ಹರಿಹರದ ಎಸ್ ಜೆ ಸಿ ಪಿ ಎಸ್ ಶಾಲೆಯಲ್ಲಿ ಬೇಸಿಗೆ ಶಿಬಿರ
ದಾವಣಗೆರೆ :ಜಿಲ್ಲೆಯ ಹರಿಹರದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣದ ತರಬೇತಿಯನ್ನು ನೀಡುವ ಸಲುವಾಗಿ ಎಪ್ರಿಲ್ 1,ರಿಂದ ಜೂ 15 ರವರೆಗೆ 45 ದಿನಗಳ ಕಾಲ ಸಂಸ್ಥೆ ವತಿಯಿಂದ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಆರ್ ಟಿ ಪ್ರಶಾಂತ್ ದುಗ್ಗತ್ತಿ ಮಠ ತಿಳಿಸಿದರು.
ಶ್ರೀಶೈಲ ಜಗದ್ಗುರು ಡಾ. ಚೆನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ ಸೂಚನೆಯಂತೆ ಶ್ರೀಶೈಲ ನವೋದಯ (ಮುರಾರ್ಜಿ) ಕೋಚಿಂಗ್ ಸೆಂಟರ್ ಮತ್ತು ಬೇಸಿಗೆ ತರಬೇತಿ ಶಿಬಿರ ಕೇಂದ್ರ ಹರಿಹರದಲ್ಲಿ ಏ1,ರಿಂದ ಜೂ15,ವರೆಗೆ 45 ದಿನಗಳ ಕಾಲ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಬೇಸಿಗೆ ಶಿಬಿರದಲ್ಲಿ ಕನ್ನಡ, ಇಂಗ್ಲಿಷ್, ಸಂಸ್ಕೃತ, ಹಿಂದಿ ವಿಷಯಗಳ ವ್ಯಾಕರಣ ಅಧ್ಯಯನ ತರಗತಿಗಳು, ವಿಜ್ಞಾನ, ಗಣಿತ, ಇತಿಹಾಸದ ಮೂಲ ಅಂಶಗಳ ಅಧ್ಯಯನ ತರಗತಿಗಳು, ಧ್ಯಾನ, ಯೋಗ, ಕರಾಟೆ ಕಲಿಕಾ ತರಬೇತಿಗಳು. ವಿದ್ಯಾರ್ಥಿನಿಯರಿಗೆ ರಂಗೋಲಿ, ಮೇಹಂದಿ, ಚಿತ್ರಕಲೆ ಬಗ್ಗೆ ಕಲಿಕಾ ತರಬೇತಿಗಳು. ಸೈನಿಕ ಶಿಕ್ಷಣ ತರಬೇತಿಗಳು, ಕ್ರೀಡೆ, ಸಾಹಸ ಕ್ರೀಡೆಗಳ ಕಲಿಕಾ ತರಬೇತಿಗಳನ್ನು ನೀಡಲಾಗುತ್ತದೆ, ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಕೊನೆಗೆ ಒಂದು ದಿನದ ಪ್ರವಾಸ ಏರ್ಪಡಿಸಲಾಗುವುದು ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಸೃಜನಶೀಲತೆ ಅನಾವರಣಗೊಳಿಸಲು ವೇದಿಕೆ ಒದಗಿಸುವುದು ಶಿಬಿರದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಅನುಮೋದಿತ ಸಂಸ್ಥೆಯಾದ ಬಿ ಐ ಎಸ್ ಇ ಇವರ ಸಹಯೋಗದೊಂದಿಗೆ ವಯೋಮಿತಿ ಆಧಾರದ ಮೇಲೆ ನೇರವಾಗಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೇರ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ.
ತರಬೇತಿ ಪ್ರಾರಂಭವಾದ ದಿನದಿಂದ ,ನವೋದಯ (ಮುರಾರ್ಜಿ) ಪ್ರವೇಶ ಪರೀಕ್ಷೆ ಆರಂಭದವರಿಗೆ ತರಬೇತಿ ಕೊಡಲಾಗುವುದು, (ನಾಲ್ಕು ಮತ್ತು ಐದನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ) ಪ್ರತಿ ವಾರಕ್ಕೊಮ್ಮೆ ಕಿರುಪರೀಕ್ಷೆ ನಡೆಸಲಾಗುವುದು. ವಿಶಾಲವಾದ ಶಾಲಾ ಕೊಠಡಿಗಳು, ಅನುಭವ ಹೊಂದಿದ ಶಿಕ್ಷಕ ವೃಂದ ಹೊಂದಿದೆ ಎಂದು ಶಾಲೆಯ ಕಾರ್ಯದರ್ಶಿ ಆರ್ ಟಿ ಪ್ರಶಾಂತ್ ದುಗ್ಗತ್ತಿಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.