ಅಕ್ರಮ ಮರಳು ದಂಧೆಗೆ ಇನ್ಮುಂದೆ ಅವಕಾಶ ಇಲ್ಲ : ಅಕ್ರಮ ದಂಧೆಯಲ್ಲಿ ಭಾಗಿಯದವರ ವಿರುದ್ದ 100% ಕ್ರಮ – ಸಿ ಬಿ ರಿಷ್ಯಂತ್
ದಾವಣಗೆರೆ : ಹರಿಹರ-ಹೊನ್ನಾಳಿ ಸೇರಿದಂತೆ ಇತರೆಡೆ ಅಕ್ರಮ ಮರಳು ದಂಧೆ ನಡೆಯುತ್ತಿದ್ದರೆ ಇನ್ಮುಂದೆ ಅದಕ್ಕೆ ಅವಕಾಶ ನೀಡೋದಿಲ್ಲ ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ಹೇಳಿದ್ದಾರೆ.
ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಮೊದಲ ಬಾರಿಗೆ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ರಮ ಮರಳು ಗಣಿಗಾರಿಕೆ ಸಂಬಂಧ ಮೊದಲು ಪರಿಶೀಲಿಸಲಾಗುವುದು. ಯಾರೇ ತಪ್ಪು ಮಾಡಿದರೂ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಅಕ್ರಮ ಮರಳು ದಂಧೆ, ಅಕ್ರಮ ಮದ್ಯ ಮಾರಾಟ ಮುಂತಾದ ಅಕ್ರಮ ಚಟುವಟಿಕೆಗಳಲ್ಲಿ ಒಂದು ವೇಳೆ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಲ್ಲಿ, ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಖಡಕ್ ಆಗಿ ಹೇಳಿದರು.
ದಾವಣಗೆರೆ ಎಸ್ ಪಿ ಸಾರ್ವಜನಿಕರಿಗೆ ಹೇಳಿದ್ದೇನು ಅಂತೀರಾ…? ಕೆಳಗಿನ ವಿಡಿಯೋ ನೋಡಿ.
https://youtu.be/scDNBDkzn2g