ಡಿಸೆಂಬರ್ 6ರಂದು ಹರಿಹರದ ಪ್ರೊ.ಬಿ.ಕೃಷ್ಣಪ್ಪ ಚೈತ್ಯಭೂಮಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಮಾವೇಶ

ದಾವಣಗೆರೆ: ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ಸಂಸ್ಥಾಪನಾ ದಿನದ ಅಂಗವಾಗಿ ಸ್ವಾಭಿಮಾನಿ ಚಳುವಳಿಯ ಪುನರುತ್ಥಾನ ದಿನಾಚರಣೆ ಹಿನ್ನೆಲೆಯಲ್ಲಿ ಡಿಸೆಂಬರ್ 6ರಂದು ಬೆಳಗ್ಗೆ 10.30ಕ್ಕೆ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಚೈತ್ಯಭೂಮಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಿಎಸ್ 4 ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ನಂತರ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಾದಿ ಮೌಲ್ಯಗಳ ಸಂರಕ್ಷಣೆ ಕುರಿತು ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಡಾ.ಮಹೇಶ್ ಚಂದ್ರಗುರು, ನಂತರ ಪೆÇ್ರ.ಸಿ.ಕೆ ಮಹೇಶ್, ಪ್ರೊ.ಎ.ಬಿ ರಾಮಚಂದ್ರಪ್ಪ, ಪ್ರೊ. ಟಿ.ರಾಜಪ್ಪ, ಪ್ರೊ. ಡಾ.ಹೆಚ್.ವಿಶ್ವನಾಥ್, ಹನಗವಾಡಿ ರುದ್ರಪ್ಪ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ಹೊದಿಗೆರೆ ರಮೇಶ್, ಎನ್.ರುದ್ರಮುನಿ, ರಾಘವೇಂದ್ರ ನಾಯ್ಕ, ಕೆ.ಎನ್.ಓಂಕಾರಪ್ಪ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ನಂತರ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ.ವೈ.ರಾಮಪ್ಪ, ಹೆಗ್ಗೆರೆ ರಂಗಪ್ಪ, ಡಿಸಿ ಮಹಾಂತೇಶ್ ಬೀಳಗಿ, ಎಸ್‍ಪಿ ಸಿ.ಬಿ.ರಿಷ್ಯಂತ್ ಇತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಹನುಮಂತಪ್ಪ, ವಿಶ್ವನಾಥ್, ಜಿ.ಎಂ.ಮಂಜಪ್ಪ, ಐರಣಿ ಚಂದ್ರು, ರಮೇಶ್ ಇತರರು ಇದ್ದರು.