ಕಲ್ಲು ತೂರಾಟ ಪ್ರಕರಣ, ಮಧ್ಯರಾತ್ರಿ ಕಿಡಿಗೇಡಿಗಳ ಮನೆಗೆ ನುಗ್ಗಿದ ಪೋಲೀಸ್, 30 ಜನರ ಬಂಧನ, 5 ಪ್ರಕರಣ ದಾಖಲು
ದಾವಣಗೆರೆ : ಬೇತೂರು ಗಣೇಶ ವಿಸರ್ಜನೆ ವೇಳೆ ಹಳೆ ದಾವಣಗೆರೆಯಲ್ಲಿ ಉಂಟಾದ ಗಲಭೆ ಇಡೀ ಊರನ್ನು ವ್ಯಾಪಿಸಿದ್ದು, ಮಧ್ಯರಾತ್ರಿಯಲ್ಲಿಯೇ ಕಿಡಿಗೇಡಿಗಳ ಮನೆಗೆ ನುಗ್ಗಿದ ಪೊಲೀಸರು, ಕಿಡಿಗೇಡಿಗಳಿಗೆ ಒಬ್ಬರಾದ ನಂತರ ಒಬ್ಬರು ಬೆತ್ತದ ರುಚಿ ತೋರಿಸಿ ಕರೆದೊಯ್ದರು
ಒಂದು ಏರಿಯಾದಲ್ಲಿ ನಿಯಂತ್ರಣಕ್ಕೆ ತೆಗೆದುಕೊಂಡರೇ, ಇನ್ನೊಂದು ಏರಿಯಾದಲ್ಲಿ ಗಲಾಟೆ ಶುರುವಾಯಿತು.. ಅದರಲ್ಲೂ ಮಧ್ಯರಾತ್ರಿಯಲ್ಲಿಯೂ ಕಿಡಿಗೇಡಿಗಳು ಅಟ್ಟಹಾಸ ಮೆರೆಯುವುದನ್ನು ಬಿಡಲಿಲ್ಲ. ಬಂದೋಬಸ್ತಿಗಾಗಿ ಬಂದಿದ್ದ ಪೊಲೀಸರು ಕಿಡಿಗೇಡಿಗಳಿಗೆ ಸಖತ್ ಮಂಜಾ ಕೊಟ್ಟರು. ಅಯ್ಯೋ , ಅಪ್ಪ, ಅಮ್ಮ ನಾನಲ್ಲ ಬಿಟ್ಟು ಬಿಡಿ ಅಂದ್ರೂ ಖಾಕಿ ಬೆತ್ತದ ಮೂಲಕ ಪೋಲೀಸ್ ಮಾತನ್ನು ಹೇಳಿದರು.
ಗಲಭೆ ಹೆಚ್ಚಾದ ಕಾರಣ ಪೂರ್ವ ವಲಯ ಐಜಿಪಿ ರಮೇಶ್ ಅವರು ನೆರೆ ಜಿಲ್ಲೆಯ ಹಾವೇರಿ, ಶಿವಮೊಗ್ಗ ಚಿತ್ರದುರ್ಗದ 15 ಕೆಎಸ್ ಆರ್ ಪಿ ತುಕಡಿ ಪಡೆ ಕರೆಸಿತ್ತು. ಇವರು ಇಡೀ ಊರನ್ನು ರಾತ್ರಿಯೆಲ್ಲ ಕಾವಲು ಕಾದರು, ಈ ನಡುವೆ ಮಟ್ಟಿಕಲ್ಲು ಏರಿಯಾಗೆ ಕಿಡಿಗೇಡಿಗಳು ನುಗ್ಗಿದರು, ಅಲ್ಲಿಯೂ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ಲಾಠಿ ಹಿಡಿದು ತಮ್ಮ ಪ್ರದರ್ಶನ ತೋರಿಸಿ ಪರಿಸ್ಥಿತಿ ಶಾಂತಗೊಳಿಸಿದರು.
ನಿದ್ದೆ ಮಾಡದ ದಾವಣಗೆರೆ ಎಸ್ಪಿ, ಸ್ಥಳದಲ್ಲಿಯೇ ಮೊಕ್ಕಾಂ
ದಾವಣಗೆರೆ ಎಸ್ಪಿ ಉಮಾಪ್ರಶಾಂತ್ ಹಾಗೂ ನೇತೃತ್ವದ ತಂಡ ಇಡೀ ದಾವಣಗೆರೆ ಸುತ್ತುವರಿದಿತ್ತು. ಪೊಲೀಸ್ ಜೀಪ್ ಗಳ ಸೈರನ್ ಒಂದು ಸುಮ್ನೆ ಬಡೆಯುತ್ತಾ ಏರಿಯಾಗಳನ್ನು ಸುತ್ತು ಹೊಡೆಯಿತು. ಕೆಲ ಕಿಡಿಗೇಡಿಗಳು ಬೈಕ್ ಗಳನ್ನು ಹಾಳು ಮಾಡಿದರು. ಎಸ್ಪಿ ಕೂಡ ಎಲ್ಲ ಕಡೆ ಮಾಹಿತಿ ತಿಳಿಯುತ್ತಾ, ತಡ ರಾತ್ರಿ ಪರಿಸ್ಥಿತಿ ಶಾಂತಗೊಳಿಸಲು ಯಶಸ್ವಿಯಾದರು. ಈ ನಡುವೆ ವಿಘ್ನ ನಿವಾರಕ ಶಾಂತವಾಗಿ ನೀರಿನಲ್ಲಿ ವಿಸರ್ಜನೆಗೊಂಡು ಎಲ್ಲರಿಗೂ ಒಳ್ಳಯದು ಮಾಡಪ್ಪ ಎಂದು ಹರಿಸಿ ತನ್ನ ಪಾಡಿಗೆ ತಾನು ಹೊರಟನು.
ಈ ವೇಳೆ ಗಲಭೆಯಲ್ಲಿ ಭಾಗಿಯಾಗಿದ್ದರು ಎನ್ನಲದ ಸುಮಾರು 30 ಕಿಡಿಗೇಡಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು.