ಹರಿಹರದ S.J.V.P ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ಮೃದು ಕೌಶಲ್ಯ ಅಭಿವೃದ್ದಿ ಕಾರ್ಯಾಗಾರ
ದಾವಣಗೆರೆ: 31-03-2023 ರಂದು ಹರಿಹರದ S.J.V.P ಪದವಿ ಮಹಾವಿದ್ಯಾಲಯ ಹಾಗು ಸ್ನಾತಕೋತ್ತರ ಕೇಂದ್ರದ ವತಿಯಿಂದ ಒಂದು ದಿನದ ರಾಜ್ಯಮಟ್ಟದ ಮೃದು ಕೌಶಲ್ಯಭಿವೃದ್ದಿ ಕಾರ್ಯಾಗಾರ ವನ್ನು ದಾವಣಗೆರೆ ವಿಶ್ವವಿದ್ಯಾಲಯದ ಪರಿಕ್ಷಾಂಗ ಕುಲಸಚಿವಾರದ ಡಾ.ಶಿವಶಂಕರ್ ಅವರು ಉದ್ಘಾಟಿಸಿ ವಿದ್ಯಾರ್ಥಿಗಳು ತಮ್ಮ ಪಾಠ ಪ್ರವಚನಗಳೊಂದಿಗೆ ಕೌಶಲಗಳನ್ನು ಬೆಳಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ಪಡೆದುಕೊಳಲು ತಿಳಿಸಿದರು, ಜೊತೆಗೆ ವಿದ್ಯಾರ್ಥಿಗಳ ಜೀವನ ಹೇಗೆ ನಿರ್ವಹಣೆ ಮಾಡಬಹುದು ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಕೌಶಲಗಳನ್ನು ಹೇಗೆ ಅಭಿವೃದ್ಧಿ ಮಾಡಬಹುದು ಎಂದು ತಿಳಿಸಿ ಜಾಗತೀಕ ಮಟ್ಟದಲ್ಲಿ ವಿದ್ಯಾರ್ಥಿಗಳು ಎದುರಿಸಬಹುದಾದ ಸವಲಾಗಳು ಮತ್ತು ಅವಕಾಶಗಳನ್ನು ಯಾವ ರೀತಿಯಲ್ಲಿ ಸದುಪಯೋಗ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ವಿವರಿಸಿದರು, S.J.P.V.ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು, ಈ ಸಂಧರ್ಭದಲ್ಲಿ ಉಪಸ್ಥಿತಿರಿದ್ದ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ ಪ್ರಶಾಂತ್ ದುಗ್ಗತ್ತಿಮಠ್ ಅವರು ಸಂಸ್ಥೆಯ ಮತ್ತು ಕಾಲೇಜಿನ ಬೆಳವಣಿಗೆ ಹಲವಾರು ಕ್ರಿಯಾತ್ಮಕ ಯೋಜನೆಗಳನ್ನು ಹಾಕಿಕೊಂಡಿದ್ದು ವಿಶ್ವವಿದ್ಯಾಲಯದ ವತಿಯಿಂದ ಅಗತ್ಯ ಸಹಕಾರವನ್ನು ಕೊರಿದರು.ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜ್ಯ ಹಾಗು ರಾಷ್ಟ್ರ ಮಟ್ಟದ ಕಾರ್ಯಗಾರ &ವಿಚಾರ ಸಂಕೀರ್ಣಗಳನ್ನು ಎರ್ಪಡಿಸಲಾಗುವುದು ತೀಳಿಸಿ ಕಾರ್ಯಗಾರಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಶುಭಕೋರಿದರು .ಮೋದಲಿನ ಅವದಿಯಲ್ಲಿ GMIT ಕಾಲೇಜಿನ MBA ವಿಭಾಗದ ಮುಖ್ಯಸ್ಥರಾದ ಡಾ.ಪ್ರಶಾಂತ್ ವೀಶೆಷ ಕೌಶಲಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಎರಡನೇ ಅವದಿಯಲ್ಲಿ ತುಮಕೂರಿನ SIT ಕಾಲೇಜಿನ Dr.Y.M ಗಿರೀಶ್ ಅವರು ಕೌಶ್ಯಲಾದರಿತ ತರಗತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.ಸಂಧರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಡಿ.ಎಂ.ಹಾಲಸ್ವಾಮಿ,
ನಿರ್ದೇಶಕರಾದ ಎನ್.ಎಂ.ತಿಪ್ಪೇಸ್ವಾಮಿ, ಎನ್.ಎಚ್.ಪಾಟೀಲ್,
ಕೃಷ್ಣ ಡಿ.ನಾಯ್ಕ,ಡಿ.ಜಿ.ಶಿವಾನಂದಪ್ಪ,ಮುಖ್ಯ ಶೈಕ್ಷಣಿಕ ಅಧಿಕಾರಿಗಳಾದ ಡಾ.ಎಸ್.ಹೆಚ್ .ಪ್ಯಾಟಿ ಉಪಸ್ಥಿತರಿದ್ದರು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶಿವಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. IQAC ಸಂಯೋಜಕರಾದ ಡಾ.ವೀರಣ್ಣ ಶೆಟ್ಟರ್ ಸ್ವಾಗತಿಸಿದರು, ಡಾ.ರಮೇಶ್ ಪರ್ವತಿಯವರು ವಂದನಾರ್ಪಣೆ ಮಾಡಿದರು,ಉಪಾನ್ಯಾಸಕಿ ನಳಿನ ಅವರು ನಿರೂಪಿಸಿದರು.ಹಲವು ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.