ಉದ್ಯೋಗದ ಕಮಿಷನ್ ಆಸೆಗೆ 2.29 ಲಕ್ಷ ಕಳೆದುಕೊಂಡ ವಿದ್ಯಾರ್ಥಿನಿ.! CEN ಠಾಣೆಯಲ್ಲಿ ಪ್ರಕರಣ ದಾಖಲು

online job

ದಾವಣಗೆರೆ: ಆನ್ಲೈನ್ ಉದ್ಯೋಗದ ಜಾಹೀರಾತಿನಿಂದ ಕಮಿಷನ್ ಸಿಗುತ್ತದೆ ಎಂಬ ಆಮಿಷ ನಂಬಿ ಆವರಗೆರೆಯ ವಿದ್ಯಾರ್ಥಿನಿಯೊಬ್ಬಳು 2.29 ಲಕ್ಷ ರು., ಕಳೆದುಕೊಂಡಿದ್ದಾರೆ.

ಆವರೆಗೆಯ ಪೊಲೀಸ್ ಲೇಔಟ್‌ ನಿವಾಸಿಯಾದ ಸಹನಾ ಹಣ ಕಳೆದುಕೊಂಡ ವಿದ್ಯಾರ್ಥಿನಿ.

ಆನ್‌ಲೈನ್‌ ಪಾರ್ಟ್‌ ಟೈಂ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ಮನೆಯಲ್ಲೇ ಕೆಲಸ ಮಾಡಿ ದಿನಕ್ಕೆ 8 ಸಾವಿರ ಗಳಿಸಬಹುದು ಎಂದು ಅಪರಿಚಿತ ವ್ಯಕ್ತಿ, ಟೆಲಿಗ್ರಾಂ ಆ್ಯಪ್‌ನಲ್ಲಿ ವಿವಿಧ ಪ್ರಾಡೆಕ್ಟ್‌ಗಳ ಚಿತ್ರಗಳನ್ನು ಕಳುಹಿಸಿದ್ದಾನೆ. ಇವುಗಳನ್ನು ಖರೀದಿಸಿದರೆ ಕಮೀಷನ್ ನೀಡುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಸಹನಾ ಅವರು ಆರಂಭದಲ್ಲಿ 100 ರು., ಕಳುಹಿಸಿದ್ದಾರೆ. ಆ ವೇಳೆ ಅವರಿಗೆ 350 ಕಮೀಷನ್ ಬಂದಿದೆ. ಇದನ್ನೆ ನಂಬಿರುವ ಸಹನ ಹಂತ ಹಂತವಾಗಿ ಪೇಟಿಎಂ ಮೂಲಕ  2.29 ಲಕ್ಷ ಹಣ ವರ್ಗಾಹಿಸಿದ್ದಾರೆ. ಟಾರ್ಗೆಟ್  ಪೂರ್ಣಗೊಳಿಸದೇ ಹಣ ವಾಪಸ್ ನೀಡುವುದಿಲ್ಲ ಎಂದು ಅಪರಿಚಿತ ವ್ಯಕ್ತಿ ಹೇಳಿದಾಗ ಆಕೆ ಆನ್ ಲೈನ್ ವಂಚನೆಗೆ ಒಳಗಾಗಿರುವ ಬಗ್ಗೆ ಮನವರಿಕೆಯಾಗಿದೆ.

ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!