ರಾಜ್ಯ, ರಾಷ್ಟ್ರಮಟ್ಟದ ಮುಕ್ತ ಬಯಲು ಜಂಗೀ ಕುಸ್ತಿ

ದಾವಣಗೆರೆ: ಬೇತೂರು ರಸ್ತೆಯ ಶ್ರೀ ದುರುಗಮ್ಮ ದೇವಸ್ಥಾನ ಸಮಿತಿಯಿಂದ ಬಸವಪಟ್ಟಣ ಶ್ರೀ ದುರುಗಮ್ಮದೇವಿ ಎಡೆಜಾತ್ರೆ ಮಹೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಏ.7 ಮತ್ತು ೮ರಂದು ಎರಡು ದಿನಗಳ ಕಾಲ ರಾಜ್ಯ ಹಾಗೂ ರಾಷ್ಟ್ರಮಟ್ಟದ ಮುಕ್ತ ಬಯಲು ಜಂಗೀ ಕುಸ್ತಿ ಸ್ಪರ್ಧೆಗಳನ್ನು ಬೇತೂರು ರಸ್ತೆಯಲ್ಲಿರುವ ಕೊರಚರ ಕಾಲೋನಿ ಏರ್ಪಡಿಸಲಾಗಿದೆ. ಈ ಕುಸ್ತಿಯಲ್ಲಿ ಗೆದ್ದ ಪೈಲ್ವಾನರಿಗೆ ಪ್ರಶಸ್ತಿಗಳನ್ನು ಇಡಲಾಗಿದ್ದು, ಪ್ರಶಸ್ತಿಗಳ ಜೊತೆಗೆ ನಗದು ಬಹುಮಾನ ಬೆಳ್ಳಿ ಗದೆ, ಬಂಗಾರದ ಪದಕಗಳನ್ನು ನೀಡಲಾಗುತ್ತದೆ ಎಂದು ದಾವಣಗೆರೆ ತಾಲ್ಲೂಕು ಕೊರಚರ ಸಂಘ ತಿಳಿಸಿದೆ.