ಎಸ್ ಯು ಸಿ ಐ (ಕಮ್ಯುನಿಸ್ಟ್) ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿ ರೋಡ್ ಷೋ!

red

‘ಬಿಜೆಪಿ-ಕಾಂಗ್ರೆಸ್ ಮುಂತಾದ ಬಂಡವಾಳಶಾಹಿ ಪಕ್ಷಗಳನ್ನು ಸೋಲಿಸಿ!’, ‘ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟುತ್ತಿರುವ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವನ್ನು ಗೆಲ್ಲಿಸಿ!’, ‘ಜಾತಿ-ಧರ್ಮದ ದುಷ್ಟ ರಾಜಕೀಯವನ್ನು ಸೋಲಿಸಿ!’ ‘ಜನಹೋರಾಟಗಳಿಂದ ಹೊರಹೊಮ್ಮಿದ ಅಣಬೇರು ತಿಪ್ಪೇಸ್ವಾಮಿಯವರನ್ನು ಗೆಲ್ಲಿಸಿ!’ ….. ಮುಂತಾದ ಘೋಷಣೆಗಳನ್ನು ಕೂಗುತ್ತ ಕೈಯಲ್ಲಿ ಕೆಂಬಾವುಟ ಹಾಗೂ ಅಭ್ಯರ್ಥಿಯ ನಾಮಪಲಕವನ್ನು ಹಿಡಿದು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಲೋಕಸಭಾ ಚುನಾವಣೆಯ ದಾವಣಗೆರೆ ಕ್ಷೇತ್ರದ ಬಹಿರಂಗ ಪ್ರಚಾರದ ಕೊನೆಯ ದಿನದಂದು ನಡೆದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿಯವರ ರೋಡಷೋ ಚಿತ್ರಣವಿದು.

ರೋಡ್ ಶೋವನ್ನು ಉದ್ಘಾಟಿಸಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ ಮಾತನಾಡಿದರು. ಬಂಡವಾಳಶಾಹಿ ಪಕ್ಷಗಳ ಅಬ್ಬರದ ಪ್ರಚಾರಕ್ಕೆ ಮರುಳಾಗದೆ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿ ಮತ ಚಲಾಯಿಸಬೇಕು. ಬಂಡವಾಳಶಾಹಿಪರ ರಾಜಕೀಯವನ್ನು ತಿರಸ್ಕರಿಸಿ, ರೈತ,ಕಾರ್ಮಿಕರ, ದುಡಿಯುವ ಜನಗಳ ಹೋರಾಟದ ರಾಜಕೀಯವನ್ನು ಗೆಲ್ಲಿಸಬೇಕು. ಬಂಡವಾಳಶಾಹಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳನ್ನು ಧಿಕ್ಕರಿಸಿ, 76 ವರ್ಷಗಳಿಂದ ನಿರಂತರವಾಗಿ ಜನಹೋರಾಟಗಳನ್ನು ಕಟ್ಟುತ್ತಿರುವ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವನ್ನು ಬೆಂಬಲಿಸಬೇಕು. ಅಣಬೇರು ತಿಪ್ಪೇಸ್ವಾಮಿಯವರ ಆಟೋರಿಕ್ಷಾ ಗುರುತಿಗೆ ಮತ ನೀಡುವುದರ ಮೂಲಕ ಹೋರಾಟಗಾರರನ್ನು ಜನರು ಗೆಲ್ಲಿಸಬೇಕು. ಆಗ ಮಾತ್ರವೇ ಜನ ಹೋರಾಟದ ಧ್ವನಿಯು ಲೋಕಸಭೆಯಲ್ಲಿ ಮೊಳಗಲು ಸಾಧ್ಯ. ಎಂದು ಅವರು ಜನರಿಗೆ ಕರೆ ನೀಡಿದರು.

ಮಹಾತ್ಮ ಗಾಂಧಿ ವೃತ್ತದಿಂದ ಆರಂಭಗೊಂಡು ಕೆ.ಆರ್ ಮಾರುಕಟ್ಟೆ, ಅಗ್ಗೆ ದಿಬ್ಬ ವೃತ್ತ, ಹೊಂಡಾ ವೃತ್ತ, ವಾಲ್ಮೀಕಿ ವೃತ್ತ, ಗುಂಡಿ ವೃತ್ತ, ರಾಮ್ &ಕೋ ವೃತ್ತ, ಬಿಎಸ್ಎನ್ಎಲ್ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳ ಮೂಲಕ ಮೆರವಣಿಗೆಯನ್ನು ನಡೆಸಲಾಯಿತು. ಉದ್ಘಾಟಣೆಯ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿ ಸದಸ್ಯರಾದ ಮಧು ತೊಗಲೇರೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರಾದ ಅಪರ್ಣಾ ಬಿ ಆರ್, ಮಂಜುನಾಥ್ ಕುಕ್ವಾಡ, ಜಿಲ್ಲಾ ಸಮಿತಿ ಸದಸ್ಯರಾದ ಮಧು ತೊಗಲೇರೆ, ಟಿ ವಿ ಎಸ್ ರಾಜು, ಭಾರತಿ, ಮಹಾಂತೇಶ, ಪರಶುರಾಮ ಸೇರಿದಂತೆ ಕಾರ್ಯಕರ್ತರಾದ ಅನೀಲ್, ಪೂಜಾ, ಸ್ಮಿತಾ ಹಾಗೂ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಭಾರತಿ.ಕೆ
SUCI ಕಮ್ಯುನಿಸ್ಟ್

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!