ್ದ ಎಲ್ಲಾ ಹೆರಿಗೆಗಳನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎನ್ನುವುದು ವಿಶೇಷ.
ದಿನಕ್ಕೆ 10ರಿಂದ 20 ಜನರಿಗೆ ಚರ್ಮ ರೋಗಕ್ಕೆ ಚಿಕಿತ್ಸೆ ಮಾಡುತ್ತಿದ್ದರು, ಇವರ ಖ್ಯಾತಿ ಅನ್ಯ ರಾಜ್ಯಕ್ಕೂ ಪಸರಿಸಿದ್ದು, ಹಾವು ಹಿಡಿಯವುದರಲ್ಲೂ ಪ್ರವೀಣೆಯಾಗಿದ್ದಾರೆ ನಾಟಿ ವೈದ್ಯೆ ಸುಲ್ತಾನಿಬೀ.
ರೋಟರಿ ಕ್ಲಬ್, ಲಯನ್ಸ ಕ್ಲಬ್, ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಕಸಾಪದಿಂದ ಸನ್ಮಾನ, ಪುರಸ್ಕಾರಗಳನ್ನು ಪಡೆದಿದ್ದಾರೆ.
ನಾಟಿ ವೈದ್ಯೆ ಸುಲ್ತಾನಿಬೀ ಇನ್ನು ಕೂಡ ಮುರಕಲು ಹೆಂಚಿನ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.
ಪ್ರಸ್ತುತ 2021 ನೇ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸುಲ್ತಾನಿಬೀ ಅವರಿಗೆ ದಾವಣಗೆರೆ ಜಿಲ್ಲೆಯ ಜನತೆ ಶುಭಾಶಯಗಳನ್ನ ಕೋರಿದ್ದಾರೆ.