ಸೂಳೆಕೆರೆ ರಸ್ತೆ ಕಾಮಗಾರಿಯಲ್ಲಿ ಹೆಚ್ಚಿನ ಸಾಮರ್ಥ್ಯದ ಸ್ಪೋಟಕ: ಖಡ್ಗ ಸಂಘಟನೆಯಿಂದ ಕಾಮಗಾರಿ ಸ್ಥಗಿತ

ದಾವಣಗೆರೆ: ರಸ್ತೆಅಗಲೀಕರಣ ನೆಪದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಸಾಮರ್ಥ್ಯದ ಸ್ಪೋಟಕ ಸಾಮಗ್ರಿಗಳನ್ನು ಕಾಮಗಾರಿ ವೇಳೆ ಬಳಸಲಾಗುತ್ತಿದೆ ಎಂದು ಮಾಹಿತಿಯನ್ನಾಧರಿಸಿ ಸ್ಥಳೀಯ ಖಡ್ಗಸಂಸ್ಥೆಯ ಪದಾಧಿಕಾರಿಗಳು ಸ್ಫೋಟದ ಸ್ಥಳಕ್ಕೆ ತೆರಳಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ನಿಲ್ಲಿಸಿದ್ದಾರೆ,
ಈ ವೇಳೆ ಸಂಘಟನೆಯ ಪದಾಧಿಕಾರಿಗಳು ಈ ವಿಚಾರ ನ್ಯಾಯಾಲಯದಲ್ಲಿದ್ದು ಆದರೂ ಕಾಮಗಾರಿ ನಡೆಸುತ್ತಿರುವುದೇಕೆ ಎಂದು ಗುತ್ತಿಗೆದಾರರು ಹಾಗೂ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹಾಗು ಜೆಸಿಬಿ ಅನ್ನು ತಡೆದು ನಿಲ್ಲಿಸಿದ್ದು, ನಿಮ್ಮ ಕೆಲಸಕ್ಕೆ ನಾವು ಅಡ್ಡಿ ಪಡಿಸುತ್ತಿಲ್ಲ, ಅವಶ್ಯಕತೆಯೂ ಇಲ್ಲ, ನ್ಯಾಯಾಲಯದಿಂದ ಕಾಮಗಾರಿಗೆ ತಡೆಯಾಗಿ ತಂದಿದ್ದರೂ ಸಹ ಆತುರಾತುರವಾಗಿ ಕಾಮಗಾರಿ ನಡೆಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ,
ಈಗಾಗಲೇ ಬಾರಿ ಸ್ಪೋಟಕ ಬಳಸಿ ಸ್ಫೋಟಕ ಮಾಡುವುದರಿಂದ ದೊಡ್ಡ ದೊಡ್ಡ ಕಲ್ಲುಗಳು ಚೂರುಚೂರಾಗಿವೆ, ಮುಟ್ಟಿದರೆ ಸಾಕು ಮಣ್ಣು ಕುಸಿಯುತ್ತಿದೆ. ಕಾಮಗಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಹಾನಿ ಮಾಡುವವಿಚಿತ್ರವಾದರೂ ಏನಿತ್ತು ಎಂದು ಕಡ್ಗ ಸಂಘಟನೆಯ ಮುಖಂಡರು ಪ್ರಶ್ನಿಸಿದ್ದಾರೆ.
ದಿನೇದಿನೇ ಮಣ್ಣು ಕುಸಿಯುತ್ತಿರುವುದರಿಂದ ಆತಂಕ ಹೆಚ್ಚಾಗುತ್ತಿದೆ. ಸೂಳೆಕೆರೆ ದಂಡೆ ಮೇಲಿರುವ ಗಿಡಗಳ ಮೇಲೆ ಕಲ್ಲು ಹಾಕಿದ್ದಾರೆ. ಇಂಜಿನಿಯರ್ ಶಿವಕುಮಾರ್ ಗಮನಕ್ಕೆ ತನ್ನಿ ಬಳಿಕ ಕೆಲಸ ಮಾಡಿ. ಅದನ್ನು ಬಿಟ್ಟು ರಸ್ತೆ ಅಗಲೀಕರಣ ನೆಪದಲ್ಲಿ ಬಾರಿ ಸ್ಫೋಟಗಳನ್ನು ಬಳಸಲಾಗುತ್ತಿದೆ ಇದರಿಂದ ಜನರು ಸಂಚರಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದು ಅನಾಹುತವಾದರೆ ಯಾರು ಎಂದು ಸಂಘಟನೆಯ ಮುಖಂಡರು ಪ್ರಶ್ನಿಸಿದ್ದಾರೆ