ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಾಟ, ಪಿಎಸ್ಐ ಹಾಗೂ ಮಫ್ತಿಯಲ್ಲಿದ್ದ ಕ್ರೈಂ ಪೇದೆಗೆ ಗಾಯ, ಪರಿಸ್ಥಿತಿ ಶಾಂತ
ದಾವಣಗೆರೆ: ನಗರದ ಅರಳಿಮರ ವೃತ್ತದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಅರಳಿಮರ ಸರ್ಕಲ್ ಬಳಿ ವೆಂಕೋಭೋವಿ ಕಾಲೋನಿಯ ಎರಡನೇ ಕ್ರಾಸ್ ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಇಲ್ಲಿಗೆ ಹಿಂದೂ ಜಾಗರಣ ವೇದಿಕೆಯ ಸಹ ಸಂಚಾಲಕ ಸತೀಶ್ ಪೂಜಾರಿ ಅವರು ಹೋಗಿದ್ದರು. ಬಳಿಕ ಎರಡು ಗುಂಪುಗಳು ಜಮಾಯಿಸಿವೆ.
ಗಣೇಶ ವಿಸರ್ಜನಾ ಮೆರವಣಿಗೆ ಸಾಗುವ ಮಾರ್ಗ ಮಧ್ಯದಲ್ಲಿ ಅರಳಿಮರ ವೃತ್ತಕ್ಕೆ ಮೆರವಣಿಗೆ ಬಂದಾಗ ಅನ್ಯ ಕೋಮಿನ ಜನರು ಘೋಷಣೆ ಕೂಗಲಾರಂಭಿಸಿದರು,ಅಲ್ಲಾ ಹೂ ಅಕ್ಬರ್, ಜಿಂದಾಬಾದ್ ಜಿಂದಾಬಾದ್ ಇಸ್ಲಾಂ ಜಿಂದಾಬಾದ್ ಎಂದು ಮುಸ್ಲಿಂ ಯುವಕರು ಘಷಣೆ ಕೂಗಿದ್ದರಿಂದ, ಜೈ ಶ್ರೀ ರಾಮ್ ಎಂದು ಹಿಂದು ಪರ ಕಾರ್ಯಕರ್ತರಿಂದ ಘೋಷಣೆ ಕೂಗತೊಡಗಿದರು, ಈ ಮಧ್ಯೆ ಎರಡು ಕೊಮಿನ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು.
ಏತನಮಧ್ಯ ವಾತಾವರಣ ತಿಳಿಗೊಳಿಸಲು ಪೋಲಿಸರು ಮತ್ತು ಮುಸ್ಲಿಂ ಯುವಕರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು, ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಪೊಲೀಸರತ್ತವೂ ಕಲ್ಲು ತೂರಿ ಬಂದಿವೆ. ಓರ್ವ ಪೊಲೀಸ್ ಪೇದೆ ಹಾಗೂ ಮಹಿಳಾ ಪಿ ಎಸ್ ಐ ತಲೆಗೆ ಪೆಟ್ಟು ಬಿದ್ದಿದೆ, ಡಿಸಿಆರ್ ಬಿ ಸಿಬ್ಬಂದಿ ರಘು ಅವರ ತಲೆಗೆ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೂ ಮೆರವಣಿಗೆ ಉದ್ದಕ್ಕೂ ಎರಡೂ ಮೂರು ಕ್ರಾಸ್ ಬಳಿ ನಿಂತು ಕಲ್ಲು ತೂರಾಟ ನಡೆಸಿದ್ದಾರೆ, ಈ ಹಿನ್ನಲೆ ಉದ್ವಿಗ್ನ ವಾತಾವರಣ ನಿರ್ಮಾಣ ಆಗಿತ್ತು, ಸ್ವತಃ ಎಸ್ಪಿ ಉಮಾ ಪ್ರಶಾಂತ್ ಲಾಠಿ ಹಿಡಿದು ಜನರನ್ನೂ ಚದುರಿಸಿಲು ಮುಂದಾಗಿದ್ದರು. ಪೋಲೀಸರು ಜನರನ್ನು ಚದುರಿಸಲು ಹರಸಾಹಸ ಪಟ್ಟಿದ್ದಾರೆ.
ಎಸ್ ಪಿ ಉಮಾ ಪ್ರಶಾಂತ್
ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಕಲ್ಲು ತೂರಿದ ಕಿಡಿ ಗೇಡಿಗಳನ್ನೂ ಬಂಧಿಸಿ ಎಂದು ಹಿಂದೂ ಪರ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಈ ವೇಳೆ ಮಾತನಾಡಿದ ಎಸ್ ಪಿ ವೆಂಕಭೋವಿ ಗಣೇಶ ವಿಸರ್ಜನೆ ವೇಳೆ ಗಲಾಟೆ ನಡೆದಿದೆ,ಕೆಲವರು ಕಲ್ಲು ತೂರಾಟ ಮಾಡಿದ್ದಾರೆ..ಓರ್ವ ಪೊಲೀಸ್ ಸಿಬ್ಬಂದಿ ಸೇರಿ ಕೆಲವರಿಗೆ ಗಾಯ ಆಗಿದೆ..ಸದ್ಯ ಪರಿಸ್ಥಿತಿ ನಿಯಂತ್ರಣ ದಲ್ಲಿದೆ..
144 ಸೆಕ್ಷನ್ ಜಾರಿ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆನಿನ್ನೆ ಪ್ರಚೋದನಕಾರಿ ಭಾಷಣದಿಂದ ಈ ಗಲಾಟೆ ನಡೆದಿದೆ..ಎರಡು ಕಡೇಗಳಿಂದಲೂ ಪ್ರಕರಣ ದಾಖಲಾಗಿದೆ.ಕಲ್ಲೂ ತೂರಾಟ ಮಾಡಿದವರ ಪರಿಶೀಲನೆ ನಡೆಸುತ್ತೇವೆ..ಇಡೀ ರಾತ್ರಿ ಪೊಲೀಸರು ರೌಂಡ್ಸ್ ಮಾಡುತ್ತಾರೆ ಎಂದು ಉಮಾ ಪ್ರಶಾಂತ್ ತಿಳಿಸಿದ್ದಾರೆ.